ಯುವತಿಯ 'ಜೀವಂತ ಹೃದಯ ರವಾನೆ' ಮೈಸೂರಿನಿಂದ ಬೆಂಗಳೂರಿಗೆ

ಮೈಸೂರು:  ಚಾಮುಂಡಿ ಬೆಟ್ಟದಲ್ಲಿಮೊನ್ನೆ ಅಪಘಾತ ನಡೆದಿತ್ತು. ವೇಳೆ ಬೈಕ್ನಲ್ಲಿದ್ದ ಸವಾರ ಸ್ಥಳದಲ್ಲೇ ಸಾವನಪ್ಪಿದ್ದ. ಇನ್ನು ಹಿಂಬದಿಯಲ್ಲಿಕುಳಿತಿದ್ದ ಯುವತಿ ನಯನಾ ಗಂಭೀರವಾಗಿ ಗಾಯಗೊಂಡಿದ್ದಳು.  

ತಕ್ಷಣ ಯುವತಿಯನ್ನ  ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ನಯನಾ ಬದುಕುಳಿಯುವುದು  ಕಷ್ಟ ಎಂದು ತಿಳಿಸಿದ್ದರು. ಹಿನ್ನೆಲೆ ನಯನಾ ಹೃದಯ ಸ್ಥಳಾಂತರಕ್ಕೆ  ಪೋಷಕರು ಒಪ್ಪಿಗೆ ಸೂಚಿಸಿದ್ದರು

ಇಂದು ಮನೆಯವರ ಒಪ್ಪಿಗೆ ಪಡೆದು ಶಸ್ತ್ರಚಿಕಿತ್ಸೆ ಮೂಲಕ ಹೃದಯ ತೆಗೆದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಪೊಲೀಸರ ಸಹಕಾರದೊಂದಿಗೆ ಆಂಬ್ಯುಲೆನ್ಸ್ನಲ್ಲಿ ಹೃದಯ ರವಾನಿಸಲಾಯಿತು