ಮಾಸ್ಕೋ 06: ಪೋಚರ್ುಗಲ್ ತಂಡದ ನಾಯಕ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್ ಸ್ಟಾರ್ ಕ್ರಿಸ್ಚಿಯಾನೋ ರೊನಾಲ್ಡೋ ಆ ತಂಡವನ್ನು ತೊರೆದು ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ನ ನಾಕೌಟ್ ಹಂತದಲ್ಲಿ ಪೋಚರ್ುಗಲ್ ತಂಡ ಹೊರಬಿದ್ದ ಬೆನ್ನಲ್ಲೇ ಇದೀಗ ಎಲ್ಲ ಆಟಗಾರರ ಚಿತ್ತ ಕ್ಲಬ್ ಟೂನರ್ಿಗಳತ್ತ ನೆಟ್ಟಿದೆ. ಏತನ್ಮಧ್ಯೆ ಫುಟ್ಬಾಲ್ ಲೋಕದಲ್ಲಿ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್ ಸ್ಟಾರ್ ಕ್ರಿಸ್ಚಿಯಾನೋ ರೊನಾಲ್ಡೋ ತಮ್ಮ ತಂಡವನ್ನು ತೊರೆದು ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ರೊನಾಲ್ಡೋ ಮತ್ತು ಜುವೆಂಟಸ್ ತಂಡದ ಆಡಳಿತ ಮಂಡಳಿ ಈ ಬಗ್ಗೆ ಅಂತಿಮ ನಿಧರ್ಾರಕ್ಕೆ ಬಂದಿದ್ದು, ಕೇವಲ ಅಧಿಕೃತವಾಗಿ ಒಪ್ಪಂದಕ್ಕೆ ಸಹಿಹಾಕುವುದು ಮಾತ್ರ ಬಾಕಿ ಇದೆ ಎನ್ನಲಾಗಿದೆ. ರಿಯಲ್ ಮ್ಯಾಡ್ರಿಡ್ ತಂಡದ ಸಾರ್ವಕಾಲಿಕ ಅತ್ಯಧಿಕ ಗೋಲು ಬಾರಿಸಿದ ಆಟಗಾರ ರೊನಾಲ್ಡೋ ದಿಢೀರ್ ತಮ್ಮ ತಂಡವನ್ನು ತೊರೆಯಲು ಕಾರಣವೇನು ಎಂಬುದು ಚಚರ್ೆಗೆ ಗ್ರಾಸವಾಗಿದೆ.
ಈ ಬಗ್ಗೆ ಖ್ಯಾತ ಫುಟ್ಬಾಲ್ ಸುದ್ದಿಗಳ ವೆಬ್ ಸೈಟ್ ಗೋಲ್ ಡಾಟ್ ಕಾಮ್ ಈ ಬಗ್ಗೆ ವರದಿ ಮಾಡಿದ್ದು, ರಿಯಲ್ ಮ್ಯಾಡ್ರಿಡ್ ತಂಡದೊಂದಿಗೆ ರೊನಾಲ್ಡೋ ರವಾನೆ ಕುರಿತಂತೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ಈ ಒಪ್ಪಂದಕ್ಕೆ ರಿಯಲ್ ಮ್ಯಾಡ್ರಿಡ್ ತಂಡ ಒಪ್ಪಿದ್ದೇ ಆದರೆ ಆಗ ಜುವೆಂಟಸ್ ತಂಡ ರಿಯಲ್ ಮ್ಯಾಡ್ರಿಡ್ ಗೆ ಸುಮಾರು100 ರಿಂದ 120 ಮಿಲಿಯನ್ ಯೂರೋಸ್ (8,05,24,00,000 ರಿಂದ 9,66,25,09,681.50 ರೂ) ಹಣ ನೀಡಬೇಕಾಗುತ್ತದೆ. ಇದೂ ಕೂಡ ಫುಟ್ಬಾಲ್ ಲೋಕದ ಸಂಚಲನಕ್ಕೆ ಕಾರಣವಾಗಿದೆ.
ಫುಟ್ಬಾಲ್ ಇತಿಹಾಸದಲ್ಲೇ ಓರ್ವ ಆಟಗಾರರನ ಖರೀದಿ ಮತ್ತು ಮಾರಾಟಕ್ಕೆ ಇಷ್ಟು ದೊಡ್ಡ ಮೊತ್ತದ ಹಣ ಹರಿದಾಡಿದ ಪ್ರಸಂಗವೇ ಮತ್ತೊಂದು ಇಲ್ಲ. ಇಂತಹುದೊಂದು ಐತಿಹಾಸಿಕ ಘಟನೆಗೆ ರೊನಾಲ್ಡೋ ಕಾರಣವಾಗಿದ್ದಾರೆ.
ಪೋಚರ್ುಗಲ್ ತಂಡ ಈ ಅಪ್ರಮತಿಮ ಆಟಗಾರನಿಗೆಜುವೆಂಟಸ್ ನೀಡಲಿರುವ ಸಂಭಾವನೆ ಕೂಡ ಫುಟ್ಬಾಲ್ ಲೋಕದ ಅಚ್ಚರಿಗೆ ಕಾರಣವಾಗಿದೆ. ವೆಬ್ ಸೈಟ್ ವರದಿ ಮಾಡಿರುವಂತೆ ಜುವೆಂಟಸ್ ತಂಡ ರೊನಾಲ್ಡೋಗೆ ಭಾರಿ ಮೊತ್ತದ ಸಂಭಾವನೆ ನೀಡಲಿದ್ದು, ಮೂಲಗಳ ಪ್ರಕಾರ ರೊನಾಲ್ಡೋ ಟೂನರ್ಿಯೊಂದಕ್ಕೆ ಬರೊಬ್ಬರಿ 30 ಮಿಲಿಯನ್ ಯೂರೋಸ್ (ಸುಮಾರು 2,41,54,80,000.00) ಪಡೆಯಲಿದ್ದಾರೆ ಎಂದು ಹೇಳಲಾಗಿದೆ.