ಶ್ರೀನಗರ 17, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ಪಂಚಾಯಿತಿ ಚುನಾವಣೆಗೆ ವ್ಯಾಪಕ ಭದ್ರತೆಯೊಂದಿಗೆ ಮತದಾನ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.
ಒಟ್ಟು 3,296 ಮತಕೇಂದ್ರಗಳಲ್ಲಿ(ಜಮ್ಮುವಿನ 1,993 ಹಾಗೂ ಕಾಶ್ಮೀರದ 1.303 ಮತಗಟ್ಟೆಗಳು) ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತದಾನ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಮತದಾರರು ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಾಶ್ಮೀರದ 291 ಮತ್ತು ಜಮ್ಮು ವಲಯದ 196 ಮತಗಟ್ಟೆಗಳೂ ಸೇರಿದಂತೆ ಒಟ್ಟು 687 ಮತಕೇಂದ್ರಗಳನ್ನು ಅತ್ಯಂತ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಮೊದಲ ಹಂತದ ಪಂಚಾಯಿತಿ ಚುನಾವಣೆಯಲ್ಲಿ 85 ಸರಪಂಚರು(ಪಂಚಾಯತಿ ಅಧ್ಯಕ್ಷರು) ಹಾಗೂ 1,676 ಪಂಚರು(ಪಂಚಾಯಿತಿ ಸದಸ್ಯರು ಅವಿರೋಧವಾಗಿ ಚುನಾಯಿತರಾಗಿದ್ದಾರೆ. ಉಳಿದ 430 ಸರಪಂಚ್ ಮತ್ತು 1,845 ಪಂಚರ ಸ್ಥಾನಗಳಿಗೆ ಮತದಾನವಾಗಿದ್ದು, ಒಟ್ಟು 5,585 ಅಭ್ಯಥರ್ಿಗಳು ಕಣದಲ್ಲಿದ್ದಾರೆ.