ಸಾಲಮನ್ನಾ :ಕಾರವಾರ ಜಿಲ್ಲೆ 707 ರೈತರಿಗೆ ಅನ್ವಯ

 

ಮುಂಡಗೋಡ :- ರಾಜ್ಯ ಸಕರ್ಾರ ರೈತರ ಒಂದು ಖಾತೆಗೆ 2 ಲಕ್ಷದ ವರೆಗೆ ಬೆಳೆ ಸಾಲ ಮನ್ನಾ ಮಾಡಿರುವ ಯೋಜನೆಯು ನಮ್ಮ ಜಿಲ್ಲೆಯ 83ಸಾವಿರ ರೈತರ ಪೈಕಿ 707 ರೈತರಿಗೆ ಮಾತ್ರ ಅನ್ವಯಿಸುವಂತಾಯಿತು ಇದರಿಂದ ಜಿಲ್ಲೆಗೆ 8 ಕೋಟಿ ಬಂದಂತಾಗುತ್ತದೆೆ ಎಂದು  ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.

ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು, ಜಿಲ್ಲೆಯಲ್ಲಿ 83ಸಾವಿರ ರೈತರ ಪೈಕಿ 82 ಸಾವಿರದ 250 ರೈತರು ಚಾಲ್ತಿಯಲ್ಲಿದ್ದರೆ, 707 ರೈತರು ಮಾತ್ರ ಕಟ್ಬಾಕಿಯಲ್ಲಿದ್ದಾರೆ. 

ರೈತರ ಒಂದು ಖಾತೆಗೆ 2 ಲಕ್ಷದ ವರೆಗೆ ಬೆಳೆ ಸಾಲ ಮನ್ನಾ ಮಾಡಿರುವ ಕೆಲ ಷರತ್ತಿನಿಂದ ಈ ಪ್ರಯೋಜನೆಯು 707 ರೈತರು ಮಾತ್ರ ಅರ್ಹವಾಗಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯರ ಸಕರ್ಾರ ಒಂದು ಖಾತೆಗೆ ತಲಾ 50 ಸಾವಿರ ಬೆಳೆ ಸಾಲ ಮನ್ನಾ ಮಾಡಿದರಲ್ಲಿ  ಜಿಲ್ಲೆಗೆ ಇನ್ನೂ 303 ಕೋಟಿ ರೂ ಇಲ್ಲಿಯವರೆಗೂ ಜಮಾ ಮಾಡದಿರುವುದರಿಂದ ಸಕಾಲದಲ್ಲಿ ರೈತರಿಗೆ ಬೆಳೆ ಸಾಲ ಸಿಗದೆ ರೈತರು ಪ್ರಸಕ್ತ ವರ್ಷ ತೊಂದರೆ ಅನುಭವಿಸುವಂತಾಯಿತು ಎಂದ ಅವರ ಮನ್ನಾ ಮಾಡಿರುವ ಬೆಳೆ ಸಾಲದ ಮೊತ್ತವು  ಜಮಾ ಆಗದಿದ್ದರೂ ಕೆ.ಡಿ.ಸಿ.ಸಿ. ಬ್ಯಾಂಕ್ನವರು ಸ್ವಂತ ಫಂಡಿನಿಂದ ರೈತರಿಗೆ ಸಾಲಕೊಡಬಹುದಿತ್ತು. ಯಾಕೆಂದರೆ ರೈತರಿಗೆ ಏನ ಬೆಳೆ ಸಾಲವನ್ನು ಕೆ.ಡಿ.ಸಿ.ಸಿ, ಬ್ಯಾಂಕ್ನವರು ಕೊಟ್ಟಿರುತ್ತಾರೂ ಆ ಅವದಿಯಿಂದ ರಾಜ್ಯ ಸಕರ್ಾರದಿಂದ ಬಡ್ಡಿ ತೆಗೆದುಕೊಳ್ಳುತ್ತಾರೆ ಎಂದರು

