ಸಿಂದಗಿ: ಯುವತಿ ಕೊಲೆ ಆರೋಪಿತರಿಗೆ ಶಿಕ್ಷೆ ನೀಡುವಂತೆ ಮನವಿ

ಲೋಕದರ್ಶನ ವರದಿ

ಸಿಂದಗಿ 02: ದೇವರ ಹಿಪ್ಪರಗಿ ತಾಲೂಕಿನ ಅಸಂತಾಪು ಗ್ರಾಮದ ಯುವತಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ತಾಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ಕರೆ ನೀಡಿದ ಹಿನ್ನಲೆಯಲ್ಲಿ ತಾಲೂಕಿನ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಮಹಿಳೆಯರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೆಲ ಕಾಲ ರಸ್ತೆ ಬಂದ ಮಾಡಿ ಪ್ರತಿಭಟನೆ ನಡೆಸಿದರು. ಟಾಯರಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಷ ವ್ಯಕ್ತ ಪಡೆಸಿದರು. 

ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ಮುಖಂಡರಾದ ರಾಜಕುಮಾರ ಭಾಸಗಿ, ಸಾಯಬಣ್ಣ ದೇವರಮನಿ, ಯಲ್ಲು ಇಂಗಳಗಿ, ರಾಜು ಗುಬ್ಬೇವಾಡ, ಸುನಂದಾ ಯಂಪೂರೆ, ಸರಸ್ವತಿ ಮಠ, ಅಯ್ಯಮ್ಮ ಸಿಂದಗಿ, ಗಂಗು ಜಾಲವಾದಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾಕಾರರು ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರ ಮೂಲಕ ರಾಜ್ಯ ಸರಕಾರದ ಗೃಹಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.