ರಿಲ್ಯಾಕ್ಸ ಮೂಡ್ನಲ್ಲಿ ಶ್ರೀಮಂತ ಪಾಟೀಲ

ಲೋಕದರ್ಶನ ವರದಿ

ಶೇಡಬಾಳ: ಕಳೆದ ಒಂದು ತಿಂಗಳಿನಿಂದ ಕಾಗವಾಡ ವಿಧಾನ ಸಭಾ ಮತಕ್ಷೇತ್ರದಲ್ಲಿ ಹಗಲುರಾತ್ರಿ ಎನ್ನದೇ ಎಡಬಿಡದೇ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯಥರ್ಿ ಶ್ರೀಮಂತ ಬಾಳಾಸಾಬ ಪಾಟೀಲರು ನಿನ್ನೆ ಮತದಾನ ಮುಗಿದ ನಂತರ ಶುಕ್ರವಾರ ದಿ. 6 ರಂದು ತಮ್ಮ ಸಕ್ಕರೆ ಕಾಖರ್ಾನೆಯ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾಗಲು ಬರುತ್ತಿದ್ದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ರಿಲ್ಯಾಕ್ಸ ಮೂಡ್ನಲ್ಲಿ ಕಾಲ ಕಳೆದರು.

ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಮಕೇರಿ, ಸಂಬರಗಿ, ಅರಳಿಹಟ್ಟಿ ಹಾಗೂ ಹಲವಾರು ಗ್ರಾಮದ ಮುಖಂಡರು ಶ್ರೀಮಂತ ಪಾಟೀಲರನ್ನು ಭೇಟಿಯಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ಮತದಾನ ನಡೆದ ಮಾಹಿತಿಯನ್ನು ಸಂಪೂರ್ಣವಾಗಿ ವಿವರಿಸಿದರು. ಅಲ್ಲದೇ ಪ್ರತಿ ಗ್ರಾಮಗಳಲ್ಲಿ ನಿಮಗೆ ಅತ್ಯಧಿಕ ಮತಗಳು ಬಂದಿವೆ. 

ನಿಮ್ಮ ವಿಜಯ ಖಚಿತವೆಂದು ವಿವರಣೆ ನೀಡುತ್ತಿರುವುದು ಸಾಮಾನ್ಯವಾಗಿತ್ತು. ಶ್ರೀಮಂತ ಪಾಟೀಲರು ತಮ್ಮ ಅತಿಥಿ ಗೃಹಕ್ಕೆ ಬಂದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಆದರ ಅತಿಥಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು. ಯಾರು ಎನೇ ಹೇಳಲಿ ಶ್ರೀಮಂತ ಪಾಟೀಲರ ಗೆಲವು ಶತಸಿದ್ಧವೆಂದು ಕಾರ್ಯಕರ್ತರು ಜೈ ಕಾರ ಹಾಕುತ್ತಿರುವುದು ಕಂಡು ಬಂತು.