ಈ ಹಿಂದೆ 50 ಸಾವಿರ ಬೆಳೆ ಸಾಲ ಮನ್ನಾ ಮಾಡಿದ್ದಾರೆ. ಇದರಲ್ಲಿ ಚಿಕ್ಕ ಹಿಡುವಳಿದಾರರಿಗೆ ಇಲ್ಲಿಯವರೆಗೂ ಸಾಲ ಕೊಟ್ಟಲ್ಲ, 50 ಸಾವಿರದ ಮೇಲೆ ಇರುವಂತಹ ಸಾಲವನ್ನು ಮಾತ್ರ ಕೊಟ್ಟಿದ್ದಾರೆ. ಈಗ 2 ಲಕ್ಷದವರೆಗೆ ಸಾಲ ಮನ್ನಾ ಮಾಡಿದ್ದಾರೆ ಇದು ಸಕರ್ಾರಕ್ಕೆ ಅಂದುಕೊಳ್ಳುವಷ್ಟು ಹೊರೆಯೇನಲ್ಲ.

 34ಸಾವಿರ ಕೋಟಿ ಎಂದು ಹೇಳುತ್ತಾರೆ ಆದರೆ ಅಷ್ಟು ಆಗುವುದಿಲ್ಲ. 60ರಿಂದ 70ಸಾವಿರದೊಳಗೆ ಚಿಕ್ಕ ಹಿಡುವಳಿದಾರರ ಸಾಲ ಮುಗಿಯುತ್ತದೆೆ. ಹಾಗಾಗಿ ಬಜೆಟ್ ನಲ್ಲಿ ಈಗಾಗಲೇ ಘೋಷಣೆ ಮಾಡಿದ 2ಲಕ್ಷ ಬೆಳೆಸಾಲ ಮನ್ನಾವನ್ನು ಸುಸ್ತಿದಾರರಿಗೆ ಬಿಟ್ಟು  ಎಲ್ಲಾ ಖಾತೆಗಳಿಗೆ ಜಮಾ ಮಾಡಬೇಕು. ಮತ್ತು ಸಾಲ ಮನ್ನಾ ಮಾಡುವುದರ ಜೊತೆಗೆ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಟ್ಟರೆ ನಮ್ಮ ರಾಜ್ಯದಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ ರೈತರು ಎಕರೆಗೆ 10ಕ್ವಿಂಟಾಲ್ ಬೆಳೆಯುವಲ್ಲಿ 20ಕ್ವಿಂಟಾಲ್ ಬೇಳೆಯುತ್ತಾರೆ.

ಫಸಲ್ ಬೀಮಾ ಯೋಜನೆ ಕೇಂದ್ರ ಸಕರ್ಾರದಿಂದ ರೈತರ ಖಾತೆಗೆ ಜಮಾ ಆಗುತ್ತದೆ. ಅದು ರೈತರಿಗೆ ತಿಳಿಯಬೇಕೆಂದರೆ ರಾಜ್ಯ ಸಕರ್ಾರವು ಪಂಚಾಯಿತಿ ಮಟ್ಟದಲ್ಲಿ ಎಷ್ಟೆಷ್ಟು ಆಣೆವರಿ ಆಗಿದೆ ಎಂಬುದರ ಕುರಿತು ತಿಳಿಸಬೇಕು.

ಸಿದ್ದರಾಮಯ್ಯನವರು ಮಾಡಿರುವ ರೈತರ ಸಾಲ ಮನ್ನಾ ಇನ್ನುವರೆಗೂ ಜಮಾ ಆಗಿಲ್ಲ. ಈಗ ಮಾಡಿರುವ ಸಾಲ ಮನ್ನಾ ಮುಂದಿನ ನಾಲ್ಕು ವರ್ಷದವರೆಗೂ ಜಮಾ ಆಗಬಹುದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯ ನುಡಿಯುತ್ತಾ ಘೋಷಣೆ ಮಾಡಿದ ಯೋಜನೆಗಳು ಕನಿಷ್ಠ ಒಂದು ವರ್ಷದೊಳಗಾದರೂ ಅನುಷ್ಠನಾಕ್ಕೆ ಬರಬೇಕು ಎಂದರು.