ಬೇಡ ಜಂಗಮ ಸಂವಿಧಾನಿಕ ಹಕ್ಕು: ಪಾಟೀಲ
ರಾಮದುರ್ಗ 03: ಬೇಡಜಂಗಮ ಎನ್ನುವುದು ಸಂವಿಧಾನಿಕ ಹಾಗೂ ಶಾಸನೀಯ ಹಕ್ಕಾಗಿದ್ದು, ಸಮಾಜದ ಸಾಮಾಜಿಕ, ಆಥರ್ಿಕ, ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನಡೆಯಾಗುವ ನಿಟ್ಟಿನಲ್ಲಿ ಸರಕಾರಗಳು ನಿಧರ್ಾರ ತೆಗೆದುಕೊಳ್ಳುತ್ತಿವೆ ಎಂದು ಅಖಿಲ ಕನರ್ಾಟಕ ಬೇಡಜಂಗಮ ಸಮಾಜದ ರಾಜ್ಯಾಧ್ಯಕ್ಷ, ನ್ಯಾಯವಾದಿ ವೀರೇಂದ್ರ ಪಾಟೀಲ ಆರೋಪಿಸಿದರು.
ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಗಮ ಸಮುದಾಯಕ್ಕೆ ಸರಕಾರದಿಂದ ಪದೇ ಪದೇ ಅನ್ಯಾಯವಾಗುತ್ತಿವುದು ಖಂಡನೀಯ. ಸ್ವಾತಂತ್ರ್ಯ ಪೂರ್ವದಿಂದಲೂ ಆಡಳಿತದಲ್ಲಿರುವ ಸರಕಾರಗಳು ಬೇಡ ಜಂಗಮರಿಗೆ ಬೇಡಜಂಗಮ ಪ್ರಮಾಣ ಪತ್ರ ನೀಡದೇ ಕಾನೂನು ಬಾಹಿರ ನಿಲುವು ಹೊಂದಿವೆ. ಬೇಡ ಜಂಗಮರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುತ್ತಲೇ ಸಾಗಿವೆ. ಅಷ್ಟೇ ಅಲ್ಲದೇ ಪ್ರಸಕ್ತ ಮೈತ್ರಿ ಸರಕಾರವೂ ಕೂಡಾ ಇದೇ ನಿಲುವು ತಾಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಂಗಮರು ತಮ್ಮ ಹಕ್ಕನ್ನು ಪಡೆಯಲು ಧ್ವನಿ ಎತ್ತದಂತೆ ಮಾಡಲು ವಿಫಲ ಪ್ರಯತ್ನಗಳನ್ನು ನಡೆಸಿವೆ. ಇದಕ್ಕೆ ಸೂಕ್ತ ಉದಾಹರಣೆ ಎಂಬಂತೆ 23.06.2018 ರಿಂದ ಚಿಕ್ಕೋಡಿಯಲ್ಲಿ ನಮ್ಮ ಸಮಾಜದ ಬಾಂಧವರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡದಂತೆ ತಡೆಹಿಡಿದು, ಸಮುದಾಯ ಜಂಗಮರಿಗೆ ನೀಡಿದ ಸಂವಿಧಾನಿಕ ಹಕ್ಕನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಹುನ್ನಾರ ನಡೆಯುತ್ತಿರುವುದು ವಿಷಾದನೀಯ ಎಂದರು.
ಸರಕಾರ, ಕೆಲ ಪಟ್ಟಭದ್ರ ಹಿತಾಶಕ್ತಿಗಳು ಅಧಿಕಾರಿಗಳ ಮೂಲಕ ಸಮುದಾಯದ ಮೇಲೆ ದೌರ್ಜನ್ಯ ನಡೆಸುವ ನಿಟ್ಟಿನಲ್ಲಿ ನಿಧರ್ಾರ ಪ್ರಕಟಿಸುತ್ತಾ ಸಮುದಾಯ ತಮ್ಮ ಹಕ್ಕು ಪಡೆಯಲು ಹಿಂದೇಟು ಹಾಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿವೆ. ಸರಕಾರವೂ ಸಹ ಜಂಗಮರ ಹಕ್ಕಿನ ಮೇಲೆ ಗದ ಪ್ರಹಾರ ಮಾಡುತ್ತಲೇ ಸಾಗಿದೆ.
ರಾಜ್ಯ ಉಚ್ಛ ನ್ಯಾಯಾಲಯದಿಂದ ವೀರಶೈವ/ಲಿಂಗಾಯತ ಪಂಥದ ಅನುಯಾಯಿ ಒಳಪಂಗಡ ಜಂಗಮರೇ ಬೇಡಜಂಗಮರೆನ್ನುವ ತೀಪರ್ು ನೀಡಿದೆ. ಅದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ದಾಖಲೆಗಳು ಸಹ ಇವೆ. ಇದೇ ರೀತಿ ಸಮಾಜದ ಜನತೆಯ ಹಕ್ಕಿನಲ್ಲಿ ಸರಕಾರಗಳು ಹಾಗೂ ಪಟ್ಟಭದ್ರ ಹಿತಾಶಕ್ತಿಗಳು ದಬ್ಬಾಳಿಕೆ ನಡೆಸಿ ಹಕ್ಕು ಕಸಿದುಕೊಳ್ಳಲು ಪ್ರಯತ್ನಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕಾಧ್ಯಕ್ಷ ಈರನಗೌಡ ಪಾಟೀಲ, ಉಪಾಧ್ಯಕ್ಷ ಗಂಗಾಧರ ಹಿರೇಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯ ಈರಬಸಯ್ಯ ಬನ್ನೂರಮಠ, ವೀರಯ್ಯ ಹಿರೇಮಠ, ಮುರಗಯ್ಯ ಚಿಕ್ಕೂರಮಠ, ರಾಜೇಂದ್ರ ಮಿಜರ್ಿ ಸೇರಿದಂತೆ ಇತರರಿದ್ದರು.