ಕಾನೂನು ಸಾಕ್ಷರತಾ ಜಾಥ ಅಭಿಯಾನಕ್ಕೆ ಚಾಲನೆ


ಸಿದ್ದಾಪುರ; ನಾಲ್ಕು ದಿನಗಳಕಾಲ ತಾಲೂಕಿನ ವಿವಿಧೆಡೆ ನಡೆಯುವ ಕಾನೂನು ಸಾಕ್ಷರತಾ ಜಾಥ ಹಾಗೂ ಜನತಾ ನ್ಯಾಯಾಲಯ ಅಭಿಯಾನಕ್ಕೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಸುನಿತಾ ಚಾಲನೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನ ಮನೆ, ಉಪಾಧ್ಯಕ್ಷ ಎಂ. ಡಿ.ನಾಯ್ಕ.  ತಾಲುಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆರ್,ನಾಯ್ಕ, ಸಹಾಯಕ ಸಕರ್ಾರಿ ಅಭಿಯೋಜಕ ಚಂದ್ರಶೇಖರ್ ಎಚ್.ಎಸ್, ವಲಯಾರಣ್ಯಾಧಿಕಾರಿ ಲೋಕೇಶ ಪಾಠಣ್ಕರ್ ಇದ್ದರು.