ನವದೆಹಲಿ, ನ.20- ದೇಶದ ಆಥರ್ಿಕತೆ ಸದೃಢಗೊಳಿಸುವುದನ್ನು ತಮ್ಮ ಆಡಳಿತದ ಪ್ರಥಮ ಆದ್ಯತೆಯ ಕಾರ್ಯಸೂಚಿಯನ್ನಾಗಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ ಆಥರ್ಿಕತೆಯನ್ನು ದ್ವಿಗುಣಗೊಳಿಸುವ ಅಂದರೆ ಐದು ಲಕ್ಷ ಕೋಟಿ ಡಾಲರ್ ಆಥರ್ಿಕತೆಯನ್ನಾಗಿಸುವ ಹೆಗ್ಗುರಿ ಹೊಂದಿದ್ದಾರೆ.
ಆಥರ್ಿಕತೆ ದ್ವಿಗುಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಕರ್ಾರದ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮುಖ್ಯವಾಗಿ ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳಗೊಳಿಸಿ ವಿಶ್ವದ ಟಾಪ್ 50 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ಇರುವಂತೆ ಮಾಡಲು ಗುರಿ ಹೊಂದಿರುವುದಾಗಿ ಹೇಳಿದ್ದಾರೆ.
ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳೀಕರಣದ ಕುರಿತಾದ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸುಧಾರಣಾ ನೀತಿಗಳಿಗೆ ಎದುರಾಗಿದ್ದ ಅಡೆ-ತಡೆಗಳನ್ನು ತಮ್ಮ ಸಕರ್ಾರ ನಿವಾರಿಸಿದ್ದು, ನೀತಿ ಕೇಂದ್ರಿತ ಆಡಳಿತ ನೀಡುತ್ತಿದೆ. ಈ ಪರಿಣಾಮವಾಗಿ ಭಾರತ ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳಗೊಳಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ 142ನೆ ಸ್ಥಾನದಿಂದ 77ನೆ ಸ್ಥಾನಕ್ಕೆ ಸುಧಾರಣೆ ಕಂಡಿದೆ ಎಂದಿದ್ದಾರೆ.
ಉದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ಸುಧಾರಣಾ ಕ್ರಮಗಳನ್ನು ಮತ್ತಷ್ಟು ಕೈಗೊಂಡು ದೇಶದಲ್ಲಿ ಉದ್ಯಮ ಸ್ಥಾಪಿಸಲು ಮುಂದಾಗುವ ಸಂಸ್ಥೆಗಳಿಗೆ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳೀಕರಣಗೊಳಿಸುವುದಾಗಿ ಮೋದಿ ಇದೇ ವೇಳೆ ಭರವಸೆ ನೀಡಿದ್ದು, ಭಾರತವನ್ನು 5 ಟ್ರಿಲಿಯನ್ ಡಾಲರ್ ಗಾತ್ರದ ಆಥರ್ಿಕತೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಭಾರತ ನಿರಂತರ ಸುಧಾರಣಾ ಕ್ರಮಗಳಿಗೆ ತೆರೆದುಕೊಳ್ಳುತ್ತಿರುವುದರಿಂದಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ವಿಶ್ವಾಸ ಗಳಿಸುತ್ತಿದ್ದು, ಐಎಂಎಫ್, ವಿಶ್ವ ಆಥರ್ಿಕ ವೇದಿಕೆ, ಯುಎನ್ ಸಿಟಿಎಡಿಗಳಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದೆ. ಈ ಎಲ್ಲ ಸಂಸ್ಥೆಗಳೂ ಭಾರತದ ಬಗ್ಗೆ ವಿಶ್ವಾಸ ಹೊಂದಿದ್ದು, ಶೀಘ್ರವೇ ಭಾರತವನ್ನು 5 ಟ್ರಿಲಿಯನ್ (ಲಕ್ಷ ಕೋಟಿ) ಡಾಲರ್ ಕ್ಲಬ್ ರಾಷ್ಟ್ರಗಳಿಗೆ ಸೇರಿಸಲಿದ್ದೇವೆ. ಇದನ್ನು ಸಾಧಿಸಬೇಕಾದರೆ ಆಥರ್ಿಕತೆಯ ಪ್ರತಿ ಕ್ಷೇತ್ರವನ್ನೂ ಸುಧಾರಣೆಯಾಗುವಂತೆ ಮಾಡಬೇಕಿದೆ ಎಂದು ಮೋದಿ ಹೇಳಿದ್ದಾರೆ.