ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನರ ವೀಲ್ ಕ್ಲಬ್ ವತಿಯಿಂದ ಬ್ಯಾಗ್ ವಿತರಣೆ

nnar Wheel Club distributes bags to government school students

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನರ ವೀಲ್ ಕ್ಲಬ್ ವತಿಯಿಂದ ಬ್ಯಾಗ್ ವಿತರಣೆ

ಕೊಪ್ಪಳ 19: ತಾಲೂಕಿನ ಹೂವಿನಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಸ್ಕೂಲ್ ಬ್ಯಾಗನ್ನು ಕೊಪ್ಪಳ ಇನ್ನರ ವೀಲ್ ಕ್ಲಬ್ ಅಧ್ಯಕ್ಷರಾಗಿರುವ ಉಮಾ ಮಹೇಶ್ ತಂಬ್ರಳ್ಳಿ ರವರು ತಮ್ಮ ವೈಯಕ್ತಿಕ ಧನಸಹಾಯದಿಂದ 101 ಬ್ಯಾಗನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡುವುದರ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದರು ಎಂದು ಶಾಲೆಯ ಶಿಕ್ಷಕರು ಅವರ ಕಾರ್ಯ ಕೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಯ ಪರವಾಗಿ ಶಿಕ್ಷಕರು ಅಭಿನಂದಿಸಿದರು. 

 ಇನ್ನರ್ ವೀಲ್ ಕ್ಲಬ್ ಕೊಪ್ಪಳ ಜಿಲ್ಲಾ ಚೇರ್ಮೆನ್ ಸುಷ್ಮಾಪತಂಗೇ ರವರು ಉಮಾ ತಂಬ್ರಳ್ಳಿ ರವರ ಪರವಾಗಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಅನ್ನು ವಿತರಣೆ ಮಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ಬಿನ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಉಪಾಧ್ಯಕ್ಷರಾದ ಮಧು ಶೆಟ್ಟರ್, ಖಜಾಂಚಿ ಆಶಾ ಕವಲೂರು, ಎಸ್‌ಓ ಮಧು ನಿಲೋಗಲ್ ,ಎಡಿಟರ್ ನಾಗವೇಣಿ ,ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಸುಜಾತಾ ಪಟ್ಟಣಶೆಟ್ಟಿ,ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.