ವಿದ್ಯಾಥರ್ಿಗಳಿಗೆ ದುಷ್ಚಟದಿಂದ ದೂರವಿರಲು ಸಲಹೆ

ಧಾರವಾಡ 04:  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ(ರಿ) ಧಾರವಾಡ ತಾಲೂಕು, ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ ಧಾರವಾಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಮಾನಸಗಂಗಾ ಫ್ರೌಢ ಶಾಲೆ ನಾರಾಯಣಪುರದಲ್ಲಿ ದಿ. 03ರಂದು  ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ನೇರವೇರಿಸಲಾಯಿತು. ಉದ್ಘಾಟನೆಯನ್ನು ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ ಸದಸ್ಯರಾದ ವಸಂತ ಅಕರ್ಾಚಾರಿ ಇವರು ಸಸಿ ನೆಡುವ ಮೂಲಕ ನೆರವೇರಿಸಿದರು. ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ತಿಳಿಸಿ ವಿಧ್ಯಾಥರ್ಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞೆ ಬೋಧಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಎಸ್.ಎಸ್. ಜಾಧವ ವಹಿಸಿದ್ದರು.

ವಲಯ ಮೇಲ್ವಿಚಾರಕರಾದ ಶಿವಲೀಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಿಗೆ ನಶೆ ಎಂಬ ನರಕ ಎಂಬ ಕಿರುಚಿತ್ರ ಪ್ರದಶರ್ಿಸಲಾಯಿತು.