ಹಾವೇರಿ05: ನಿರ್ಲಕ್ಷ್ಯ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರು, ಮಕ್ಕಳು ಸ್ವಯಂ ಸೇವಾ ಸಂಸ್ಥೆಗಳ ಆಶ್ರಯಪಡೆದಿದ್ದೀರಿ. ಈ ಸ್ವಾಧಾರ ಗೃಹದಲ್ಲಿದ್ದುಕೊಂಡು ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಸಿ.ಸದಾನಂದಸ್ವಾಮಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ವಕೀಲರ ಸಂಘ ಹಾಗೂ ಇಡಾರಿ ಸಂಸ್ಥೆ ಸಹಯೋಗದಲ್ಲಿ ಇಡಾರಿ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಜರುಗಿದ ಸ್ವಾಧಾರ ಗೃಹಗಳಲ್ಲಿ ವಾಸಿಸುವ ಮಹಿಳೆಯರಿಗೆ ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ತಾಯಂದಿರು, ಗಂಡನಿಂದ ದೌರ್ಜನ್ಯಕ್ಕೊಳಗಾದ ಹೆಂಡತಿ, ತಂದೆಯಿಂದ ನಿರ್ಲಕ್ಷ್ಯಕ್ಕೊಳಗಾದ ಮಕ್ಕಳು ಸ್ವಯಂ ಸೇವಾ ಸಂಸ್ಥೆಗಳಲ್ಲಿ ತಾತ್ಕಾಲಿಕ ಪುನರ್ವಸತಿ ಪಡೆದಿರುತ್ತಾರೆ. ಈ ಮಹಿಳೆಯರಿಗೆ ವೃತ್ತಿ ಕೌಶಲ್ಯ ತರಬೇತಿಯೊಂದಿಗೆ ಕಾನೂನಿನ ಸಾಮಾನ್ಯ ತಿಳುವಳಿಕೆ ನೀಡಿದರೆ ಸಮಾಜದಲ್ಲಿ ಉತ್ತಮವಾದ ಬದುಕು ನಡೆಸಲು ಅನುಕೂಲವಾಗುತ್ತದೆ. ಆಶ್ರಯಪಡೆದ ಸಂದರ್ಭದಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ಹಾಗೂ ಸಾಮಾನ್ಯ ಕಾನೂನಿನ ತಿಳುವಳಿಕೆ ಹೊಂದುವಂತೆ ಕರೆ ನೀಡಿದರು.
ಪ್ರತಿ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಮಾನ್ಯ ಸವರ್ೋಚ್ಛ ನ್ಯಾಯಾಲಯದ ನಿದರ್ೆಶನದಂತೆ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಕಾನೂನಿನ ಅರಿವು ಹಾಗೂ ನೆರವು ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಅವರು ಮಾತನಾಡಿ, ನೋಂದ ಮಹಿಳೆಯರಿಗೆ ಆಶ್ರಯ ನೀಡಿ ಸ್ವಾವಲಂಬಿ ಬದುಕಿಗೆ ವೃತ್ತಿಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಉತ್ತಮ ಬದುಕಿಗಾಗಿ ಕಾನೂನಿನ ಸಾಮಾನ್ಯ ತಿಳುವಳಿಕೆ ನೀಡುವುದು ಅತ್ಯುತ್ತಮವಾದ ಕಾರ್ಯವಾಗಿದೆ. ನೋಂದ ಮಹಿಳೆಯರು ಇಂತಹ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸ್ವಾವಲಂಬಿಯಾಗಿ ಬದುಕನ್ನು ರೂಪಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದಶರ್ಿಗಳಾದ ಶ್ರೀಮತಿ ವೈ.ಎನ್. ಲಾಡಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಮುಂದೆ ಸಮಾನರಾಗಿದ್ದು, ಬಡವರು ಅಥವಾ ಶ್ರೀಮಂತರು ಎಂಬ ಯಾವ ತಾರತಮ್ಯವಿಲ್ಲದೆ ಕಾನೂನಿನ ತಿಳುವಳಿಕೆ ಹೊಂದಿದರೆ ಕಾನೂನನ್ನು ಗೌರವಿಸಿದರೆ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಜೀವನದಲ್ಲಿ ಒಳ್ಳೆಯ ಉದ್ದೇಶಗಳನ್ನು ಇಟ್ಟುಕೊಂಡು ಕಾನೂನನ್ನು ಪಾಲಿಸುವ ಮೂಲಕ ನಾವು ನಮ್ಮ ಕುಟುಂಬದ ಜೊತೆಗೆ ರಾಷ್ಟ್ರವನ್ನು ಅಭಿವೃದ್ಧಿಪಡಿಸಬಹುದೆಂದು ಹೇಳಿದರು.
ಇಡಾರಿ ಸಂಸ್ಥೆಯ ಸದಸ್ಯ ಜಿ.ಎನ್.ಗೌಡ, ವಕೀಲಾರದ ಕುಮಾರಿ ರೇಹನಾ ಚನ್ನಪಟ್ಟಣ, ಮನೋರೋಗ ತಜ್ಞರಾದ ಲೀಲಾ ಪಿ., ವಿವಿದ ವಿಚಾರ ಕುರಿತಂತೆ ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಇಡಾರಿ ಸಂಸ್ಥೆಯ ಅಧ್ಯಕ್ಷರಾದ ಪರಿಮಳಾ ಜೈನ್ ವಹಿಸಿದ್ದರು.
ಪ್ರಧಾನ ದಿವಾಣಿ ನ್ಯಾಯಾಧೀಶರಾದ ಲಕ್ಷ್ಮೀ ಎನ್.ಗರಗ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ.ನೀರಲಗಿ, ಕಾರ್ಯದಶರ್ಿ ದೇವರಾಜ ನಾಯ್ಡು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೆಶಕ ಎಂ.ಎನ್.ಮಾಳಗೇರ, ಮಹಿಳಾ ಸಂಸ್ಕರಣಾಧಿಕಾರಿ ಉಮಾ ಕೆ.ಎಸ್., ಲತಾ ಅಂಗಡಿ, ಶಶಿಕಲಾ ಶಿಡೇನೂರ ಭಾಗವಹಿಸಿದ್ದರು.