ಮಾಡಮಗೇರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾಗಿ ಪರಮೇಶಿ ಛತ್ರಕೋಟಿ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಬಾಗಿಲದ ಅವಿರೋಧ ಆಯ್ಕೆ
Parameshi Chhatrakoti elected unopposed as President of Madamgeri School SDMC, Lakshmi Barega as Vic
ಲೋಕದರ್ಶನ ವರದಿ
ಯರಗಟ್ಟಿ 18 : ಸಮೀಪದ ಮಾಡಮಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ರಚನೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ಪರಮೇಶಿ ಛತ್ರಕೋಟಿ ಮತ್ತು ಉಪಾಧ್ಯಕ್ಷರಾದ ಲಕ್ಷ್ಮೀ ಬಾಗಿಲದ ಅವಿರೋಧವಾಗಿ ಆಯ್ಕೆಯಾಗಿದ್ದು, ಗ್ರಾಮಸ್ಥರು ಹಾಗೂ ಪೋಷಕರಲ್ಲಿ ಸಂತಸ ಮೂಡಿಸಿದೆ.
ಶಾಲೆಯಲ್ಲಿ ನಡೆದ ಸಭೆಯಲ್ಲಿ ಪೋಷಕರು, ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿ ಹೊಸ ಎಸ್‌ಡಿಎಂಸಿ ಸಮಿತಿಯನ್ನು ಆಯ್ಕೆ ಮಾಡಿದರು. ಎಲ್ಲರ ಏಕಮನಸ್ಸಿನಿಂದ ಪರಮೇಶಿ ಛತ್ರಕೋಟಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಅವರ ಆಯ್ಕೆಗೆ ಸಭೆಯಲ್ಲಿ ಹಾಜರಿದ್ದವರು ಅಭಿನಂದನೆ ಸಲ್ಲಿಸಿದರು.
ಶಾಲೆಯ ಸಮಗ್ರ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವುದು, ಮೂಲಸೌಕರ್ಯಗಳನ್ನು ಸುಧಾರಿಸುವುದು ಹಾಗೂ ಶಾಲೆಯ ಪ್ರಗತಿಗೆ ಪೋಷಕರ ಸಹಭಾಗಿತ್ವವನ್ನು ಹೆಚ್ಚಿಸುವುದು ಎಸ್‌ಡಿಎಂಸಿ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ಪರಮೇಶಿ ಛತ್ರಕೋಟಿ ಅವರು ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಎಲ್ಲ ಸದಸ್ಯರು, ಶಿಕ್ಷಕರು ಮತ್ತು ಪೋಷಕರ ಸಹಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸೌಲಭ್ಯ ಒದಗಿಸುವುದು ಹಾಗೂ ಶಾಲೆಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಎಸ್‌ಡಿಎಮ್‌ಸಿ ಎಲ್ಲಾ ಸದಸ್ಯರಾದ ಶಿವಾನಂದ ನಾಯ್ಕರ, ಬಸು ನಾಯ್ಕರ, ಶಿವಾನಂದ ಖಂಡ್ರಿ, ವಿಠ್ಠಲ ಚಿಕ್ಕನ್ನವರ, ಮಹಾದೇವ ಚಿಕ್ಕಣ್ಣವರ, ಶೋಭಾ ಆಯಟ್ಟಿ, ಹಾಗೂ ಶಾಲಾ ಪ್ರಧಾನ ಗುರುಗಳಾದ ಆರ್. ಎನ್. ಗುದಗಪ್ಪನ್ನವರ ಶಿಕ್ಷಕರಾದ ಟಿ. ಎ. ಕಾಂಬಳೆ, ಎ. ಎಸ್. ಕಟಕೋಳ, ಸ್ಥಳಯ ಮುಖಂಡರಾದ ಗಿಡ್ಡಪ್ಪ ಖಂಡ್ರಿ, ಸಿದ್ದಪ್ಪ ಚಿಕ್ಕನ್ನವರ, ನೀಲಪ್ಪ ಸಿದ್ದನ್ನವರ, ಬಸನಾಯ್ಕ ಪಾಟೀಲ, ಸಂಜು ನಾಯ್ಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 