ಸಂಕ್ರಾಂತಿ ಸಮೃದ್ಧಿಯ ಸಂಕೇತ: ಶಿವಕುಮಾರ

ಮುಧೋಳ16: ಸಂಕ್ರಾಂತಿ ಎಂದರೆ ಸಮೃದ್ಧಿಯ ಸಂಕೇತ, ಸೂರ್ಯ ಮತ್ತೊಂದು ದಿಕ್ಕಿನತ್ತ ಹೊರಳುವ ಮೂಲಕ ಹೊಸತನಕ್ಕೆ ತೆರೆದುಕೊಳ್ಳಲು ಇಡೀ ಜೀವಕೋಟಿಗೆ ಪ್ರೇರಣೆ ನೀಡುವ ಹಬ್ಬವಾಗಿದೆ ಎಂದು ಮಾಜಿ ಜಿ.ಪಂ ಅಧ್ಯಕ್ಷ ತ್ರಿವೇಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮಲಘಾಣ ಹೇಳಿದರು.

   ಗುರುವಾರ ನಗರದ ಪ್ರತಿಷ್ಠಿತ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದ ಹಮ್ಮಿಕೊಂಡ ಸಂಕ್ರಾಂತಿ ಸಂಭ್ರಮ-2019ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಸಿರಿಗೆ ಹೊಸ ಉಸಿರು, ನಿಸರ್ಗದಲ್ಲಾಗುವ ಬದಲಾವಣೆಯೊಂದಿಗೆ ಬದುಕು ಕಟ್ಟಿಕೊಳ್ಳುವ ಮನುಕುಲಕ್ಕೆ ಸಂಕ್ರಾಂತಿ ಎಂದರೆ ಒಂದು ವಿಶೀಷ್ಟ ಸಂಭ್ರಮವಾಗಿದೆ ಎಂದು ಅವರು ಹೇಳಿದರು.

   ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಮಾತನಾಡಿ ಸಂಕ್ರಾಂತಿ ಹಬ್ಬದ ಮೂಲಕ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಕೂಡಲು ಒಂದು ವಿಶೇಷ ಅವಾಕಾಶ ಎಳ್ಳು-ಬೆಲ್ಲದೊಂದಿಗೆ  ಸೇವಿಸುವ ಈ ಹಬ್ಬ ಮನುಕುಲವೆಲ್ಲ ಕಷ್ಟ-ಸುಖವನ್ನು ಸಮಾನವಾಗಿ ಸ್ವಿಕರಿಸಿ ಒಂದಾಗಿ ಹೋಗುವ ಮಾರ್ಗವನ್ನು ಈ ಹಬ್ಬ ತೋರಿಸಿತ್ತದೆ. ಆದರೆ ಇತ್ತಿಚೀನ ದಿನಮಾನಗಳಲ್ಲಿ ಹಬ್ಬಗಳ ಸಂಭ್ರಮ ಕಡಿಮೆಯಾಗಿ ವಿದೇಶ ಸಂಸ್ಕೃತಿ ನಮ್ಮ ಹಬ್ಬದಲ್ಲಿ ಸೇರಿಕೊಳ್ಳುವದರಿಂದ ಅಪಾರ್ಥವಾಗಿ ಹೊಗುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ ಗ್ರಾಮೀಣ ಸೊಗಡು ಸಂಪ್ರದಾತ,ಪರಂಪರೆ ನಿರಂತರವಾಗಿ ಸಾಗಲು ಹಾಗೂ ನಮ್ಮ ಉಡುಪಿ ಈ ಹಬ್ಬದ ದಿನಗಳಲ್ಲಾದರೂ ಹೊರವಲಿ ಎನ್ನುವ ಉದ್ದೇಶದಿಂದ ವರ್ಷದ ಎಲ್ಲ ಹಬ್ಬಗಳನ್ನು ನಾವು ವಿಶೇಷವಾಗಿ ಶಾಲಾ ಮಕ್ಕಳಿಂದ ಆಚರಿಸುತ್ತಾ ಬಂದಿದ್ದು ಈ ಸಂಕ್ರಾಂತಿಯನ್ನೂ ಸಹ ವಿಶೇಷವಾಗಿ ನಾವು ಆಚರಿಸಿದ್ದೇವೆ. ಮಕ್ಕಳು ಹಾಗೂ ಪಾಲಕರು ಈ ಹಬ್ಬಕ್ಕೆ ವಿಶೇಷವಾಗಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

  ಕಬ್ಬು,ಜೋಳದ ರಾಶಿಯನ್ನು ಮಾಡಿ ವಿಶೇಷ ಪೂಜೆ ಮಾಡುವದರ ಜತೆಗೆ ಎಲ್ಲ ವಿದ್ಯಾಥರ್ಿಗಳಿಗೆ ಎಳ್ಳು-ಬೆಲ್ಲ ಹಂಚಿದರು,ಸಂಕ್ರಾಂತಿಯ ಕುರಿತ ಹಲವಾರು ಹಾಡುಗಳಿಗೆ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು , ಶಿಕ್ಷಕ-ಶಿಕ್ಷಕಿಯರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

    ಕಾರ್ಯಕ್ರಮದಲ್ಲಿ ನಿದರ್ೇಶಕಿ ನಿರ್ಮಲಾ ಎಸ್.ಮಲಘಾಣ,ಶಿಶಿರ ಮಲಘಾಣ, ಆಡಳಿತಾಧಿಕಾರಿ ಮಲ್ಲು ಕಳ್ಳೆನವರ, ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಸೇರಿದಂತೆ ಶಿಕ್ಷಕರು ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು  ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮ ಪಟ್ಟರು.