ಮಹಿಳಾ ಕಲಾವಿದರಿಂದ ಸರ್ಕಾರಿ ಯೋಜನೆಗಳ ಜಾಗೃತಿ

ಹಾವೇರಿ೨೨:  ವಾರ್ತ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮಹಿಳಾ ಕಲಾ ತಂಡಗಳ ಮೂಲಕ ಸಕರ್ಾರದ ವಿವಿಧ ಯೋಜನೆಗಳ ಕುರಿತಾಗಿ ರಟ್ಟೀಹಳ್ಳಿ ತಾಲೂಕು ಹುಲ್ಲತ್ತಿ ಗ್ರಾಮ ಪಂಚಾಯತಿ ಹಿರೇಮತ್ತೂರ ಗ್ರಾಮದಲ್ಲಿ ಬೀದಿನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಆಯೋಜಿಸಲಾಯಿತು.

ದುರ್ಗಾ ದೇವಿ ಸಾಂಸ್ಕೃತಿಕ ಕಲಾತಂಡದಿಂದ ಪರಿಸರ ಜಾಗೃತಿ, ಸ್ವಚ್ಛತಾ ಆಂದೋಲನ ಹಾಗೂ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್, ಮೀನುಗಾರರ ಹಾಗೂ ನೇಕಾರರ ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳ ಜಾಗೃತಿ ಗೀತೆಗಳ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಯಿತು.

ಕನ್ನಡತಿ ಕಲಾ ತಂಡದ ಮಹಿಳಾ ಕಲಾವಿದರು ಸರ್ಕಾರದ ವಿವಿಧ ಯೋಜನೆಗಳ ಆಧಾರಿತ  ಬೀದಿನಾಟಕ ಪ್ರದರ್ಶನ ಮೂಲಕ ಗ್ರಾಮಸ್ಥರಿಗೆ ಯೋಜನೆಗಳ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳ ಕಿರು ಹೊತ್ತಿಗೆಯನ್ನು ವಿತರಿಸಲಾಯಿತು. 

ಹಿರೇಮತ್ತೂರ ಗ್ರಾಮ ಪಂಚಾಯತಿ ಪಿಡಿಓ ಪಿ.ಎಚ್. ಗಿರಿಯಣ್ಣನವರ, ಗ್ರಾ.ಪಂ.ಸದಸ್ಯರಾದ ಎಂ.ಎಸ್.ಪಾಟೀಲ, ಶಾಲಾ ಶಿಕ್ಷಕರಾದ ಎಚ್.ಆರ್.ಮಾದರ,ವಾರ್ತ ಇಲಾಖೆಯ ರಾಮಚಂದ್ರ ಉಕ್ಕಲಿ ಇತರರು ಉಪಸ್ಥಿತರಿದ್ದರು.