ಲೋಕದರ್ಶನ ವರದಿ
ಸಿರುಗುಪ್ಪ09: ಭಾರತ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಪ್ರತಿಯೊಬ್ಬ ಹಾಜಿ ಅಲ್ಲಾನಲ್ಲಿ ಪ್ರಾಥರ್ಿಸಿ ದುವಾ ಮಾಡಬೇಕು. ಹಜ್ ಯಾತ್ರಾಥರ್ಿಗಳಿಗಾಗಿ ಭಾರತ ಸಕರ್ಾರ ಈ ಹಿಂದೆ ಹಲವು ದಶಕಗಳಿಂದ ಹಣಕಾಸಿನ ನೆರವು ನೀಡುತ್ತಿತ್ತು ಎಂದು ಕನರ್ಾಟಕ ರಾಜ್ಯ ಹಜ್ ಕಮಿಟಿ ಅಧ್ಯಕ್ಷರು ಹಾಗೂ ಮಾಜಿ ಮಂತ್ರಿಗಳಾದ ಆರ್. ರೋಷನ್ ಬೇಗ್ ಅವರು ಹೇಳಿದರೂ. ಹೊಸಪೇಟೆ ನಗರದ ಫೂಲ್ ಬನ ಉದರ್ು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಹಜ್ ಕಮಿಟಿಯಿಂದ ಹಮ್ಮಿಕೊಂಡ ಹಜ್ಜ್ ಯಾತ್ರಾಥರ್ಿಗಳ ಎರಡು ದಿನಗಳ ತರಬೇತಿ ಕಾಯರ್ಾಗಾರ ಶಿಬಿರವನ್ನು ಚಾಲನೆ ನೀಡಿ, ಅವರು ಮಾತನಾಡಿ ಹಜ್ ಯಾತ್ರಿಕರಿಗೆ ಕೇಂದ್ರ ಸಕರ್ಾರದ ನೆರವೂ ಬೇಕಿಲ್ಲ, ಆಥರ್ಿಕವಾಗಿ ಸಬಲರಾದವರು ಮತ್ತು ಇಷ್ಟ ಶಕ್ತಿ ಇದ್ದವರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಹಜ್ ಯಾತ್ರಿಕರು ಈ ತರಬೇತಿಯ ಶಿಬಿರ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಮೂಲಕ ತಮ್ಮ ಜೀವನ ಪವಿತ್ರಗಳಿಸಿಕೊಳ್ಳಬೇಕೆಂದು ಅಲ್ಲದೆ ಕನರ್ಾಟಕದಲ್ಲಿ ಕಾಂಗ್ರೆಸ್ ಜಾತ್ಯತೀತ ಜನತಾ ದಳ ಸಮ್ಮಿಶ್ರ ಸಕರ್ಾರ ಐದು ವರ್ಷಗಳ ಅಧಿಕಾರ ಅವಧಿ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಜ್ ಕಮಿಟಿ ಹೊಸಪೇಟೆ ತಾಲ್ಲೂಕು ಅಧ್ಯಕ್ಷರಾದ ಅಲ್ಹಾಜ್ ಎಚ್. ಎನ್. ಮಹಮ್ಮದ್ ಇಮಾಮ್ ನಿಯಾಜಿ ಅವರು ಮಾತನಾಡಿ ಹಜ್ ಯಾತ್ರೆಗೆ ತೆರಳುವ ಪ್ರತಿಯೊಬ್ಬರೂ ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ ಇಸ್ಲಾಂ ಧರ್ಮದ ವಿಚಾರ ಆಚಾರ ನಿಯಮಗಳ ಕಾಲ ನಡೆದ ಮಾಹಿತಿ ಪಡೆದಿದ್ದು ಇದರ ಲಾಭ ಗಳಿಸಿಕೊಳ್ಳಬೇಕೆಂದು ವಿನಂತಿಸಿದರೂ.
ಕನರ್ಾಟಕ ಹಜ್ ಕಮಿಟಿ ಮಾಜಿ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಹೌಸ್ ದಾದಾ ಅಶ್ರಫಿ ಅವರು ಮಾತನಾಡಿ ಇಮಾಮ್ ನಿಯಾಜಿ ಅವರ ನೇತೃತ್ವದಲ್ಲಿ ಜರುಗುತ್ತಿರುವ ಕಾಯರ್ಾಗಾರ ಶ್ಲಾಘನೀಯ ಎಂದರು. ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ, ರಾಯಚೂರು, ಹಾಗೂ ಬಳ್ಳಾರಿ ಜಿಲ್ಲೆಗಳ 1250 ಯಾತ್ರಾಥರ್ಿಗಳು ಪಾಲ್ಗೊಂಡಿದ್ದರು. ಸೈಯದ್ ಎಜಾಜ್ ಅಹ್ಮೆದ್ , ಲುತ ಫುಲ್ಲಾ ಮಜಹರ್ ರಶೀದ್ ಧಾಮರ್ಿಕ ಪಂಡಿತರು ತರಬೇತಿ ನೀಡಿದರು.
ಬಿ. ಅನ್ಸರ್ ಬಾಷಾ, ಬಿ. ಭಾಷಾ, ಮೊಹಮ್ಮದ್ ಗೌಸ್, ಖಾಜಾ ಹುಸೇನ್ ನಿಯಾಜಿ, ಅಬ್ದುಲ್ ಖಾದರ್, ಬಿ ಮೊಹಮ್ಮದ್ ಸಾದಿಕ್, ಜಾಫರ್ ಸಾಬ್, ಸೈಯ್ಯದ್ ನಾಜಿಮೋದ್ದಿನ್, ಬಿ. ಕಾಂ. ಮಾಬೂಸಾಬ್, ಕೆ.ಎಸ್. ದಾದಾಪೀರ್, ಮುಷೀರ್, ಫಿರೋಜ್, ರೇಷ್ಮಾ, ಇಸ್ಮಾಯಿಲ್, ಬಿ. ನಾಸೀರ್, ಸೈಯದ್ ಬಾಷಾ, ನಜೀರ್ ಖಾನ್, ಕೆ.ಮಹೇಶ್, ಕೃಷ್ಣ ಯಂಕಪ್ಪ, ತೇಜೋ ನಾಯಕ್, ಸಿರುಗುಪ್ಪದ ಕನರ್ಾಟಕ ವಕ್ಫ್ ಬೋಡರ್್ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯರಾದ ಹಾಜಿ ಅಬ್ದುಲ್ ನಬಿ ಚಿಷ್ಟಿ ನಿಜಾಮಿ, ಮಾಜಿ ಕಂದಾಯ ಪರಿವೀಕ್ಷಕ ಹಾಜಿ ಎಸ್ ಅಬ್ದುಲ್ ಖಾದರ ಬಾಷಾ, ಸಿ.ಎಂ.ಸಿ. ನೂರ್ ಸಾಬ್, ಜಾಮಿಯಾ ಮಸ್ಜಿದ್ ಅಧ್ಯಕ್ಷರು ಮುಲ್ಲಾ ಬಾಬು, ಇಮಾಮ್ ಸೈಯದ್ ಎಂ. ವಾಹಿದ್, ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.