ವಿದ್ಯಾಥರ್ಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆಯಿರಿ: ಪ್ರಕಾಶಾನಂದ ಶ್ರೀ


ಬೆಳಗಾವಿ 01: ಜನಪದ, ಸಂಗೀತ, ನಾಟಕ, ಸಾಹಿತ್ಯ ಇವು ನಮ್ಮ ನಾಡಿನ ಸಂಸ್ಕೃತಿಕ ಕಲೆಗಳು ಹಾಗೂ ರಸಮಂಜರಿ ಕಾರ್ಯಕ್ರಮಗಳು ಹೌದು. ಈಗಿನ ತಂತ್ರಜ್ಞಾನ ಅನುಗುಣವಾಗಿ ವಿದ್ಯಾಥರ್ಿಗಳು ಮೋಬೈಲ್, ಸಿನಿಮಾ ಅಂತ ನಾಡಿನ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಉಮಾ ಸಂಗೀತ ಪ್ರತಿಷ್ಠಾನದಿಂದ ಇಂತಹ ಕಾರ್ಯಕ್ರಮಗಳು ನಡೆದರೆ ಮಾತ್ರ ನಮ್ಮ  ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಆಶ್ರಮದ ಚಿತ್ ಪ್ರಕಾಶಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಹಿಂದವಾಡಿಯಲ್ಲಿ ಸೋಮವಾರ 30ರಂದು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಮಂಡೊಳೀ ರೋಡ್ದಲ್ಲಿರುವ ಅರ್ಷವಿದ್ಯಾ ಆಶ್ರಮದಲ್ಲಿ ಗುರುಪೂಣರ್ಿಮೆ ನಿಮಿತ್ಯ ಆಯೋಜಿಸಲಾಗಿದ್ದ ತಿಂಗಳ ಗಾನ ಸುಧೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಥರ್ಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಇಂತಹ ಸಂಗೀತ ಲೋಕವನ್ನು ಅರಗಿಸಿ ಕುಡಿಯಬಹುದು. ಸಂಗೀತ ಜನಪದ,  ನಾಟಕ,  ಬೆಳೆದರೆ ಸಂಸ್ಕೃತಿಯು ಬೆಳೆದಂತಾಗುತ್ತದೆ ಎಂದರು.

ಪ್ರಸಿದ್ಧ ಸಂಗೀತಗಾರ ಯಾದವೇಂದ್ರ ಪೂಜಾರಿ, ತಬಲಾವಾದಕ  ಸತೀಶ ಗಚ್ಚಿ ಹಾಗೂ ಭರತ ನಾಟ್ಯ ಪ್ರವೀಣೆ ಹಾಗು ಗುರುವಾದ ಪ್ರೇಮಾ ಉಪಾಧ್ಯೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.    

ಮಂಗಲಾ ಮಠದ ಸ್ವಾಗತಿಸಿದರು. ಅನಿತಾ ಜಕ್ಕನ್ನವರ ಅತಿಥಿ ಪರಿಚಯಿಸಿದರು. ವಿದ್ಯಾಥರ್ಿಗಳು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗೀತಾ ಎಮ್ಮಿ ಹಾಗು ರತ್ನಶ್ರೀ ಗುಡೇರ ನಿರೂಪಿಸಿದರು. ಮಮತಾ ಅಂಟಿನ ವಂದಿಸಿದರು.