ಧರೆಗುರುಳಿದ ಮರ: ತಪ್ಪಿದ ಅನಾಹುತ

ಲೋಕದರ್ಶನವ ವರದಿ

ದಾಂಡೇಲಿ: ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಾಂಡೇಲಿಯ ಕೇಂದ್ರ ಬಸ್ಸ ನಿಲ್ದಾಣದ ಆವರಣದಲ್ಲಿ ನಸುಕಿನ ಸಮಯದಲ್ಲಿ ಭಾರಿ ಗಾತ್ರದ ಮರವೊಂದು ಧರೆಗುರುಳಿದೆ. ಮುಂಜಾನೆ 4 ಘಂಟೆಗೆ ಜನಜಂಗುಳಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದ್ದರಿಂದ ಅದೃಷ್ಟವಶಾತ ಯಾವುದೇ ರೀತಿಯ ಜೀವ ಹಾನಿಯಾಗಲಿ ಆಸ್ತಿಪಾಸ್ತಿಗಾಗಲಿ ಹಾನಿ ಉಂಟಾಗಲಿಲ್ಲ.

ಕೆಲ ದಿನಗಳಿಂದ ದಾಂಡೇಲಿ ನಗರ ಹಾಗೂ ಸುತ್ತಮೂತ್ತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರಿಂದ ದಾಂಡೇಲಿಯ ಬಸ್ಸ ನಿಲ್ದಾಣದ ಆವರಣದಲ್ಲಿದ್ದ ದೊಡ್ಡ ಪ್ರಮಾಣದ ಮರವೊಂದು ಬುಡದಲ್ಲಿ ಮಣ್ಣು ಸಡಿಲಗೊಂಡು ಭಾರ ತಾಳಲಾರದೆ ಉರುಳಿ ಬಿದ್ದಿದೆ. 

ಈ ಸಮಯದಲ್ಲಿ ಸಾರಿಗೆ ಸಂಸ್ಥೆಯ ಯಾವುದೇ ಬಸ್ಸಾಗಲಿ ಸಾರ್ವಜನಿಕರ ಯಾವುದೇ ವಾಹನಗಳಾಗಲಿ ಮರ ಉರುಳಿದ ಪ್ರದೇಶದಲ್ಲಿ ಪಾಕರ್ಿಂಗ್ ಮಾಡಿರಲಿಲ್ಲ. ಇಂದು ನಡೆದ ಘಟನೆ ಬಸ್ಸ ನಿಲ್ದಾಣದಲ್ಲಿ ಮನ ಬಂದಂತೆ ಪಾಕರ್ಿಂಗ್ ಮಾಡುವ ವಾಹನ ಸವಾರರಿಗೂ ಸಹ ಎಚ್ಚರಿಕೆಯ ಘಂಟೆಯಾಗಿದೆ.

ಬಸ್ಸ ನಿಲ್ದಾಣದ ಆವರಣದ ಸುತ್ತಮುತ್ತಲೂ ಇಂತಹ ಅನೇಕ ನೆರಳು ನೀಡುವ ಮರಗಳಿದ್ದು ಯಾವುದೇ ಸಂಧರ್ಭದಲ್ಲಿ ಬಿಳಬಹುದಾಗಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಈ ಘಟನೆಯಿಂದ ಎಚ್ಚೆತ್ತುಕೊಂಡು ಮರಗಳಿಗೆ ಭಾರವಾಗಿರುವ ರಂಬೆ ಕೊಂಬೆಗಳನ್ನು ಕತ್ತರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ.