ಪ್ರೋ ಡಿ.ಬಿ ಜಾರೆಗೆ ಬೀಳ್ಕೊಡುಗೆ

ಲೋಕದರ್ಶನ ವರದಿ

ಬೆಳಗಾವಿ 04:  ಸ್ಥಳೀಯ ಅಂಜುಮನ್ ಕಲಾ ಹಾಗೂ ವಾಣಿಜ್ಯ ಕಾಲೇಜದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಪ್ರೋ.ಡಿ.ಬಿ ಜಾರೆ ಅವರು ವಯೋನಿವೃತ್ತಿಯಾದ ನಿಮಿತ್ತ ಮಹಾವಿದ್ಯಾಲಯದಲ್ಲಿ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 

 ಕಾಲೇಜಿನ ಪ್ರಾಧ್ಯಾಪಕ ಪ್ರೋ. ಮಾಹಿನ್ ಮಾತನಾಡಿ ವಿದ್ಯಾಥರ್ಿಗಳಿಗೆ ಅರ್ಥಶಾಸ್ತ್ರ ವಿದ್ಯಾಭ್ಯಾಸ ಹೇಳುವುದರೊಂದಿಗೆ  ಹತ್ತು ವರ್ಷಗಳಿಂದ ಎನ್ಎಸ್ಎಸ್ ಅಧಿಕಾರಿಗಳಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  ಪ್ರೋ ಬಿ.ಚಿ. ಮುಗುಟ ಮಾತನಾಡಿ ಪ್ರೋ. ಜಾರೆಯವರು ನನ್ನ ಬಾಲ್ಯ ಸ್ನೇಹಿತರು ಸದ್ಗುಣ-ಸಂಪನ್ನರು ಮತ್ತು ಆಗಾಧ ಮನೋಭಾವ ಉಳ್ಳವರು. ಸಾವಿರಾರೂ ವಿದ್ಯಾಥರ್ಿಗಳಿಗೆ ದಾರಿ ದೀಪವಾದರು. ನಿವೃತ್ತಿಯಾಗುವರೆಗೂ ವಿದ್ಯಾಥರ್ಿಗಳ ಹತ್ತಾರೂ ಸಮಸ್ಯೆಗಳಿಗೆ ಸ್ಪಂದಿಸಿದವರು ಎಂದರು.

 ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಚ್. ಆಯ್. ತಿಮ್ಮಾಪೂರ ಅವರು ಮಾತನಾಡಿ ಪ್ರೋ ಜಾರೆಯವರು ತುಂಬಾ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಕಾಲೇಜಿನ ಪ್ರತಿಯೊಂದು ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರು. ವಿದ್ಯಾಥರ್ಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವಯೋನಿವೃತ್ತಿಯಾದರೆ ವಿದ್ಯೆಯಿಂದ ನಿವೃತ್ತಯಾದಂತಲ್ಲ. ವಿದ್ಯಾಥರ್ಿಗಳಿಗೆ ಕೊನೆ ಉಸಿರು ಇರುವವರೆಗೆ ನಮ್ಮಲ್ಲಿನ ಜ್ಞಾನ ಬೋಧನೆ ಮಾಡಿ ಅವರಿಗೆ ಜ್ಞಾನದ ಅರಿವು ಮೂಡಿಸಬೇಕು ಎಂದರು.

  ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.  ಎಸ್.ಎ ಮುಲ್ಲಾ ನಿರೂಪಿಸಿದರು. ಆಯಿ.ಬಿ.ತಹಶೀಲ್ದಾರ ವಂದಿಸಿದರು.