ಲೋಕದರ್ಶನ ವರದಿ ಹಾವೇರಿ : ಬಳ್ಳಾರಿ ಜಿಲ್ಲೆಯ ಹೊಸಪೇಟ ತಾಲೂಕಿನ ಹಂಪಿ ಸದ್ಗುರು ಶಿವರಾಮ ಅವಭೂತ ಕಲ್ಯಾಣ ಮಂಟಪದಲ್ಲಿ ಜುಲೈ 13 ರಿಂದ 15 ವರೆಗೆ ಯುವಕ-ಯುವತಿಯರಿಗಾಗಿ ಮೂರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಯ ಮಾದಿಗ ಜನಾಂಗದ ಪ್ರಜ್ಞಾವಂತರಿಗಾಗಿ ಸಮಾಜದ ಜಾಗೃತಿಗಾಗಿ ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ, ಭಾವರೂಪಕ ಪ್ರತಿಷ್ಠಾನ ಬೆಂಗಳೂರ, ಆದಿಜಾಂಬವ ಜಾಗೃತಿ ವೇದಿಕೆ ಬೆಂಗಳೂರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಎಚ್ ಆಂಜನೇಯ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಹೂಡಿ ವೆಂಕಟೇಶ ಚಿಂತಕರು ವಿಚಾರವಾದಿಗಳು ಬೆಂಗಳೂರ, ನಾಗರಾಜ ಎಂ ಹಾಗೂ ರಾಜ್ಯ ಮಾದಿಗ ಸಮುದಾಯದ ಗಣ್ಯಮಾನ್ಯರು, ಮಠಾಧೀಶರು ಭಾಗವಹಿಸಲಿದ್ದು, ಹಾವೇರಿ ಜಿಲ್ಲೆಯಿಂದ ಈ ವಿಚಾರ ಸಂಕಿರಣಕ್ಕೆ ಮಾದಿಗ ಸಮುದಾಯದ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾದಿಗ ಸಮುದಾಯದ ಜಿಲ್ಲಾ ಮುಖಂಡ ಸಂಜಯಗಾಂಧಿ ಸಂಜೀವಣ್ಣನವರ, ಮಾರುತಿ ಬಣಕಾರ, ನಿಂಗಪ್ಪ ಕಡೂರ, ಮಂಜಪ್ಪ ಮರೋಳ, ಮಂಜುನಾಥ ದಡ್ಡೂರ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.