ತಾಳಿಕೋಟಿ: ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ: ಡೋಣಿ

ಲೋಕದರ್ಶನ ವರದಿ

ತಾಳಿಕೋಟಿ 25: ಯಾವುದೇ ಒಂದು ಸಮಾಜವು ಸರ್ವಾಗೀಣ ಅಭಿವೃದ್ಧಿ ಕಾಣಬೇಕಾದರೆ ಸಮಾಜದಲ್ಲಿರುವ ಜನರ ಮಧ್ಯೆ ಪರಸ್ಪರ ಸಹಕಾರ ಹಾಗೂ ಒಗ್ಗಟ್ಟು ಇರುವುದು ಅತ್ಯಗತ್ಯವಾಗಿದೆ ಎಂದು ಈದ್ಗಾ ಶಾದಿಮಹಲ್ ಶಾಪಿಂಗ್ ಕಾಂಪ್ಲೆಕ್ಸ್ ಕಮೀಟಿ ಅಧ್ಯಕ್ಷ ಖಾಜಾಹುಸೇನ ಡೋಣಿ ತಿಳಿಸಿದರು.

ಬುಧವಾರದಂದು ಪಟ್ಟಣದ ಈದ್ಗಾ ಶಾದಿಮಹಲ್ನಲ್ಲಿ ಜರುಗಿದ ಶಾದಿಮಹಲ್ ಶಾಪಿಂಗ್ ಕಾಂಪ್ಲೆಕ್ಸ್ ಕಮೀಟಿ ಸದಸ್ಯರ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸನ್ 2006ರಲ್ಲಿ ಸ್ಥಾಪನಗೊಂಡ ಈ ಸಂಸ್ಥೆಯು ಕೇವಲ 13 ವರ್ಷಗಳ ಅವಧಿಯಲ್ಲಿ ಗಣನೀಯವಾದ ಪ್ರಗತಿಯನ್ನು ಸಾಧಿಸಿದೆ ಇದಕ್ಕೆ ಸುಮಾರು 1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಭವ್ಯ ಶಾದಿಮಹಲ್ಯೆ ಸಾಕ್ಷಿಯಾಗಿದೆ. ಸರಕಾರದಿಂದ ಇನ್ನು ಹೆಚ್ಚಿನ ಅನುದಾನವನ್ನು ಪಡೆದು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗುವುದು ಸಂಸ್ಥೆಗೆ ಸಿಗುವ ಆದಾಯದಲ್ಲಿ 30% ರಷ್ಟು ಬಡ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.

ಕಾರ್ಯದಶರ್ಿ ಅಬ್ದುಲ್ರಹೆಮಾನ ಎಕೀನ ಪ್ರಸ್ತಾವಿಕವಾಗಿ ಮಾತನಾಡಿದರು.

ಆಡಳಿತ ಮಂಡಳಿಯ ಸದಸ್ಯರಾದ ಗನಿಸಾಬ ಲಾಹೋರಿ, ಮಾಸೂಮ್ಸಾಬ ಕೆಂಭಾವಿ, ಮುಬಾಜುದ್ದೀನ ಮಕಾನದಾರ, ಮುರ್ತಜಾಸಾಬ ಮೇತ್ರಿ, ಅಬ್ದುಲ್ಸತ್ತಾರ ಅವಟಿ, ಅಬ್ದುಲ್ಕರೀಂಸಾಬ ಬಾಗವಾನ, ಸೈದುಬಾಯಿ ಕಟ್ಟಗಿ, ಸಿಕಂದರ ವಠಾರ, ಯೂಸೂಫ ಮುಲ್ಲಾ, ಮಹ್ಮದರಫೀಕ ಮನ್ಸೂರ, ಮಂಜೂರಅಹ್ಮದ ಬೇಪಾರಿ, ಖಾಜಾಹುಸೇನ ಮುಲ್ಲಾ, ಮಹ್ಮದ್ ಆನೇಸೂರ, ಅಮೀನಸಾ ನಿಡಗುಂದಿ, ಗುಲಾಂನಬಿ ಗೋಗಿ, ಕಾಶೀಮ ಆಬಾಲೆ ಮುಂತಾದವರು ಉಪಸ್ಥಿತರಿದ್ದರು.

ಜಾಮೀಯಾ ಮಸ್ಜಿದ್ ಲ್ಲಾಬಕ್ಷ ನಮಾಜಕಟ್ಟಿ ಕುರ್ಆನ್ ಪಠಿಸಿದರು. ಅಬ್ದುಲ್ರಜಾಕ ಮನಗೂಲಿ ಸ್ವಾಗತಿಸಿದರು, ಮಂಜೂರ ಅಹ್ಮದ ಬೇಪಾರಿ ವಂದಿಸಿದರು. ಅಬ್ದುಲ್ಗನಿ ಮಕಾನದಾರ ನಿರೂಪಿಸಿದರು.