ಲಕ್ನೋ, ನ.29- ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣಕ್ಕಾಗಿ ಬೃಹತ್ ಧರ್ಮ ಸಭೆ ನಡೆಸಿ ಹಿಂದೂಗಳ ಶಕ್ತಿ ಪ್ರದಶರ್ಿಸಿದ್ದ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಈಗ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇನ್ನೂ ಒಂದು ಮಹತ್ವದ ಹೆಜ್ಜೆ ಇರಿಸಿದೆ. ಅಯೋಧ್ಯೆಯಲ್ಲಿ ಶತಾಯ-ಗತಾಯ ರಾಮಮಂದಿರ ನಿಮರ್ಾಣಕ್ಕಾಗಿ ಜನರು ಪ್ರತಿಜ್ಞಾ ವಿಧಿ ಸ್ವೀಕರಿಸಲು ತಾನು ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಇಂದು ಘೋಷಿಸಿದೆ. ಡಿ.18 ಗೀತ ಜಯಂತಿ ದಿನದಂದು ಈ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮಗಳನ್ನು ದೇಶಾದ್ಯಂತ ಒಂದು ವಾರ ನಡೆಸಲಾಗುವುದು ಎಂದು ವಿಎಚ್ಪಿಯ ಅವಧ್ ಪ್ರಾಂತ್ಯದ ಸಂಘಟನಾ ಕಾರ್ಯದಶರ್ಿ ಭೋಲೇಂದ್ರ ಹೇಳಿದ್ದಾರೆ. ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ದೇಶಾದ್ಯಂತ ಪ್ರತಿಜ್ಞಾ ಸ್ವೀಕಾರ ಸಮಾರಂಭಗಳನ್ನು ನಡೆಸುವ ಜೊತೆಗೆ ವಿವಿಧ ಭಾಗಗಳಲ್ಲಿ ಪುಟ್ಟ ಧರ್ಮ ಸಭೆಗಳು(ಹೂಂಕಾರ ಸಮಾವೇಶ) ಸಹ ನಡೆಯಲಿವೆ ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣಕ್ಕಾಗಿ ಇವುಗಳ ಮೂಲಕ ನಮ್ಮ ಹೋರಾಟ ಮತ್ತಷ್ಟು ತೀವ್ರವಾಗಲಿವೆ ಎಂದು ತಿಳಿಸಿದರು.