ಧಾರವಾಡ 06: ನಗರದ ಮರಾಠ ವಿದ್ಯಾಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ.ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ ಪುಂಡಲೀಕ ಗಾಯಕವಾಡ ಇತ್ತೀಚಿಗೆ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸಿಲಂಬಮ್ (ದೊಣ್ಣೆವರಸೆ) ಸ್ಪಧರ್ೆಯಲ್ಲಿ ಭಾಗವಹಿಸಿ, ಅಂತರಾಷ್ಟ್ರೀಯ ಮಟ್ಟದ ಸ್ಪಧರ್ೆಯಲ್ಲಿ ಭಾರತದ ಪರ ಸ್ಪಧರ್ಿಸುವ ಅವಕಾಶ ಒದಗಿ ಬಂದಿದೆ.
ಪುಂಡಲೀಕ ಗಾಯಕವಾಡ ಅವರು ಜುಲೈ 13ರಿಂದ 15ರ ವರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆಯಲಿರುವ ಸೌತ್ ಏಶಿಯನ್ ಸಿಲಂಬಮ್ ಚಾಂಪಿಯನ್ ಶಿಪ್ ನಲ್ಲಿ ಕಿರಿಯರ ವಿಭಾಗದಿಂದ ಭಾರತದ ಪರ ಆಡಲು ಅವಕಾಶ ಸಿಕ್ಕಿದೆ. ಆದ್ದರಿಂದ ಸಂಸ್ಥೆಯ ಮರಾಠ ವಿದ್ಯಾಪ್ರಸಾರಕ ಮಂಡಳದ ಆಡಳಿತ ಮಂಡಳದ ಎಲ್ಲ ಪದಾಧಿಕಾರಿಗಳು, ಪ್ರಾಚಾರ್ಯರು, ದೈಹಿಕ ನಿದರ್ೆಶಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಹೃತ್ಪುರ್ವಕ ಅಬಿನಂದನೆಗಳನ್ನು ಸಲ್ಲಿಸಿ, ಜಯಶಾಲಿಯಾಗಲಿ ಎಂದು ಹಾರೈಸಿದ್ದಾರೆ. ನವೀನ್ ಪಿ ಕದಂ ಹಾಗೂ ಪ್ರೊ. ಎಮ್.ಎಸ್.ಗಾಣಿಗೇರ ಪ್ರಕಟಣೆಗೆ ತಿಳಿಸಿದ್ದಾರೆ.
9ರಿಂದ ಧಾರವಾಡದಲ್ಲಿ ರಾಜ್ಯ ಮಟ್ಟದ ವಿಜ್ಞಾನ ತರಬೇತಿ ಆರಂಭ
ಧಾರವಾಡ 06: ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯ ಅಡಿ ಜಿಲ್ಲಾ ಹಂತದಲ್ಲಿ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ವಿಜ್ಞಾನ ವಿಷಯದಲ್ಲಿ ತರಬೇತಿ ನೀಡಲಿರುವ ಜಿಲ್ಲಾ ಮುಖ್ಯ ಸಂಪನ್ಮೂಲ ವ್ಯಕ್ತಿಗಳ ರಾಜ್ಯ ಮಟ್ಟದ 5 ದಿನಗಳ ತರಬೇತಿ ಶಿಬಿರ ಜುಲೈ 9 ರಂದು ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಆರಂಭಗೊಳ್ಳಲಿದೆ. ಉತ್ತರ ಕನರ್ಾಟಕ ಭಾಗದಲ್ಲಿ ಈ ರಾಜ್ಯಮಟ್ಟದ ತರಬೇತಿ ನಡೆಯುತ್ತಿರುವುದು ವಿಶೇಷವಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 13 ರವರೆಗೆ ಜರುಗುವ ಈ ತರಬೇತಿ ಶಿಬಿರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಆರ್. ಸ್ನೇಹಲ್ ಸೋಮವಾರ ಅಪರಾಹ್ನ 3 ಗಂಟೆಗೆ ಉದ್ಘಾಟಿಸುವರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕನರ್ಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ವಾಯವ್ಯ ಕನರ್ಾಟಕ ಶೈಕ್ಷಣಿಕ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿದರ್ೆಶಕ ಎನ್.