ಹುಬ್ಬಳ್ಳಿ/ಬೆಂಗಳೂರು-29: ಸರ್ವಮತ ಪಂಥಗಳ ಸಮಭಾವದ, ವಿಶ್ವಮಾನ್ಯ ಹಾಗೂ ವಿಶ್ವಸಂತರೆಂದೆನಿಸಿಕೊಂಡ ಪೇಜಾವರ ವಿಶ್ವೇಶತೀರ್ಥರ ಅಗಲಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಸಂಪ್ರಾದಾಯಸ್ಥ ಮಾಧ್ವ ಪೀಠ ಪರಂಪರೆಯ ಸನ್ಯಾಸಿಗಳಾಗಿದ್ದರೂ ಅಂದಿನ ಕಾಲದಲ್ಲಿಯೇ ಅಂದರೆ 60 ಹಾಗೂ 70 ರ ದಶಕದಲ್ಲಿ ಹರಿಜನ ಕೇರಿಗಳಿಗೆ ಭೇಟಿ ನೀಡಿ ಅಸ್ರ್ಪಶ್ಯತೆಯ ವಿರುದ್ಧದ ಹೋರಾಟಕ್ಕೆ ತಮ್ಮದೇ ಚಾಲನೆ ನೀಡಿದ ಅಪರೂಪದ ಸಂತರು. ವಿಶ್ವಹಿಂದೂ ಪರಷತ್ತಿನ ಸಂಸ್ಥಾಪಕರೊಬ್ಬರಾಗಿದ್ದ ವಿಶ್ವೇಶತೀರ್ಥರು ಎಲ್ಲ ಜಾತಿಮತಧರ್ಮಗಳೊಂದಿಗೆ ಸೌಹಾರ್ದಯುತ ಸೇತುವೆಯಾಗಿದ್ದರಲ್ಲದೇ ವಿಶೇಷವಾಗಿ ಹಿಂದೂ ಧರ್ಮವನ್ನು ಒಂದು ಪ್ರಬಲ ಶಕ್ತಿಯನ್ನಾಗಿಸುವಲ್ಲಿ ತನ್ಮೂಲಕ ಶ್ರೀರಾಮಜನ್ಮ ಭೂಮಿ ಚಳುವಳಿಗೆ ಒಂದು ಶಕ್ತಿಯುತ ಗತಿಯನ್ನು ನೀಡಿ ಮುನ್ನಡೆಸಿದ ಮಹಾನ್ ಚೇತನ.
ಪೀಠಾಧಿಪತಿಳಾಗಿ ರಾಜಕಾರಣದಲ್ಲಿ ಒಬ್ಬರಪರ ವಿರೋಧವೆಂದು ಎಂದೂ ಮಾಡದೇ ನಿರಂತರವಾಗಿ ರಾಜಕೀಯ ನಾಯಕರಿಗೆ ಸೂಕ್ತ ಹಾಗು ಕ್ಲಿಷ್ಠ ಸಂದರ್ಭಗಳಲ್ಲಿ ತಮ್ಮ ದಿವ್ಯ ವ್ಯಕ್ತಿತ್ವದ ಪ್ರಭಾವದಿಂದ ಮಾರ್ಗದರ್ಶನ ನೀಡಿ ಸಕಲರಿಗೂ ರಾಜಋಷಿಗಳಂತಿದ್ದರು.
