ನಿಸರ್ಗಚಂಡಮಾರುತ ಬೀತಿ: ಮುಂಬೈನಗರದಲ್ಲಿ ನಿಷೇಧಾಜ್ಞೆ

ಮುಂಬೈ,  ಜೂನ್ 3,  ಕೊರೋನಾ ಸೋಂಕಿನಿಂದ ನಲಗುತ್ತಿರುವ   ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ಇದೀಗ ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡಿರುವ   ನಿಸರ್ಗಚಂಡಮಾರುತ ಮತ್ತು ಅದು ಉಂಟುಮಾಡಲಿರುವ  ಅನಾಹುತ ಜನತೆಗೆ   ಸರ್ಕಾರಕ್ಕೆ ಬಹಳ  ಆತಂಕ,ತಲ್ಲಣ ತಂದಿದೆ.  ಮುಂಬೈನಗರದಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದೆ. ವಿಮಾನಗಳ ಸಂಚಾರ ಬಹುತೇಕ ರದ್ದಾಗಿದೆ. ರೈಲುಗಳ ಸಂಚಾರವನ್ನು ಮಾರ್ಪಡು ಮಾಡಲಾಗಿದೆ. ಕೆಲ ರೈಲುಗಳ  ಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ. 

ಗುಜರಾತ್ ನಲ್ಲಿ 78 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತ ಗಂಟೆಗೆ 120 ಕಿಮೀ ವೇಗದಲ್ಲಿ ಅಪ್ಪಳಿಸಲಿದೆ.100 ವರ್ಷಗಳಲ್ಲಿ ಇದೇ ಮೊದಲ ಬಾರಿದೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಚಂಡಮಾರುತವೊಂದಕ್ಕೆ ತುತ್ತಾಗುತ್ತಿದೆ.ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರ, ಗುಜರಾತ್, ಗೋವಾ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಮುಂಬೈ ಸೇರಿ ಮಹಾರಾಷ್ಟ್ರದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಗುಜರಾತ್ ನಲ್ಲಿ 78 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಎರಡೂ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 13 ತಂಡಗಳನ್ನು ನಿಯೋಜಿಸಲಾಗಿದೆ.