ಶರೀರ ಸದೃಢವಾಗಿ ಇರಲು ಯೋಗ ಸಂಜೀವಿನಿ ಬೇಕು: ಭವರಲಾಲ್ ಆರ್ಯ

Yoga Sanjeevini is needed to keep the body strong: Bhavarlal Arya

ಸಂಕೇಶ್ವರ 08: ಪ್ರತಿಯೊಬ್ಬ ಮನುಷ್ಯನಿಗೆ ಗೆಲ್ಲುವ ಆಸೆ ಇರುತ್ತದೆ. ಸಾಧನೆ ಮಾಡಬೇಕೆಂದು ಹುಮ್ಮಸ್ಸು ಇರುತ್ತದೆ. ಕೀರ್ತಿಗಳಿಸಬೇಕೆಂಬ ಛಲ ಇರುತ್ತದೆ. ದುಡ್ಡು ಗಳಿಸಬೇಕೆಂದು ಜೀವನದ ಹೋರಾಟ ಇರುತ್ತದೆ. ಇದೆಲ್ಲ ಆಗಬೇಕಾದರೆ ಮುಖ್ಯವಾದ ನಮಗೆ ಬೇಕಾದದ್ದು ಅರೋಗ್ಯ. ಜೀವನದಲ್ಲಿ ಏನೆಲ್ಲಾ ಕಳೆದುಕೊಂಡರೆ ಮತ್ತೆ ಪಡೆಯಬಹುದು. ಆದರೆ ಆರೋಗ್ಯವನ್ನು ಕಳೆದುಕೊಂಡರೆ ಮರಳಿ ಪಡೆಯುವುದು ತುಂಬಾ ಕಷ್ಟ. ಶರೀರ ಕೊನೆಯ ತನಕ ಸದೃಢವಾಗಿ ಇಟ್ಟುಕೊಳ್ಳಬೇಕಾದರೆ ಒಂದು ಸಂಜೀವಿನಿ ಓಷಧ ಬೇಕೇ ಬೇಕು. ಆ ಸಂಜೀವಿನಿ ಓಷಧವೇ ಯೋಗ ಎಂದು ಕರ್ನಾಟಕದ ಪತಂಜಲಿ ಪ್ರಭಾರಿ ಭವರಲಾಲ್ ಆರ್ಯ ಅವರು ಹೇಳಿದರು.  

ಪಟ್ಟಣದಲ್ಲಿ ಇತಿಚೇಗೆ ಪತಂಜಲಿ ಯೋಗ ಪೀಠ ಹರಿದ್ವಾರ ಹಾಗೂ ಒಂದೇ ಮಾತರಂ ಯೋಗ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಜರುಗಿದ "ಯೋಗ ಶಿಕ್ಷಕರ ತರಬೇತಿ ಶಿಬಿರದ" ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಅವರು ಮಾತನಾಡಿದರು. ಯೋಗದಲ್ಲಿ ಆಸನ, ಪ್ರಾಣಾಯಾಮ, ಧ್ಯಾನ ಮಾಡುತ್ತಾ ಸಾಗಿದರೆ ಮನುಷ್ಯನಲ್ಲಿ ತೇಜಸ್ಸನ್ನು ನೋಡಬಹುದು. ಆಸನದಿಂದ ಶರೀರದ ಅಂಗಾಂಗಗಳನ್ನು ಸೌಂದರ್ಯಗೊಳಿಸಬಹುದು. ಪ್ರಾಣಾಯಮದಿಂದ ಶ್ವಾಸಕೋಶಗಳನ್ನು ಹಾಗೂ ಉಸಿರಾಟದ ಕ್ರಿಯೆಯನ್ನು ಸದೃಢಗೊಳಿಸಬಹುದು. ಧ್ಯಾನದಿಂದ ದೇಹದ ಚೈತನ್ಯ, ರೋಗನಿರೋಧಕ ಶಕ್ತಿ, ಜೀವನ ದೃಷ್ಟಿ, ಆತ್ಮ ತೃಪ್ತಿ, ಆತ್ಮಸ್ಥೈರ್ಯ, ತಾಳ್ಮೆ ಮತ್ತು ಮನಶಾಂತಿಯನ್ನು ಪಡೆಯಬಹುದೆಂದು ಶಿಬಿರದ ಶಿರಾರ್ಥಿಗಳಿಗೆ ಕರೆ ಕೊಟ್ಟರು. ಯೋಗದಿಂದ ಸತ್ಯ ಸಾಕ್ಷಾತ್ಕಾರ ಮತ್ತು ಆತ್ಮ ಸಾಕ್ಷಾತ್ಕಾರವಾಗುತ್ತದೆ ಎಂದು ಗೊತ್ತಾಗಬೇಕಾದರೆ ಯೋಗದ ಮೊರೆ ಹೋಗಬೇಕು ಎಂದು ತಿಳಿಸಿದರು.  

