ಘಟಪ್ರಭಾ 03: ಜ್ಞಾನ ಮತ್ತು ಮುಕ್ತಿ ಪಡೆಯಬೇಕಾದರೆ ಗುರು ಮುಖ್ಯವಾಗಿದ್ದಾನೆ. ವ್ಯಕ್ತಿ, ಮುಕ್ತಿ ಪಡೆಯಬೇಕಾದರೆ ಜ್ಞಾನಬೇಕು ಎಂದು ಕೊಟಬಾಗಿಯ ಸಿದ್ಧಾರೂಢಮಠದ ಪ್ರಭುದೇವರು ಹೇಳಿದರು.
ಅವರು ಸೋಮವಾರದಂದು ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಅಮವಾಸ್ಯೆ ನಿಮಿತ್ಯ ಜರುಗಿದ ಮಾಸಿಕ ಸುವಿಚಾರ ಚಿಂತನಗೋಷ್ಠಿ ಹಾಗೂ ನಿಜಗುಣ ದೇವರ ಕಿರೀಟ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧ್ಯಾತ್ಮಿಕವಾಗಿ ಸಾಧನೆ ಮಾಡಬೇಕಾದರೂ ಸಹ ಜ್ಞಾನ ಅತ್ಯಂತ ಅವಶ್ಯವಾಗಿದೆ. ಈ ಭಾಗದ ಭಕ್ತರಿಗೆ ನಿಜಗುಣ ದೇವರು ದೇವ ರೂಪದಲ್ಲಿ ಗುರುಗಳಾಗಿ ಬಂದು ಶ್ರೀಮಠದಲ್ಲಿ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ನೀಡಿ ಭಕ್ತರ ಹಾಗೂ ಜನರ ಮನಸ್ಸುಗಳಿಸಿಕೊಂಡಿದ್ದಾರೆ. ಸದಾ ಹಸನ್ಮುಖಿಗಳಾಗಿ,ತಾಯಿಹೃದಯದ ನಿಜಗುಣ ದೇವರು ಶ್ರೀಮಠದ ಭಕ್ತರ ಪಾಲಿಗೆ ನೀತಿಯ ಗುರುಗಳಾಗಿ ನೀತಿಯ ವ್ಯಕ್ತಿತ್ವವನ್ನು ತಿಳಿಸಿಕೊಟ್ಟಿದ್ದಾರೆ. ಗುರುವಿನಲ್ಲಿ ಕರುಣಿಯಿದ್ದರೆ ಮಾತ್ರ ಗುರುವಾಗಲು ಸಾಧ್ಯವಾಗುತ್ತದೆ. ಭಗವಂತನ ಸ್ಮರಣೆ ಅಗತ್ಯವಾಗಿದೆ. ಗುರುವಿನ ಮತ್ತು ಶಿಷ್ಯನ ಸಂಬಂಧ ಅಪಾರವಾದದ್ದು ಆದ್ದರಿಂದ ನಿಜಗುಣ ದೇವರು ಗುರುವಿನ ಕೃಪಾ ಆಶೀವರ್ಾದದಿಂದ ಶ್ರೀಮಠವು ಸಮಾಜಸೇವೆ ಹಾಗೂ ಧಾಮರ್ಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಂಗಕ್ಕೆ ಒಯ್ಯುತ್ತಿದ್ದಾರೆ. ಘಟದಿಂದ ಮಠ ಬೆಳೆಯುವುದಕ್ಕೆ ಶ್ರೀಮಠವೇ ನಿದರ್ಶನವಾಗಿದೆ. ಶ್ರೀಮಠಕ್ಕೆ ನಾಡಿನ ಹಲವಾರು ಮಠಾಧೀಶರು ಆಗಮಿಸುತ್ತಿರುವುದು ನಿಜಗುಣ ದೇವರ ಕಾರ್ಯ ಮತ್ತು ಲಕ್ಷಾಂತರ ಭಕ್ತರೇ ಸಾಕ್ಷಿಯಾಗಿದ್ದಾರೆ ಎಂದರು.
ಸಾನಿಧ್ಯವನ್ನು ಶ್ರೀಮಠದ ನಿಜಗುಣ ದೇವರು ವಹಿಸಿದ್ದರು.
ಮೇಕಳಿ ಗ್ರಾಮದ ಭಕ್ತ ಗೋವಿಂದ ಬಡಿಗೇರ ಇವರಿಂದ ಅನ್ನ ದಾಸೋಹ ಹಾಗೂ ಪುಲಗಡ್ಡಿ ಗ್ರಾಮದ ಭಕ್ತ ಶ್ರೀಶೈಲ ಪಾಟೀಲ ಇವರಿಂದ ಚಿಂತನ ದಾಸೋಹ ಜರುಗಿತು.
ಹಣಮಂತ ದಾಸರ, ಹಣಮಂತ ಪಾದಗಟ್ಟಿ, ಗಂಗಾಧರ ಗಿಳಿಹೊಸೂರ ಅವರಿಂದ ಸಂಗೀತ ಸೇವೆ ಜರುಗಿತು. ಸಿದ್ದಲಿಂಗೇಶ್ವರ ಶಾಲಾ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.