ಕಾಗವಾಡ 03: ರಾಜ್ಯ ಸರಕಾರ ಎಲ್ಲ ಸರಕಾರಿ ಶಾಲೆಯ ವಿದ್ಯಾಥರ್ಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್ ಮಧ್ಯಾಹ್ನದ ಬಿಸಿ ಊಟದೊಂದಿಗೆ ವಿದ್ಯಾಥರ್ಿಗಳಿಗೆ ಶೂಸ್ ವಿತರಿಸಿ, ಕಾನ್ವೆಂಟ್ ಶಾಲೆಯ ವಿದ್ಯಾಥರ್ಿಗಳಂತೆ ಎಲ್ಲ ಸೌಕರ್ಯ ನೀಡುತ್ತಿದ್ದಾರೆ. ಈ ಮುಂದೆ ವಿದ್ಯಾಥರ್ಿಗಳ ಹಾಜರಾತಿ ಹೆಚ್ಚಿಸಿ, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದರೆ, ಸರಕಾರಿ ಶಾಲೆಗಳು ಮಾದರಿಯಾಗಲು ಸಾಧ್ಯ ಎಂದು ಉಗಾರ ಪುರಸಭೆ ಆಧ್ಯಕ್ಷ ಶಶಿಕಾಂತ ಕಾಂಬಳೆ ಹೇಳಿದರು.
ಮಂಗಳವಾರ ದಿ. 2ರಂದು ಉಗಾರ ಖುರ್ದ ಪಟ್ಟಣದ ಸರಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 512 ವಿದ್ಯಾಥರ್ಿಗಳಿಗೆ ಪುರಸಭೆ ಆಧ್ಯಕ್ಷ ಶಶಿshoo ಕಾಂತ ಕಾಂಬಳೆ ಹಾಗೂ ಸದಸ್ಯರು ಶೂ ವಿತರಿಸಿ, ಮಾತನಾಡಿದರು.
ಅಧ್ಯಕ್ಷತೆ ಎಸ್.ಡಿ.ಎಂ.ಸಿ ಆಧ್ಯಕ್ಷ ಅನೀಲ್ ಬೇನಾಡೆ ವಹಿಸಿದ್ದರು. ಪುರಸಭೆ ಸದಸ್ಯರಾದ ವಿಜಯ್ ಆಸೂದೆ, ಅವಿನಾಶ ಮೋರೆ, ಅಲ್ತಾಫ್ ನದಾಫ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಮವ್ವಾ ಕಾಂಬಳೆ, ಸದಸ್ಯರಾದ ಗೌರವ್ವಾ ಮಗದುಮ್ಮ, ದೀಪಾಲಿ ಕುಂಬಾರ, ಲಕ್ಷ್ಮೀ ಬೇರಗುಡ್ ಸೇರಿದಂತೆ ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು. ಮುಖ್ಯಾಧ್ಯಾಪಕ ಆರ್.ಎಂ.ಜಾಯಗೊಂಡೆ ಸ್ವಾಗತಿಸಿ, ಕೆ.ಎಂ.ದೀವೆಕರ್ ವಂದಿಸಿದರು.