ಲೋಕದರ್ಶನ ವರದಿ
ಕೊಪ್ಪಳ 10: ರಾಜ್ಯ ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಮಾನವ ಹಕ್ಕುಗಳ ಕಾಯ್ದೆ ನಿರಂತರವಾಗಿ ಉಲ್ಲಂಘನೆ ಯಾಗುತ್ತಿದೆ. ಮಾನವ ಹಕ್ಕು ಸ್ಥಾಪನೆಯಾದರು ಇದರ ಬಗ್ಗೆ ಜನರಲ್ಲಿ ಸರಿಯಾದ ರೀತಿಯಲ್ಲಿ ಜಾಗೃತಿ ಇಲ್ಲದಂತಾಗಿದೆ. ಮಾನವ ಹಕ್ಕು ಉಲ್ಲಂಘನೆ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ನ್ಯಾಯವಾದಿ ಎನ್.ಸಿ.ಹೆಚ್.ಆರ್.ಓ ಮುಖ್ಯಸ್ಥ ಟಿ.ಹೆಚ್. ಅಬುಬಕರ್ ಅಭಿಪ್ರಾಯ ಪಟ್ಟರು.
ಕೊಪ್ಪಳದ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಗರದ ಸರಕಾರಿ ಪದವಿಪೂರ್ವ ಕಾಲೇಜ್ ಸಭಾಂಗಣದಲ್ಲಿ ರವಿವಾರದಂದು ಆಯೋಜಿಸಲಾದ ವಿಶ್ವ ದೌರ್ಜನ್ಯ ವಿರೋಧಿ ದಿನ ಪ್ರಯುಕ್ತ ಪ್ರಭುತ್ವ ಮತ್ತು ಮಾನವ ಹಕ್ಕುಗಳು ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
1993 ರಂದು ದೇಶದಲ್ಲಿ ಮಾನವ ಹಕ್ಕು ಸ್ಥಾಪನೆ ಯಾದರೆ ರಾಜ್ಯದಲ್ಲಿ 2005 ರಲ್ಲಿ ಮಾನವ ಹಕ್ಕು ಸ್ಥಾಪನೆಯಾಗಿದೆ. ಆದರು ಕೂಡ ಇದರ ನಿರಂತರವಾಗಿ ಉಲ್ಲಂಘನೆಯಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಸಕರ್ಾರಗಳು ವಿಫಲಗೊಂಡಿವೆ. ಶೋಷಿತವರ್ಗ ಶೋಷಣೆಗೆ ಒಳಗಾಗುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಗತಿಪರರು ಇದರ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಜನತೆಗೆ ಅರಿವು ಮೂಡಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳದ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ವಹಿಸಿದ್ದರು. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ನ್ಯಾಯವಾದಿ ಸಂಧ್ಯಾ ಮಾದಿನೂರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಮಹಮ್ಮದ್ ಕಕ್ಕಂಜಿ ಸ್ವಾಗತಿಸಿದರು, ಮಲ್ಲೇಶ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.