ತಾಳಿಕೋಟಿ: ನಿಮ್ಮ ಸೇವೆ ಮಾಡುವ ಅವಕಾಶ ನೀಡಿ: ಸುನೀತಾ

ಲೋಕದರ್ಶನ ವರದಿ

ತಾಳಿಕೋಟಿ 19: ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಸುಮಾರು 20 ವರ್ಷಗಳ ನಂತರ ಒಬ್ಬ ಮಹಿಳಿಗೆಸ್ಪರ್ದಿಸುವ  ಅವಕಾಶ ಸಿಕ್ಕಿದೆ. ಮೈತ್ರಿ ಪಕ್ಷಗಳು ನನಗೆ ಟಿಕೆಟ್ ನೀಡಿ ಸೇವೆಯ ಅವಕಾಶ ನೀಡಿವೆ ಅಲ್ಪಸಂಖ್ಯಾತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸುವುದರ ಮೂಲಕ ನನಗೆ ಜಿಲ್ಲೆಯ ಸರ್ವಾಂಗೀಣ  ಅಭಿವೃದ್ಧಿಗಾಗಿ ಶ್ರಮಿಸುವ ಅವಕಾಶ ನೀಡಬೇಕೆಂದು ಮೈತ್ರಿ ಪಕ್ಷದ ಅಭ್ಯಥರ್ಿ ಡಾ.ಸುನೀತಾ ಚವ್ಹಾಣ ತಿಳಿಸಿದರು.

ಪಟ್ಟಣದಲ್ಲಿ ಅಲ್ಪಸಂಖ್ಯಾತ ಸಮಾಜದಿಂದ ಆಯೋಜಿಸಿದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ನನಗೆ ನೀಡಿದ ಪ್ರೀತಿ, ಗೌರವ ಹಾಗೂ ವಿಶ್ವಾಸಕ್ಕೆ ನಾನು ಚಿರಋಣಿ. ಈ ಜಿಲ್ಲೆಯಲ್ಲಿ ಹುಟ್ಟಿದ ನಾನು ಜಿಲ್ಲೆಯ ಅಭಿವೃದ್ಧಗಾಗಿ ಏನಾದರೂ ಮಾಡಬೇಕೆಂಬ ಮಹದಾಸೆ ಹೊಂದಿರುವೆ. ನಿಮ್ಮ ಮನೆಯ ಮಗಳೆಂದು ಭಾವಿಸಿ ಅಭಿವೃದ್ಧಿಗಾಗಿ ಹೋರಾಡುತ್ತೇನೆ. ಎಂದುರು. 

ಸಭೆಯ ಸಾನಿಧ್ಯವನ್ನು ಜಿಲ್ಲಾ ವಕ್ಪ್ ಸಮೀತಿ ಉಪಾಧ್ಯಕ್ಷ ಸೈಯದ್ ಶಕೀಲ ಅಹ್ಮದ ಖಾಜಿವಹಿಸಿದ್ದರು.

ಸಮಾಜದ ಮುಖಂಡ ಖಾಜಾಹುಸೇನ ಡೋಣಿ, ಮಾಜಿ ಮೇಯರ ಸಜ್ಜಾದೆಪೀರಾ ಮುಶ್ರೀಫ, ನ್ಯಾಯವಾದಿ ಎಂ.ಕೆ.ಕೆಂಭಾವಿ, ಆದಮಸಾಬ ಅತ್ತಾರ, ಮಾಸೂಮಸಾಬ ಕೆಂಭಾವಿ, ಅಬ್ದುಲಸತ್ತಾರ ಅವಟಿ, ಇಬ್ರಾಹೀಂ ಮನ್ಸೂರ, ಶಮಸುದ್ದೀನ ನಾಲಬಂದ, ಮೀರು ಬ್ಯಾಗವಾಟ್, ಸಿಕಂದರ ಡೋಣಿ, ಮಂಜೂರಅಲಿ ಬೇಪಾರಿ, ಅಬ್ದುಲರಜಾಕ ಮನಗೂಳಿ, ರಜಾಕಸಾಬ ಮನಿಯಾರ, ಫಯಾಜ್ ಉತ್ನಾಳ, ನದೀಂ ಕಡು, ಸಿಕಂದರ ವಠಾರ, ರಾಜಅಹ್ಮದ ಒಂಟಿ, ಗೌಸ್ನಾಸೀರ, ಮೈಬೂಬ ಕೆಂಭಾವಿ, ಖಾಸಿಮ ಅವಟಿ, ಸದ್ದಾಂ ಹೊನ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು