ಈಜಲು ಹೋದ ನಾಲ್ಕು ವಿದ್ಯಾಥರ್ಿಗಳ ಸಾವು

ಬೆಳಗಾವಿ, ನಗರ ಹೊರವಲಯದ ಸಾವಗಾಂವ ಬಳಿಯ ಕೆರೆಯೊಂದರಲ್ಲಿ ಈಜಲು ಹೋಗಿದ್ದ ನಾಲ್ವರು ಹದಿಹರೆಯದ ಹುಡುಗರು ಇಂದು ಜಲಸಮಾಧಿಯಾಗಿದ್ದಾರೆ. ಹುಡುಗರ ಬಟ್ಟೆಗಳು ಕೆರೆಯ ದಂಡೆಯಲ್ಲಿ ಕಂಡು ಬಂದದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಬೆನಕನಹಳ್ಳಿ ನಿವಾಸಿ ಸಾಹಿಲ್ ಯುವರಾಜ ಬೆನಕೆ (15), ಭಾಗ್ಯನಗರದ ಚೈತನ್ಯ ಭಾಂದುಗರ್ೆ (16), ಗಣೇಶಪುರದ ಅಮನ್ ಸಿಂಗ್ (14) ಹಾಗೂ ಶಹಾಪೂರದ ಗೌತಮ ಕಲಘಟಗಿ (15) ಎಂದು ಗುರುತಿಸಲಾಗಿದೆ.

ಈ ನಾಲ್ವರೂ ಗೆಳೆಯರು ಖಾಸಗಿ ಶಾಲೆಯೊಂದರಲ್ಲಿ ಹತ್ತನೇ ವರ್ಗದಲ್ಲಿ ಕಲಿಯುತ್ತಿದ್ದರು. ಬೆಳಗಾವಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.