ಕೋಯ್ನಾದಿಂದ ಕೃಷ್ಣಾ ನದಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

ಶೇಡಬಾಳ 04: ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೋಯ್ನಾದಿಂದ ನೀರು ಬಿಡುವಂತೆ ಒತ್ತಾಯಿಸಿ ಉಗಾರ ಖುರ್ದ ಪಟ್ಟಣದ ಬಸವೇಶ್ವರ ಸರ್ಕಲ್(ಪರಸಪ್ಪ ಕಾರ್ನರ್) ದಲ್ಲಿ ಶನಿವಾರ ದಿ. 4 ರಂದು ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಆದಷ್ಟು ಬೇಗನೆ ನೀರು ಹರಿಸುವಂತೆ ಕಾಗವಾಡ ತಹಶೀಲ್ದಾರರಿಗೆ ಮನವಿ ಪತ್ರ ಅಪರ್ಿಸಿ ಒತ್ತಾಯಿಸಿದರು.

ಉಗಾರ ಪುರಸಭೆಯ ಸದಸ್ಯ ಬಾಳಕೃಷ್ಣ ಪಾಟೀಲ ಇವರ ನೇತೃತ್ವದಲ್ಲಿ ನೂರಾರು ಗ್ರಾಮಸ್ಥರು, ಮಹಿಳೆಯರು ತಲೆಯ ಮೇಲೆ ಖಾಲಿ ಕೊಡಗಳನ್ನು ತೆಗೆದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಗವಾಡ ತಹಶೀಲ್ದಾರ ಮೇಘರಾಜ ನಾಯಕ ಅವರಿಗೆ ಮನವಿ ಪ್ರ ಅಪರ್ಿಸಿ ಬಾಳಕೃಷ್ಣ ಪಾಟೀಲ ಮಾತನಾಡುತ್ತಾ ಉಗಾರ ಖುರ್ದ ಪಟ್ಟಣದ ಮೇಲಿಂದಲೇ ಹಾದು ಹೋಗಿರುವ ಕೃಷ್ಣಾ ನದಿಯು ಸಂಪೂರ್ಣ ಬತ್ತಿ ಹೋಗಿದ್ದು, ಹನಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ಜೀವ ಜಲಕ್ಕಾಗಿ ಹಗಲಿರುಳು ಪರದಾಡುವಂತಾಗಿದೆ. ಕಾರಣ ಆದಷ್ಟು ಬೇಗನೆ ಕನರ್ಾಟಕ ಸಕರ್ಾರ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸುವಂತೆ ಒತ್ತಾಯಿಸಿದರು. 

ಈ ಸಮಯದಲ್ಲಿ ರಾಜೇಶ ದಾನೋಳಿ, ಬಾಳಕೃಷ್ಣ ಪಾಟೀಲ, ವೀರಭದ್ರ ಕಟಗೇರಿ, ಮಹಾದೇವ ಕಟಗೇರಿ, ವಿಜಯ ಅಸೂದೆ, ರೋಹನ ನಾಯಿಕ, ವಿಶಾಲ ಚವ್ಹಾಣ, ಮಹೇಂದ್ರ ಗಾಡಿವಡ್ಡರ ಸೇರಿದಂತೆ ನೂರಾರು ಸ್ತ್ರೀ ಪುರುಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಗವಾಡ ಪೋಲಿಸರು ಸೂಕ್ತ ಬಂದೋಬಸ್ತ ವ್ಯವಸ್ಥೆ ಕೈಗೊಂಡಿದ್ದರು.

---------------------------------------ಬಾಕ್ಸ್--------------------------------

ಇದೇ ಸಮಯದಲ್ಲಿ ಉಗಾರ ಖುರ್ದ ಪಟ್ಟಣದ 11,12,13 ವಾಡರ್ಿನ ನಿವಾಸಿಗಳು ಕಳೆದ ಹಲವಾರು ತಿಂಗಳಿನಿಂದ ನಮ್ಮ ವಾರ್ಡಗಳಿಗೆ ನೀರು ಬರುತ್ತಿಲ್ಲವೆಂದು ಆರೋಪಿಸಿ ಉಗಾರ ಖುರ್ದ ಪುರಸಭೆಯ ಮುಂದೆ ಖಾಲಿ ಕೊಡಗಳ ಪ್ರದರ್ಶನ ಮಾಡಿ ಕೆಲವು ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಪುರಸಭೆಯ ಅಧಿಕಾರಿಗಳು ಆದಷ್ಟು ಬೇಗನೆ ಆ ವಾರ್ಡಗಳಿಗೆ ನೀರಿನ ಸಮಸ್ಯೆ ನೀಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.