ಕೊಪ್ಪಳ 02: ಕ್ಷಯರೋಗ ಎಂಬುದು ಸಾಂಕ್ರಾಮಿಕ ರೋಗವಾಗಿದ್ದು ಕ್ಷಯರೋಗ ಮುಕ್ತ ಸಮಾಜ ನಿಮರ್ಾಣಕ್ಕೆ ಸಾರ್ವಜನಿಕ ಸಹಕಾರ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಸಂಘ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಗ್ರಾಮ ಪಂಚಾಯತ್ ಕಾರ್ಯಲಯ ಓಜನಹಳ್ಳಿ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಿನ್ನಾಳ ಇವರ ಸಹಯೋಗದಲ್ಲಿ ಚಿಲವಾಡಗಿ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾದ "ಸಕ್ರಿಯ ಕ್ಷಯ ರೋಗ ಪತ್ತೆ ಚಿಕಿತ್ಸೆ ಅಭಿಯಾನ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಜು. 02 ರಿಂದ 13 ರವರೆಗೆ ಸಕ್ರಿಯ ಕ್ಷಯ ರೋಗ ಪತ್ತೆ ಚಿಕಿತ್ಸೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. "ನಾಯಕರು ಬೇಕಾಗಿದ್ದಾರೆ.... ಕ್ಷಯರೋಗ ಮುಕ್ತ ವಿಶ್ವ ನಿಮರ್ಾಣಕ್ಕೆ-ಕ್ಷಯರೋಗವನ್ನು ನಿಮರ್ೂಲನೆಗೊಳಿಸಿ ಇತಿಹಾಸ ನಿಮರ್ಿಸೋಣ" ಎಂಬುವುದು ಘೋಷ ವಾಕ್ಯವಾಗಿದೆ. ಸತತ ಕೆಮ್ಮು, ಸಾಯಾಂಕಾಲ ವೇಳೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು, ಹಸಿವು ಆಗದೇ ಇರುವುದು, ಕತ್ತು ಮತ್ತು ಕಂಕಳುದಲ್ಲಿ ಗಡ್ಡೆ ಆಗುವುದು, ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಸಮೀಪದ ಕಫ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಂತಹ ಲಕ್ಷಣಗಳು ಕ್ಷಯ ರೋಗ ಹರಡಲು ಕಾರಣವಾಗುತ್ತವೆ. ಒಬ್ಬ ಕ್ಷಯರೋಗಿಯು ಚಿಕಿತ್ಸೆ ಪಡೆಯದಿದ್ದರೆ ಕೆಮ್ಮಿದಾಗ ಮತ್ತು ಸೀನಿದಾಗ ಬರುವ ತುಂತುರುಗಳಿಂದ ರೋಗಾಣು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ವರ್ಷಕ್ಕೆ 10 ರಿಂದ 15 ಜನರಿಗೆ ಪ್ರಸಾರ ಮಾಡುತ್ತಾನೆ. ಕಳೆದ ಏಪ್ರಿಲ್ ತಿಂಗಳಿನಿಂದ ಕ್ಷಯರೋಗ ಚಿಕಿತ್ಸೆಯು ದೈನಂದಿನ ಚಿಕಿತ್ಸೆಯಾಗಿದ್ದು, 08-09 ತಿಂಗಳವರೆಗೆ ಚಿಕಿತ್ಸೆಯನ್ನು ಸಂಪೂರ್ಣವಾಗಿ ತೆಗೆದುಕೊಂಡರೆ ಕ್ಷಯರೋಗವು ಖಂಡಿತವಾಗಿ ಗುಣಮುಖವಾಗುತ್ತದೆ. ಇದಕ್ಕೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಭಾರತ ಸಕರ್ಾರ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಸಲುವಾಗಿ ಪ್ರತಿ ತಿಂಗಳು 500/- ರೂ. ಅವರ ಖಾತೆಗೆ ಜಮಾ ಮಾಡುವ ಯೋಜನೆ ಜಾರಿಗೆ ತಂದಿದೆ. ಕ್ಷಯರೋಗದಿಂದ ಮುಕ್ತವಾಗಲು ಕಡ್ಡಾಯವಾಗಿ ಚಿಕಿತ್ಸೆ ಪಡೆದು ಆರೋಗ್ಯವಂತ ಸಮಾಜ ನಿಮರ್ಾಣ ಮಾಡುವಲ್ಲಿ ಹಾಗೂ ಕ್ಷಯರೋಗ ಮುಕ್ತ ಸಮಾಜ ನಿಮರ್ಿಸಲು ಎಲ್ಲರೂ ಸಹಕರಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ರಮೇಶ ಮೂಲಿಮನಿ ಅವರು ಮಾತನಾಡಿ, ಸಕ್ರಿಯ ಕ್ಷಯ ರೋಗ ಪತ್ತೆ ಚಿಕಿತ್ಸೆ ಅಭಿಯಾನ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಆರೋಗ್ಯ ಸಹಾಯಕರು, ಆಶಾ ಕಾರ್ಯಕತರ್ೆಯರು ಹಾಗೂ ಕ್ಷಯರೋಗ ನಿಯಂತ್ರಣದಡಿ ಕಾರ್ಯನಿರ್ವಹಿಸುವ ಮೇಲ್ವಿಚಾರಕ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗದ ಚಿಹ್ನೆಗಳ ಬಗ್ಗೆ ವಿಚಾರಿಸಿ ಚಿಕಿತ್ಸೆ ನೀಡುತ್ತಾರೆ. ಕ್ಷಯರೋಗಿಗಳು ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗಿನ ಮೇಲೆ ಬಟ್ಟೆ ಇಟ್ಟುಕೊಂಡು ಕೆಮ್ಮಬೇಕು, ಎಲ್ಲೆಂದರಲ್ಲಿ ಉಗಳಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳು ಹರಡುತ್ತವೆ. ಕ್ಷಯರೋಗ ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ಕ್ಷಯರೋಗವು (ಟಿ.ಬಿ.) ಮೈಕ್ರೋಬ್ಯಾಕ್ಟೇರಿಯಂ ಟ್ಯುಬರ್ಕ್ಯೂಲೋಸಿಸ್" ಎಂಬ ಸೂಕ್ಷ್ಮಣುವಿನಿಂದ ಬರುತ್ತದೆ. ಈ ರೋಗದಲ್ಲಿ ಎರಡು ಪ್ರಕಾರಗಳಿವೆ. ಶ್ವಾಸಕೋಶ ಮತ್ತು ಶ್ವಾಸಕೋಶೇತರ ಕ್ಷಯ ಎಂದು ಎರಡು ರೀತಿ ವಿಂಗಡಿಸಲಾಗಿದೆ. ಇದಕ್ಕೆ 09 ತಿಂಗಳವರೆಗೆ ಉಚಿತ ಚಿಕಿತ್ಸೆಯನ್ನು ನೇರ ನಿಗಾವಣೆ ಅಲ್ಪಾವಧಿ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ ಪೌಷ್ಠಿಕ ಆಹಾರದ ಸಲುವಾಗಿ ರೋಗಿಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಅಂಜುಮ ಪವರ್ಿನ್, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಹಿರಿಯ ಆರೋಗ್ಯ ಸಹಾಯಕ ಎಸ್.ಬಿ. ಚಿಕ್ಕನರಗುಂದ, ಓಜನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸಿದ್ದಪ್ಪ ಅಗಸಿಮುಂದಿನ, ಮೈಲಾರಪ್ಪ ಹಳ್ಳಿಗಿಡ, ರತ್ನಮ್ಮ ಕಂಬಳಿ, ನಾಗಪ್ಪ ಹೊಸಕೇರಿ, ಶಾಲಾ ಮುಖ್ಯ ಗುರು ಬಸವರಾಜ ಇಳಿಗೇರ, ಎಸ್.ಡಿ.ಎಂ.ಸಿ ಅಧ್ಯಕ್ಷ ದ್ಯಾಮಣ್ಣ ಅಂಡಗಿ ಸೇರಿದಂತೆ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿಯ ಅಧಿಕಾರಿಗಳು ಹಾಗೂ ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕತರ್ೆ, ಅಂಗನವಾಡಿ ಕಾರ್ಯಕತೆಯರು ಮತ್ತು ಶಾಲಾ ವಿಧ್ಯಾಥರ್ಿಗಳು ಭಾಗವಹಿಸಿದ್ದರು.