ಚಿಕ್ಕೋಡಿ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತು ಭಾರತೀಯ ಯೋಧರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ವೀರಮರಣಪ್ಪಿದ್ದ ಕನ್ನಡಿಗ ಪ್ರಕಾಶ ಪುಂಡಲೀಕ ಜಾಧವ(29) ಅವರ ಪಾಥರ್ಿವ ಶರೀರ ಗುರುವಾರ ಬೆಳಿಗ್ಗೆ ಸ್ವಗ್ರಾಮಕ್ಕೆ ಆಗಮಿಸಿದೆ.
ನೆರೆದ ಜನರಲ್ಲಿ ಮಿಂಚಿನ ಸಂಚಲನವಾಯಿತು. ದೇಶ ಕಾಯುವಾಗ ಹುತಾತ್ಮನಾದ ವೀರಯೋಧನ ದರ್ಶನ ಪಡೆಯಲು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಜಮ್ಮು ಕಾಶ್ಮೀರದ ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಯ ಗಡಿ ಭಾಗದಲ್ಲಿ ಉಗ್ರರು ಮತ್ತು ಭಾರತೀಯ ಯೋಧರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಸಮೀಪದಲ್ಲಿ ಬರುವ ಬೂದಿಹಾಳ ಗ್ರಾಮದ ವೀರಯೋಧ ಪ್ರಕಾಶ ಪುಂಡಲೀಕ ಜಾಧವ ಅವರು ಕಳೆದ ಮಂಗಳವಾರ ಹುತಾತ್ಮರಾಗಿದ್ದರು. ಭಾರತೀಯ ಸೇನೆಯು ಈ ವಿಷಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದಾಗ ಜಾಧವ ಕುಟುಂಬ ಮೂರು ದಿನಗಳಿಂದ ಅನ್ನ ನೀರು ಸೇವಿಸದೇ ಮಗನ ಮುಖ ನೋಡಲು ದು:ಖ ಭರಿತರಾಗಿ ಕಾತುರರಾಗಿದ್ದರು. ಇಡೀ ಗ್ರಾಮವೇ ಸ್ಮಶಾನದ ಹಾಗೇ ಮೌನದ ವಾತಾವರಣ ನಿಮರ್ಾಣವಾಗಿತ್ತು.
ಜಮ್ಮು-ಕಾಶ್ಮೀರದಿಂದ ದಿಲ್ಲಿ ಮೂಲಕ ವೀರಯೋಧನ ಪಾಥರ್ಿವ ಶರೀರ ಬುಧವಾರ ರಾತ್ರಿ ಬೆಳಗಾವಿಗೆ ಅಗಮಿಸಿತು. ಬೆಳಗಾವಿ ಮರಾಠಾ ಲೈಟ್ ಇನ್ಪ್ರಂಟ್ದಲ್ಲಿ ನಮನ ಸಲ್ಲಿಸಿ ಅಲ್ಲಿಂದ ನಿಪ್ಪಾಣಿ ಮಾರ್ಗವಾಗಿ ಬೂದಿಹಾಳ ಗ್ರಾಮಕ್ಕೆ ಆಗಮಿಸಿತು. ಆಗ ಸೇರಿದ ಸಾವಿರಾರು ಸಂಖ್ಯೆ ಜನತೆಯ ಕಣ್ಣುಗಳಲ್ಲಿ ಹನಿ ಗೂಡಿದ್ದವು. ಯೋಧನ ಮನೆಗೆ ಪಾಥರ್ಿವ ಶರೀರ ಬರುತ್ತಿದ್ದಂತೆ ಕುಟುಂಬದ ಸದಸ್ಯರು ಬೋರಾಡಿ ಅತ್ತಿರುವ ದೃಶ್ಯ ಮನಕರಗುವಂತಿತ್ತು.
ಬೃಹತ್ ಮೆರವಣಿಗೆ: ವೀರಯೋಧನ ಪಾಥರ್ಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಬೂದಿಹಾಳ, ಯಮಗಣರ್ಿ ಗ್ರಾಮದಲ್ಲಿ ವೀರಯೋಧನ ಪಾಥರ್ಿವ ಶರೀರ ಭವ್ಯ ಮೆರವಣಿಗೆ ನಡೆಸಿದರು. ವಿವಿಧ ಶಾಲಾ ಕಾಲೇಜುಗಳ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು, ಎನ್ಸಿಸಿ ವಿದ್ಯಾಥರ್ಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರಕಾಶ ಜಾಧವ ಅಮರ ಹೇ.ಅಮರ ಹೇ ಮತ್ತು ಬೋಲೋ ಭಾರತ ಮಾತಾಕಿ ಜೈ ಎಂಬ ಜಯ ಘೋಷಣೆ ಕೂಗುವ ದೃಶ್ಯ ಸಾಮಾನ್ಯವಾಗಿತ್ತು.
ಈ ಸಂದರ್ಭದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ವೀರಯೋಧ ಪ್ರಕಾಶ ಜಾಧವ ಚಿಕ್ಕ ವಯಸ್ಸಿನಲ್ಲಿ ಹುತಾತ್ಮರಾಗಿರುವುದು ಅತೀವ ದು:ಖ ಭರಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಚಚರ್ೆ ಮಾಡುವಾಗ ಮುಖ್ಯಮಂತ್ರಿಗಳು 45 ಲಕ್ಷ ರೂ ಹಣವನ್ನು ಜಾಧವ ಕುಟುಂಬಕ್ಕೆ ತಕ್ಷಣ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ. ದೇಶ ಕಾಯುವಾಗ ಗುಂಡು ತಗುಲಿ ಹುತಾತ್ಮರಾದ ವೀರಯೋಧ ಪ್ರಕಾಶ ಜಾಧವ ಕುಟುಂಬದ ಹಿಂದೆ ನಾವು ಇದ್ದೇವೆ. ದು:ಖ ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಕೊಡಬೇಕು ಮತ್ತು ಪ್ರಕಾಶ ಜಾಧವ ಅವರ ಮೂರು ತಿಂಗಳ ಹೆಣ್ಣು ಮಗಳ ಇಡೀ ಶಿಕ್ಷಣವನ್ನು ಜೊಲ್ಲೆ ಉದ್ಯೋಗ ನೀಡಲಿದೆ ಎಂದರು.
ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ವೀರಕುಮಾರ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾಜಿ ನಗರಾಧ್ಯಕ್ಷ ವಿಲಾಸ ಗಾಡಿವಡ್ಡರ, ಅಪರ ಜಿಲ್ಲಾಧಿಕಾರಿ ಡಾ,ಎಚ್.ಬಿ.ಬೂದೆಪ್ಪ, ಎಸ್ಪಿ ಸುಧೀರಕುಮಾರ ರೇಡ್ಡಿ, ಚಿಕ್ಕೋಡಿ ಎಎಸ್ಪಿ ಮಿಥುನಕುಮಾರ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ ಎಂ.ಎನ್.ಬಣಸಿ ಮತ್ತು ಸೇನೆ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದರು.
ಮೃತ ವೀರಯೋಧ ಪ್ರಕಾಶ ಜಾಧವ ಅವರಿಗೆ ಮೊದಲು ಪೊಲೀಸ್ರಿಂದ ಗುಂಡು ಹಾರಿಸಿ ನಮನ ಸಲ್ಲಿಸಿದರು. ಬಳಿಕ ಯೋಧರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ನಂತರ ಅಂತ್ಯಕ್ರಿಯೆ ನಡೆಯಿತು.