ಸ್ಮಿತ್, ವಾರ್ನರ್ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಎಸಿಎ ನಿರಾಕರಣೆ

ಬ್ರಿಸ್ಬೇನ್, ನ.20- ಪ್ರಬಲ ಆಸ್ಟ್ರೇಲಿಯಾ ತಂಡದಲ್ಲಿ ಈಗ ಕೆಲವು ಸಮಸ್ಯೆಗಳು ಕಾಡುತ್ತಿದ್ದು, ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಸ್ಟೀವ್ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಆಸ್ಟ್ರೇಲಿಯಾ ಕ್ರಿಕೆಟರ್ಸ್ ಅಸೋಸಿಯೇಷನ್ (ಎಸಿಎ) ನಿರಾಕರಿಸಿದೆ.

ಈ ಹಿನ್ನೆಲೆಯಲ್ಲಿ ಸ್ಮಿತ್ ಮತ್ತು ವಾರ್ನರ್ ಭಾರತದ ವಿರುದ್ಧದ ಪಂದ್ಯದಲ್ಲಿ ಅಲಭ್ಯವಾಗಲಿದ್ದು, ಆಸ್ಟ್ರೇಲಿಯಾ ಪ್ರಬಲ ಆಟಗಾರರ ಕೊರತೆ  ಎದುರಿಸುತ್ತಿದೆ. ಬಲಿಷ್ಠ ತಂಡವಾಗಿರುವ ಭಾರತವನ್ನು ಮಣಿಸಿ ತನ್ನ ನೆಲದಲ್ಲಿ ಮತ್ತೆ ತಮ್ಮ ಹಳೆಯ ಲಯವನ್ನು ಕಂಡುಕೊಳ್ಳಲು ಆಸ್ಟ್ರೇಲಿಯಾ ಆಟಗಾರರು ಭಾರೀ ಪ್ರಯಾಸ ಪಡುವುದು ಅನಿವಾರ್ಯವಾಗಿದೆ.

ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಜಯ ಸಾಧಿಸಿ ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ, ಟೆಸ್ಟ್ ಹಾಗೂ ಟಿ-20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಘಜರ್ಿಸಲಿದ್ದಾರೆ ಎಂದು ಹಲವಾರು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಹಲವು ದಾಖಲೆಗಳನ್ನು ಮುರಿದಿರುವ ವಿರಾಟ್, ವಿದೇಶಿ ನೆಲದಲ್ಲಿ ಅಬ್ಬರಿಸುವುದು ನಿಶ್ಚಿತ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯಗಳಲ್ಲಿ ಅವರ ಅದ್ಭುತ ಬ್ಯಾಟಿಂಗ್ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿತ್ತು. ಇದು ಪುನರಾವರ್ತನೆಯಾಗಲಿದೆ ಎಂದು ಭಾರತೀಯ ಕ್ರಿಕೆಟ್ ಪ್ರೇಮಿಗಳು ಭಾರೀ ಭರವಸೆ ಹೊಂದಿದ್ದಾರೆ. 

ಆಸ್ಟ್ರೇಲಿಯಾದ ಸಾರಥಿಯಾಗಿದ್ದ ಸ್ಮಿತ್ ಮತ್ತು ಸ್ಫೋಟಕ ಬ್ಯಾಟ್ಸ್ಮನ್ ವಾರ್ನರ್ ಅವರು ತಂಡದಲ್ಲಿ ಇಲ್ಲದಿರುವುದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಕಠಿಣವಾಗಿ  ಆಸ್ಟ್ರೇಲಿಯಾ ವತರ್ಿಸಬಾರದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಒಟ್ಟಾರೆ ಕ್ರಿಕೆಟ್ ಸರಣಿ ಎರಡೂ ದೇಶಗಳಲ್ಲದೆ ಕ್ರಿಕೆಟ್ ಜಗತ್ತಿನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.