ಇದೇ ಸಂದರ್ಭದಲ್ಲಿ 93 ಆಪ್ಲೈನ್ 34 ಆನ್ ಲೈನ್ ಶಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಿದರು. ಪತಂಜಲಿ ಪ್ರಭಾರಿ ಕಿರಣ್ ಮನ್ನೋಳಿಕರ ಅವರು ಮಾತನಾಡಿ, ಸರ್ಟಿಫಿಕೇಟ್ ಪಡೆದ ಯೋಗ ಶಿಬಿರಾರ್ಥಿಗಳು ನಿಂತ ನೀರಾಗಬಾರದು ಹರಿಯುವ ನೀರಾಗಬೇಕು. ಕಲೆತ ಶಿಕ್ಷಣವನ್ನು ಬಚ್ಚಿಟ್ಟುಕೊಂಡರೆ ಅಪರಾಧ. ಕಲಿತ ಜ್ಞಾನವನ್ನು ಆರಳಿಸಿ ಪಸರಿಸಿದರೆ ಭಗವಂತನ ಕಾರ್ಯ ಮಾಡಿದಂತಾಗುತ್ತದೆ. ಹಾಗಾಗಿ ಯೋಗ ಕಲಿತ ಶಿಬಿರಾರ್ಥಿಗಳು ನೂರಾರು ಜನರ ಆರೋಗ್ಯಕ್ಕೆ ದಾರಿ ದೀಪವಾಗಬೇಕು ಎಂದರು.   

ಇದೇ ಸಂದರ್ಭದಲ್ಲಿ ಪತಂಜಲಿಯ ಕಿಸಾನ್ ಪ್ರಭಾರಿ ಸಂಜಯ್ ಕುಸ್ತಿಗಾರವರು ಮಾತನಾಡಿ, ಕೆಲಸಗಳ ಬದಲಾವಣೆಯೇ ವಿಶ್ರಾಂತಿ ಎನ್ನುವ ಹಾಗೆ ಆಸನಗಳ ಬದಲಾವಣೆಯೇ ವಿಶ್ರಾಂತಿ ಎನ್ನುವ ರೀತಿಯಲ್ಲಿ ಪ್ರತಿದಿನ ಒಂದೂವರೆ ಗಂಟೆ ವಿರಮಿತವಾಗಿ ಯೋಗ ಮಾಡಬೇಕು ಎಂದು ಹೇಳಿದರು.  