ಎಸ್. ಕುಮಾರ, ಸಿಸ್ಲೆಪ್ ನಿದರ್ೆಶಕ ಬಿ.ಎಸ್. ರಘುವೀರ, ಸಹ ನಿದರ್ೆಶಕ ಡಾ.ಬಿ.ಕೆ.ಎಸ್. ವರ್ಧನ್, ಹಾಗೂ ಬೆಳಗಾವಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಮತ್ತು ಸಹ ನಿದರ್ೆಶಕರಾದ ಮಮತಾ ನಾಯಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿದರ್ೆಶಕ ಎಚ್.ಎನ್. ಗೋಪಾಲಕೃಷ್ಣ ತರಬೇತಿ ಶಿಬಿರ ಕುರಿತು ಆಶಯ ಭಾಷಣ ಮಾಡಲಿದ್ದು, ಜಿಲ್ಲಾ ಸಾ.ಶಿ. ಇಲಾಖೆ ಅಭಿವೃದ್ಧಿ ಉಪನಿದರ್ೆಶಕರು ಹಾಗೂ ಡಯಟ್ ಪ್ರಿನ್ಸಿಪಾಲ್ ಸುಮಂಗಳಾ ಪಿ. ಕುಚಿನಾಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸುವರು.
ರಾಜ್ಯವ್ಯಾಪಿಯಾಗಿ 10ನೆಯ ತರಗತಿಯ ಹೊಸ ಪಠ್ಯಪುಸ್ತಕವನ್ನು ಆಧರಿಸಿ ಪ್ರಸ್ತುತ ರಾಜ್ಯದ ಎಲ್ಲಾ ಪ್ರೌಢ ಶಾಲೆಗಳ ವಿಜ್ಞಾನ ಶಿಕ್ಷಕ-ಶಿಕ್ಷಕಿಯರಿಗೆ ಪಠ್ಯಾಧಾರಿತ ವಿಶೇಷ ತರಬೇತಿ ನೀಡಲು ಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯದ ಕಂದಾಯ ಹಾಗೂ ಶೈಕ್ಷಣಿಕ ಜಿಲ್ಲೆಗಳು ಸೇರಿ ಎಲ್ಲ 34 ಜಿಲ್ಲೆಗಳಿಂದ ತಲಾ 4 ಜನರಂತೆ ಒಟ್ಟು 136 ಜನ ಜಿಲ್ಲಾ ಮುಖ್ಯ ಸಂಪನ್ಮೂಲ (ತರಬೇತುದಾರ) ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಿಗೆ ರಾಜ್ಯ ಮಟ್ಟದಲ್ಲಿ ಈ ಶಿಬಿರದ ಮೂಲಕ ತರಬೇತಿ ನೀಡಲಾಗುತ್ತಿದೆ. ತರಬೇತಿ ನೀಡಲಿರುವ 14 ಜನ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ತರಬೇತಿ ಪಡೆದುಕೊಳ್ಳಲಿರುವ 136 ಜಿಲ್ಲಾ ಮುಖ್ಯ ಸಂಪನ್ಮೂಲ ವ್ಯಕ್ತಿಗಳು ಧಾರವಾಡವನ್ನು ತಲುಪುವ ತಮ್ಮ ಪ್ರಯಾಣದ ಅವಧಿಯನ್ನು ಪರಿಗಣಿಸಿ ಕೆಲಸದ ಕೇಂದ್ರ ಸ್ಥಾನದಿಂದ ಬಿಡುಗಡೆ ಹೊಂದಿ ಜು.9 ರಂದು ಸಕಾಲಕ್ಕೆ ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಸಾ.ಶಿ. ಇಲಾಖೆ ಅಭಿವೃದ್ಧಿ ಉಪನಿದರ್ೆಶಕರು ಹಾಗೂ ಡಯಟ್ ಪ್ರಿನ್ಸಿಪಾಲ್ ಸುಮಂಗಳಾ ಪಿ. ಕುಚಿನಾಡ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.