ಅಂಕೋಲಾ : ಕಿರು ಸೇತುವೆ ಕುಸಿದ ಹಿನ್ನಲೆಯಲ್ಲಿ ಶವಸಂಸ್ಕಾರಕ್ಕೆ ಮೃತದೇಹವನ್ನ ನೀರಿನಲ್ಲಿಯೇ ಸಾಗಿಸಿದ ಘಟನೆ ಪುರಸಭೆ ವ್ಯಾಪ್ತಿಯ ಕೇಣಿಯ ಗಾಂವಕರವಾಡಾದಲ್ಲಿ ಗುರುವಾರ ನಡೆದಿದೆ.
ಕೇಣಿ ಗ್ರಾಮದ 80 ವರ್ಷದ ಸುಶೀಲಾ ಎನ್ನುವ ವೃದ್ದೆ ಮೃತಪಟ್ಟಿದ್ದಳು. ಗ್ರಾಮದ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕಾಗಿ ದೇಹವನ್ನ ತೆಗೆದುಕೊಂಡು ಹೋಗಿದ್ದರು. ಆದರೆ ರುಧ್ರಭೂಮಿಗೆ ಸಾಗುವ ಕಾಲು ಸೇತುವೆ ಯೊಂದು ಮಳೆ ನೀರಿಗೆ ಕೊಚ್ಚಿ ಹೋದ ಹಿನ್ನಲೆಯಲ್ಲಿ ಮೃತ ದೇಹವನ್ನು ನೀರಿನಲ್ಲಿ ನಡೆದುಕೊಂಡೆ ಹೋಗಿ ಸಾಗಿಸಲಾಯಿತು.
ಶವವನ್ನ ಸುಡಲು ಕಟ್ಟಿಗೆಯನ್ನ ಸಹ ಸಂಬಂಧಿಕರು ನೀರಿನಲ್ಲಿ ಹೊತ್ತುಕೊಂಡು ಸಾಗಬೇಕಾಯಿತು. ಕಳೆದ ಒಂದು ವರ್ಷದ ಹಿಂದೆ ಸೇತುವೆಯನ್ನ ರುದ್ರಭೂಮಿಗೆ ಸಾಗಲು ನಿಮರ್ಿಸಲಾಗಿತ್ತು. ಆದರೆ ಮಳೆ ನೀರಿಗೆ ಕಾಲು ಸೇತುವೆ ಕೊಚ್ಚಿ ಹೋದ ಹಿನ್ನಲೆಯಲ್ಲಿ ಘಟನೆ ನಡೆದಿದ್ದು ವಿಷಯ ತಿಳಿದು ಅಂಕೋಲಾ ಪುರಸಭೆಯ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಇನ್ನು ಜನರು ಸಹ ಅವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಘಟ ನೆಯ ಬಗ್ಗೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಜಿಲ್ಲಾಡಳಿತದ ಗಮನಕ್ಕೆ ಅಧಿಕಾರಿಗಳು ತಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಂತೋಷ ವಿಠೋಬ ಗಾಂವಕರ, ದಯಾನಂದ ಬೂದಿ ಗಾಂವಕರ, ರಾಮಚಂದ್ರ ಗುಣವಂತ ಗಾಂವಕರ, ಗಂಗಾದರ ಗಾಂವಕರ, ಉಲ್ಲಾಸ ಬುದವಂತ ಗಾಂವಕರ, ಸತೀಶ ಗಣಪತಿ ಗಾಂವಕರ, ಸತೀಶ ಗಣಪತಿ ಗಾಂವಕರ, ಸಂತೊಷ ಬೀದಿ ಗಾಂವಕರ, ಯಾದು ನಾರಾಯನ ಗಾಮವಕರ, ಶ್ರೀಧರ ಶಂಕರ ಗಾಂವಕರ, ತಾರಾನಾಥ ಡಿ. ಗಾಂವಕರ, ಮಾರುತಿ ಗಾಂವಕರ, ದಿನಕರ ಗಾಂವಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಎನ್.ಎಮ್. ಮೇಸ್ತಾ, ಪಿ.ಎಸ್.ಐ. ಶ್ರೀಧರ, ಪುರಸಬೆಯ ಸದಸ್ಯ ಸಂದೀಪ ಬಂಟ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸಿ, ಕೂಡಲೆ ಸ್ಮಶಾನಭೂಮಿಗೆ ಕಿರು ಸೇತುವೆಯನ್ನ ವೈಜ್ಞಾನಿಕ ರೀತಿಯಲ್ಲಿ ನಿಮರ್ಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.