ವಿಶ್ವೇಶತೀರ್ಥ ಶ್ರೀಪಾದಂಗಳವರ ಹೆಸರು ಕೇಳಿದೊಡನೇ, ಹಲವಾರು ಆಯಾಮದ, ವ್ಯಕ್ತಿತ್ವ ಕಣ್ಣಮುಂದೆ ಬರುತ್ತದೆ. ಅವರು ದೇಶ ಕಂಡ ಸಂತ ಶ್ರೇಷ್ಠರಲ್ಲಿ ಒಬ್ಬರು. ಹಲವು ಸ್ಥಾಪಿತ ಸೂತ್ರಗಳನ್ನು ಮೀರಿ ಕಲ್ಮಶವಿಲ್ಲದ ನಗುವಿನೊಂದಿಗೆ ಎಲ್ಲರನ್ನೂ ಜೊತೆಗೆಯಾಗಿ ಕೊಂಡೊಯ್ಯಬಲ್ಲ ಧಾಮರ್ಿಕ ನಾಯಕರಾಗಿದ್ದವರು. ಧರ್ಮ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಹಿಂದೂ ಧರ್ಮದ ಸಮರತೆ ಸಾರವನ್ನು ಜಗತ್ತಿಗೆ ತೆರೆದಿಟ್ಟ ಮಹಾನ ಚೇತನ್ ಇಂದು ನಮ್ಮೊಂದಿಗೆ ಇಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ. ಹಿಂದೂ ಸನ್ಯಾಸ ಪರಂಪರೆಗೆ ಮಾದರಿಯಾದ ವಿಶ್ವೇಶ ತೀರ್ಥಯತಿಗಳು 8ನೇ ವಯಸ್ಸಿಗೆ ಸನ್ಯಾಸತ್ವ ಪಡೆದು ವಾದಿರಾಜರ ನಂತರ ಉಡುಪಿ ಮಠದಲ್ಲಿ 5 ನೆಯ ಬಾರಿ ಪಯರ್ಾಯ ಅಲಂಕರಿಸಿದ ಖ್ಯಾತಿ ವಿಶ್ವೇಶ ತೀರ್ಥ ಸ್ವಾಮಿಗಳದ್ದು ಸಂಪ್ರದಾಯಸ್ಥ ಹಿಂದೂ ಪರಂಪರೆಯಲ್ಲಿ ಬೆಳೆದು ಬಂದ ಸನ್ಯಾಸಿಯಾಗಿದ್ದರೂ ಪ್ರಗತಿಪರ ಚಿಂತನೆಗಳಿಂದ ತಮ್ಮದೇ ವಿಶೇಷ ಸ್ಥಾನಪಡೆದಿದ್ದ ಪೀಠಾಧಿಪತಿಯಾಗಿದ್ದರು. ತೀರ ಇತ್ತೀಚೆಗೆ ಶ್ರೀಗಳು ದೆಹಲಿಗೆ ಬಂದಾಗ ನನ್ನನ್ನು ಕರೆಸಿಕೊಂಡು ಬೆಂಗಳೂರಿನಲ್ಲಿರುವ ಅವರು ನಡೆಸುತ್ತಿರುವ ಕೃಷ್ಣ ಸೇವಾಶ್ರಮ ಆಸ್ಪತ್ರೆಯನ್ನು ಬೆಂಗಳೂರಿನ ಮಾರತ್ಹಳ್ಳಿ ಪ್ರದೇಶದಲ್ಲಿ ವಿಸ್ತರಿಸುವ ಯೋಜನೆಯಿದ್ದು ಅದಕ್ಕೆ ನನ್ನ ಸಹಾಯ ಸಹಕಾರ ಅಪೇಕ್ಷಿಸಿದ್ದರು. ಅದು ತಮ್ಮ ಮನವಿಯಲ್ಲ ಆಜ್ಞೆ ಎಂದು ತಿಳಿದು ಎಲ್ಲ ಸಹಾಯ ನೀಡುವೆಯೆಂದು ತಾವು ತಿಳಿಸಿದ್ದನ್ನು ನೆನೆಸಿಕೊಂಡಿರುವ ಜೋಶಿ ಇಂತಹ ಇಳಿವಯಸ್ಸಿನಲ್ಲಿ ಹಾಗೂ ವಿಷಮ ಆರೋಗ್ಯ ಸಂದರ್ಭದಲ್ಲಿಯೂ ಅವರ ಸಾಮಾಜಿಕ ಹಾಗೂ ಬಡಜನಪರ ಭಾವನೆ ಶ್ಲಾಘನೀಯ ಎಂದು ತಿಳಿಸಿದ್ದಾರೆ. ಅವರ ಅಗಲಿಕೆಯಿಂದ ನಮ್ಮ ದೇಶ ಒಬ್ಬ ಶ್ರೇಷ್ಠ ವಿಶ್ವಮಾನ್ಯ ಸಂತನನ್ನು ಕಳೆದುಕೊಂಡು ಬಡವಾಗಿದೆಯೆಂದಿರುವ ಜೋಶಿ ಅವರ ಆತ್ಮಕ್ಕೆ ಶಾಂತಿ-ಶ್ರದ್ಧಾಂಜಲಿ ಅರ್ಪಿ ಸಿದ್ದಾರೆ.