ರಾಣಿ ರಾಂಪಾಲ್ ಏಕೈಕ ಗೋಲು : ಗ್ರೇಟ್ ಬ್ರಿಟನ್ ವಿರುದ್ಧ ಭಾರತಕ್ಕೆ ಜಯ

ra

ಅಂಕ್ಲೆೆಂಡ್, ಫೆ 4 - ನಾಯಕಿ ರಾಣಿ ರಾಂಪಾಲ್ ಅವರ ಏಕೈಕ ಗೋಲಿನ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ 1-0 ಅಂತರದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಗೆದ್ದು ಬೀಗಿತು. 

ಮಂಗಳವಾರ ನಡೆದ ಪಂದ್ಯದ 47ನೇ ನಿಮಿಷದಲ್ಲಿ ರಾಣಿ ರಾಂಪಾಲ್ ಅವರು ಗೋಲು ಸಿಡಿಸಿ ತಂಡದ ಖಾತೆ ತೆರೆದರು. ಅಂತಿಮವಾಗಿ ಈ ಒಂದೇ-ಒಂದು ಗೋಲು ಭಾರತವನ್ನು ಗೆಲ್ಲಿಸಿತು.

ನ್ಯೂಜಿಲೆಂಡ್ ಪ್ರವಾಸದ ಮೊದಲನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ, ನಂತರ ಸತತ ಎರಡು ಪಂದ್ಯಗಳಲ್ಲಿ ಆತಿಥೇಯರ ವಿರುದ್ಧ ಸೋಲು ಅನುಭವಿಸಿತ್ತು. ಆದರೆ, ಮಂಗಳವಾರ ನಡೆದ ಪಂದ್ಯದಲ್ಲಿ ಆಕ್ರಮಣಕಾರಿ ಪ್ರದರ್ಶನ ತೊರುವಲ್ಲಿ ಯಶಸ್ವಿಯಾಯಿತು.

ಪಂದ್ಯದ ಆರಂಭದಲ್ಲಿಯೇ ಭಾರತ ತಂಡ ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ, ಅದನ್ನು ಗೋಲಾಗಿ ಪರಿವರ್ತನೆ ಮಾಡುವಲ್ಲಿ ವಿಫಲವಾಯಿತು. ಆದರೆ, ರಕ್ಷಣಾತ್ಮಕ ಮತ್ತು ಬಿಗಿ ಪಾಸ್‌ಗಳನ್ನು ನೀಡುತ್ತ ಮುಂದೆ ಸಾಗಿದ ಭಾರತ, ಗ್ರೇಟ್ ಬ್ರಿಟನ್ ತಂಡಕ್ಕೆೆ ಗೋಲು ಗಳಿಸಬಹುದಾದ ಹಲವು ಅವಕಾಶಗಳನ್ನು ಕೊಟ್ಟಿತ್ತು. ಆದಾಗ್ಯೂ, ಗೋಲು ರಹಿತವಾಗಿ ಉಭಯ ತಂಡಗಳು ಮೊದಲನೇ ಅವಧಿ ಮುಗಿಸಿದವು.

ಆಕ್ರಮಣಕಾರಿ ದಾಳಿಯನ್ನು ಎರಡನೇ ಅವಧಿಯಲ್ಲಿ ಮುಂದುವರಿಸಿದ ಭಾರತ, ಗೋಲಿನ ಖಾತೆ ತೆರೆಯುವಲ್ಲಿ ಸಫಲವಾಯಿತು. ನಾಯಕಿ ರಾಣಿ ರಾಂಪಾಲ್ 47 ನಿಮಿಷದಲ್ಲಿ ಎದುರಾಳಿ ಗೋಲ್ ಕೀಪರ್ ವಂಚಿಸಿ ಬಲವಾಗಿ ಹೊಡೆದ ಚೆಂಡು ಗೋಲು ಪಟ್ಟಿಯಲ್ಲಿ ಸೇರುವಲ್ಲಿ ಯಶಸ್ವಿಯಾಯಿತು. ಗೋಲು ಬಿಟ್ಟುಕೊಟ್ಟ ಗ್ರೇಟ್ ಬ್ರಿಟನ್ ತಂಡ ತೀವ್ರ ಒತ್ತಡಕ್ಕೆೆ ಸಿಲುಕಿತು. ಆದರೆ, ಗೋಲು ಗಳಿಸಲಾಗದೆ 0-1 ಅಂತರದಲ್ಲಿ ಸೋಲು ಒಪ್ಪಿಕೊಂಡಿತು.