ಗುಳೇದಗುಡ್ಡ05: ಲೋಕೊಪಯೋಗಿ ಇಲಾಖೆ ವತಿಯಿಂದ 1.69 ಕೋಟಿ ಲಕ್ಷ ವೆಚ್ಚದಲ್ಲಿ ತಾಲೂಕಿನ ಕೆಲವಡಿ ಪರಿಮಿತಿಯಲ್ಲಿ ರಂಗನಾಥ ದೇವಸ್ಥಾನದಿಂದ ಜಿಲ್ಲಾ ಮುಖ್ಯ ರಸ್ತೆಗೆ ಸಿಸಿ ರಸ್ತೆ ಹಾಗೂ ಆರ್.ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಮಾಜಿಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯನವರು ಚಾಲನೆ ನೀಡಿದರು.
ಕೆಲವಡಿ ಗ್ರಾಮದ ರಂಗನಾಥ ದೇವಸ್ಥಾನದ ರಸ್ತೆಯಲ್ಲಿ ಮಂಗಳವಾರ ಭೂಮಿ ಪೂಜೆ ಮಾಡುವ ಮೂಲಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಎಚ್.ವಾಯ್.ಮೇಟಿ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಹೇಶ ಹೊಸಗೌಡರ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಕೆವಲಡಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕಾಳನ್ನವರ, ಹೊಳಬಸು ಶೆಟ್ಟರ, ರಾಜು ಚಿಮ್ಮನಕಟ್ಟಿ, ಎಂ.ಬಿ.ಹಂಗರಗಿ, ರಕ್ಷಿತಾ ಈಟಿ, ಸಲೀಮ ಖಾಜಿ, ಸಿಖಂದರ ಖಾಜಿ, ರಮೇಶ ಜಾನಮಟ್ಟಿ, ಯಲ್ಲಪ್ಪ ಗಂಗೂರ ಮತ್ತಿತರರು ಇದ್ದರು.