ಸಂಬರಗಿ : ಅಗ್ರಾಣಿ ನದಿ ಸ್ವಚ್ಚತೆ ಮಾಡಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹ

ಲೋಕದರ್ಶನ ವರದಿ

ಸಂಬರಗಿ 17:  ಮಹರಾಷ್ಟ್ರ ಸಕರ್ಾರ ತಮ್ಮ ಗಡಿಯೊಳಗೆ ಸುಮಾರು 70 ಕಿ.ಮೀ. ಅಂತರದವರೆಗೆ ಅಗ್ರಾಣಿ ನದಿ ಸ್ವಚ್ಚತೆ ಕಾರ್ಯ ಕೈಗೊಂಡಿದ್ದಾರೆ. ಕನರ್ಾಟಕ ಸಕರ್ಾರ ಅಗ್ರಾಣಿ ನದಿ ಸ್ವಚ್ಚತೆ ಮಾಡಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಅಗ್ರಾಣಿ ಸ್ವಚ್ಚತಾ ಮುಖಂಡರು ಶ್ರೀಮಂತ ಕಾರಕೆ ಆಗ್ರಹಿಸಿದ್ದಾರೆ. 

ಶಿರೂರ ಗ್ರಾಮದಲ್ಲಿ ಅಗ್ರಾಣಿ ನದಿ ಸ್ವಚ್ಚತಾ ಸಮೀತಿ ರವಿವಾರ ಸಭೆಯಲ್ಲಿ ಮಾತನಾಡಿದ ಅವರು ಅಗ್ರಾಣಿ ತೀರದಲ್ಲಿ ಸುಮಾರು 20 ಗ್ರಾಮಗಳು ಬರುತ್ತಿದ್ದು ಪ್ರತಿ ಗ್ರಾಮಸ್ಥರು ಒಂದಾಗಿ ಅಗ್ರಾಣಿ ನದಿ ಸ್ವಚ್ಚತೆ ಕಾರ್ಯಕ್ಕೆ ಒತ್ತು ನೀಡಬೇಕು. ಭಾರತ ಸ್ವತಂತ್ರವಾಗುವುದಕ್ಕಿಂತ ಮುಂಚಿತವಾಗಿ ಈ ಅಗ್ರಾಣಿ ನದಿಯಿದ್ದು ನದಿ ಮದ್ಯದಲ್ಲಿ ಜಾಲಿ ಕಂಟಿ ಬೆಳೆದು ನದಿಯು ಮುಚ್ಚಿ ಹೋಗುತ್ತಿದೆ. ನದಿ ತೀರದಲ್ಲಿರುವ ರೈತರು ಅಗ್ರಾಣಿ ನದಿ ಅತಿಕ್ರಮಣ ಮಾಡುತ್ತಿದ್ದಾರೆ. ಅದನ್ನು ತಡೆಗಟ್ಟಬೇಕು. ಹಿಂದಿನ ಜಿಲ್ಲಾಧಿಕಾರಿ ಎನ್.ಜಯರಾಮ್ ಇವರು ಶಿರೂರ ಗ್ರಾಮದಲ್ಲಿ ವಾಸ್ತವ್ಯ ಮಾಡಿದ ನಂತರ ಈ ಭಾಗದ ಎಲ್ಲಾ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ್ದೇವೆ. ಮಳೆಗಾಲ ಪ್ರಾರಂಭವಾಗುವ ಮುಂಚಿತವಾಗಿ ಅಗ್ರಾಣಿ ನದಿಯ ಸ್ವಚ್ಚತೆಗಾಗಿ ಕ್ರಮ ಕೈಗೊಂಡು ಅಗ್ರಾಣಿ ಪುನರುಜ್ಜೀವನ ಮಾಡಬೇಕೆಂದು ಅವರು ಆಗ್ರಹಿಸಿದರು.

ಈ ವೇಳೆ ಒಣಬೇಸಾಯ ರೈತಸಂಘದ ಅಧ್ಯಕ್ಷ ಸಂಜಯ ಹೊನಖಾಂಡೆ ಮಾತನಾಡಿ ಅಗ್ರಾಣಿ ನದಿಯ ಸ್ವಚ್ಚತೆ ಆದ ನಂತರ ಮಳೆ ನೀರನ್ನು ನದಿಯಲ್ಲಿ ಸಂಗ್ರಹ ಆದನಂತರ ಅಗ್ರಾಣಿ ತೀರದಲ್ಲಿರುವ ಕೊಳವೆಬಾವಿ ಹಾಗೂ ತೆರೆದ ಬಾವಿಗಳಿಗೆ ನೀರಿನ ಮಟ್ಟ ಹೆಚ್ಚಾಗುತ್ತದೆ. ಎಲ್ಲರು ಒಂದಾಗಿ ಅಗ್ರಾಣಿ ಸ್ವಚ್ಚತೆಗೆ ಪಾಲ್ಗೊಳ್ಳಬೇಕೆಂದು ಅವರು ಆಹ್ವಾನಿಸಿದರು. ಈ ವೇಳೆ ರಾಮದಾಸ ಪಾಟೀಲ, ಮಚೇಂದ್ರ ಖಾಂಡೇಕರ, ಸುಖದೇವ ಹರಾಳೆ, ಬಸು ಗಸ್ತಿ ಸೇರಿದಂತೆ ಎಲ್ಲಾ ಮುಖಂಡರು ಹಾಜರಿದ್ದರು.