ಪೆಟ್ರೋಲ್- ಡಿಸೈಲ್ ಹೆಚ್ಚಿನ ತೆರೆಗೆ ಕಡಿತಗೊಳಿಸುವಂತೆ ಆಗ್ರಹ


ಲೋಕದರ್ಶನ ವರದಿ

ವಿಜಯಪುರ 06:  ಪೆಟ್ರೋಲ್ ಮತ್ತು ಡಿಸೈಲ್ ಹೆಚ್ಚಿನ ತೆರಿಗೆ ನೀಡಿದ್ದು ಮತ್ತೊಮ್ಮೆ ಮುಖ್ಯಮಂತ್ರಿಗಳು ಪುನರ ಪರಿಶೀಲನೆ ಮಾಡಿ ಜನಸಾಮಾನ್ಯರ ಮೇಲೆ ಆಗುವ ಹೊರೆಯನ್ನು ಕಡಿತಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯದಶರ್ಿ ಹಾಸಿಂಪೀರ ವಾಲಿಕಾರ ಆಗ್ರಹಿಸಿದ್ದಾರೆ. ಈಗಾಗಲೇ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡಿಸೈಲ್ ಮೇಲೆ ಹಾಕಿದ ತೆರಿಗೆ ಗ್ರಾಹಕರಿಗೆ ಭಾರವಾಗಿದೆ. ರಾಜ್ಯ ಸರಕಾರವು ಮತ್ತೊಮ್ಮೆ ಹೆಚ್ಚಿನ ತೆರಿಗೆ ನೀಡಿದ್ದು ಸೂಕ್ತವಾದುದ್ದಲ್ಲ. ಬಡವರ ಆಹಾರದಲ್ಲಿ ಕಡಿತಗೊಳಸದೆ ಮೊದಲಿನಂತೆ ಯೋಜನೆಯನ್ನು ಜಾರಿಗೆಗೊಳಿಸಬೇಕು. ಹಿಂದಿನ ಸರಕಾರ ಮಾಡಿದ ಬಜೆಟ್ನ್ನು ಪರಿಪೂರ್ಣವಾಗಿ ಜಾರಿಗೆಯಾಗುವಂತೆ ಗಮನ ಹರಿಸಬೇಕು. ಎಲ್ಲ ತರಹದ ರೈತರಿಗೆ ಸಾಲ ಮನ್ನಾ ಯೋಜನೆ ಉಪಯುಕ್ತವಾಗಬೇಕು ಎಂದು ಕೆಪಿಸಿಸಿ ಕಾರ್ಯದಶರ್ಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.