ಸಂಕೇಶ್ವರದ ವಂದೇ ಮಾತರಂ ಯೋಗ ಕೇಂದ್ರದ ಮುಖ್ಯ ಯೋಗ ಶಿಕ್ಷಕ ಅಜೇಯ್ ಸಾರಾಪುರೆ ಮಾತನಾಡಿ, ಪತಂಜಲಿ ಪ್ರಭಾರಿ ಭವರಲಾಲ್ ಆರ್ಯ ಗುರೂಜಿ ಅವರ ಆಶಯದಂತೆ ಯೋಗಮಯ ಕರ್ನಾಟಕ ಅಭಿಯಾನದ ಅಡಿಯಲ್ಲಿ 25 ದಿನಗಳ ಕಾಲ ಯೋಗ ತರಬೇತಿ ಹಮ್ಮಿಕೊಂಡಿದ್ದು ನಮ್ಮ ವಂದೇ ಮಾತರಂ ಯೋಗಾ ಕೇಂದ್ರದ ಪುಣ್ಯವೇ ಸರಿ. ಸುಧೀರ್ಘ ಜ್ಞಾನ ದಾಸೋಹದೊಂದಿಗೆ ಶ್ರೇಷ್ಠ ಕಾಯಕ ಯೋಗ ಶಿಬಿರವನ್ನು ಮುಗಿಸಿ, ಇನ್ನೊಂದು ಶ್ರೇಷ್ಠ ಸಾಧನೆಯತ್ತ ಮುಖ ಮಾಡುವುದೇ ಯೋಗ ಶಿಕ್ಷಕನ ಮುಖ್ಯ ಗುರಿಯಾಗಿರಬೇಕೆಂದು ತಿಳಿಸಿದರು. ಎಷ್ಟೇ ಕಷ್ಟ ಬರಲಿ ಅವಮಾನಗಳು ಆಗಲಿ, ತೊಂದರೆ ಅನುಭವಿಸಿದರು ಹಿಡಿದ ಛಲವನ್ನು ಮಾತ್ರ ಬಿಡಬಾರದು. ಇದಕ್ಕೆ ಸತ್ಯ ಸಾಕ್ಷಿ ಎಂದರೆ 25 ದಿನಗಳ ಕಾಲ ಶಿಕ್ಷಕರ ತರಬೇತಿ ಶಿಬಿರ ಯಶಸ್ವಿಯಾದದ್ದು ಎಂದು ತಿಳಿಸಿದರು.  

ಪ್ರಥಮ ಬಾರಿಗೆ ಸಂಕೇಶ್ವರ ನಗರದಲ್ಲಿ ಶ್ರವಣ್ ನೇಸರಿ, ಅಜೇಯ ಸಾರಾಪುರೆ ಮತ್ತು ಸತೀಶ್ ನಾಯ್ಕ್‌ ಅವರಿಗೆ ಪತಂಜಲಿ ಯೋಗ ಪೀಠದಿಂದ ಸಾಮಾಜಿಕ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪತಂಜಲಿಯ ಪ್ರಭಾರಿಗಳಾದ ಮೋಹನ್ ಬಾಗೇವಾಡಿ, ನಿಂಬಾಳ್ಕರ್, ಹೊಳೆಪ್ಪಗೋಳ, ಬಾಲಕೃಷ್ಣ ಕೋಳಿಕರ್, ಕುಮಾರ ಬಡಿಗೇರ್, ರಾಜು ಖಾನೋರಿ, ಚಂದ್ರಶೇಖರ್ ಗಾವಡೆ, ಕಾಡಪ್ಪ ಬಸ್ತವಾಡಿ, ರಾಜು ಸುತಾರ್, ಕಿರಣ್ ಕಿವಂಡಾ, ಸೋಮ್ ಕೇಸ್ತಿ, ರಮೇಶ್ ಚಿಂಚಣಿ, ಶಿವ ಮಂಟೂರಿ, ಪ್ರಮೋದ್ ಆಡಿ, ನಾಗರಾಜ್ ಹಾದಿಮನಿ, ಮಹದೇವಿ ಬಸ್ಥಾಡಿ, ಸಂಗೀತ ಗೀಜುವನೇ, ಸುಪ್ರಿಯಾ ಸಾರಾಪುರೆ, ಶುಭಾಂಗಿ ಸುತಾರ್, ಕೌಶಲ್ಯ ಕುಡೋಲಿ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.