ಬೈಲಹೊಂಗಲ 04: ತಾಲೂಕಿನ ನೇಸರಗಿ ಗ್ರಾಮದಲ್ಲಿ ಬೀದಿದೀಪ ವ್ಯವಸ್ಥೆ, ರಸ್ತೆ ಬದಿಯ ಕಸ ತೆಗೆಸುವುದು, ಶೌಚಾಲಯ ನಿಮರ್ಾಣ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಬದಿಯ ಮಲಮೂತ್ರ ವಿಸರ್ಜನೆ ನಿಲ್ಲಿಸಲು ಆಗ್ರಹಿಸಿ ಜನಜಾಗರಣ ಶ್ರಮಿಕ ಅಭಿವೃದ್ಧಿ ಸಂಘದ ಸದಸ್ಯರು ಶುಕ್ರವಾರ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಉಪವಾಸ ಸತ್ಯಾಗ್ರಹ ನಡೆಸಿ ಪ್ರತಿಭಟಿಸಿದರು.
ದೇಶನೂರ ಫಾ.ಮೆನಿನೋ, ನೇಸರಗಿ ಫಾ.ಪ್ರಕಾಶ, ಫಾ.ಥಾಮಸ್ ಚನ್ನಕಲಾ ಮಾತನಾಡಿ, ಹಲವಾರು ವರ್ಷಗಳಿಂದ ನೇಸರಗಿ ವೃತ್ತದಲ್ಲಿರುವ ಕ್ರಿಸ್ತ ನಿವಾಸ ಸುತ್ತಮುತ್ತಲಿನ ನಿವಾಸಿಗಳಿಗೆ ಸರಿಯಾದ ಬೀದಿದೀಪಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅಸ್ವಚ್ಚತೆ ತಾಂಡವವಾಡಿದರೂ ಕಸವನ್ನು ತೆಗೆಯುವ ಗೋಜಿಗೆ ಗ್ರಾ.ಪಂ ಆಡಳಿತ ಮಂಡಳಿ ಹೋಗಿಲ್ಲ. ಶಾಲೆಯ ಪಕ್ಕದಲ್ಲಿ ಅನದಿಕೃತ ಡಬ್ಬಾ ಅಂಗಡಿಗಳು ರಾಜಾರೋಷವಾಗಿ ನಡೆಸಿ ಶಾಲೆ ಅಸ್ವಚ್ಚತೆಗೆ ಕಾರಣವಾದರೂ ಅವುಗಳನ್ನು ತೆಗೆಸಲು ಹಿಂದೇಟು ಹಾಕಲಾಗುತ್ತಿದೆ. ಇಡೀ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಇರುವದರಿಂದ ಜನರು ರಸ್ತೆ ಬದಿಯ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ಕೂಡಲೇ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿಮರ್ಿಸಬೇಕೆಂದು ಒತ್ತಾಯಿಸಿದರು.
ಗ್ರಾಮದ ವಿವಿಧ ಭಾಗದಲ್ಲಿ ಕಸ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಅದನ್ನು ತೆಗೆಸದೆ ಇರುವದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಸಾಕಷ್ಟು ಮಳೆಯಾಗುತ್ತಿದ್ದರೂ ನೀರಿನ ವ್ಯವಸ್ಥೆ ಮಾಡಲು ಗ್ರಾ.ಪಂ ಕ್ರಮ ಕೈಗೊಂಡಿಲ್ಲ. ಶೌಚಾಲಯ ನಿಮರ್ಿಸಲು ಸರಕಾರ ಸಾಕಷ್ಟು ಅನುದಾನ ನೀಡುತ್ತದೆ. ಬಂದ ಅನುದಾನ ಎಲ್ಲಿ ಹೋಗುತ್ತದೆ. ಬಂದ ಅನುದಾನ ಸರಿಯಾಗಿ ಸದ್ಬಳಕೆಯಾಗುವಂತೆ ಗ್ರಾ.ಪಂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾ.ಪಂ ಅಧ್ಯಕ್ಷ ಎಸ್.ಬಿ.ಮೋಕಾಶಿ ಮಾತನಾಡಿ, ಗ್ರಾ.ಪಂ ವತಿಯಿಂದ ಸರಕಾರದಿಂದ ಬಂದ ಸಾಮಾನ್ಯರಿಗೆ 12 ಸಾವಿರ ರೂ. ಎಸ್.ಸಿ,ಎಸ್.ಟಿ ಜನಾಂಗಕ್ಕೆ 15 ಸಾವಿರ ರೂ.ಗಳಲ್ಲಿ ಶೌಚಾಲಯ ನಿಮರ್ಿಸಲು ಅನುದಾನ ಲಭ್ಯವಿದೆ. ಅದರ ಮೂಲಕ ಎಲ್ಲರೂ ಶೌಚಾಲಯ ನಿಮರ್ಿಸಲು ಪಣ ತೊಡಬೇಕು. ಗ್ರಾಮದ ಸ್ವಚ್ಚತೆ ಬಗ್ಗೆ ಗ್ರಾ.ಪಂ.ನೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯ ನಿಮರ್ಿಸಿ, ಪ್ರತಿಭಟನಾಕಾರರ ಸಮಸ್ಯೆಗಳನ್ನು ಪರಿಹರಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಪ್ರತಿಭಟನಾಕಾರರು ನೇಸರಗಿ ವೃತ್ತದ ಕ್ರಿಸ್ತನಿವಾಸದಿಂದ ಗ್ರಾ.ಪಂ ವರೆಗೆ ಬೃಹತ್ ಪ್ರಮಾಣದಲ್ಲಿ ಮೆರವಣಿಗೆ ಮೂಲಕ ಬಂದು ಗ್ರಾ.ಪಂ ಮುಂದೆ ಧರಣಿ ನಡೆಸಿದರು.
ಗ್ರಾಮಸ್ಥರಾದ ಯಲ್ಲಪ್ಪ ಬಾದರವಳ್ಳಿ, ಮಲ್ಲಪ್ಪ ಮಾಳನ್ನವರ, ಬಸನಗೌಡ ಪಾಟೀಲ, ರಾಮಲಿಂಗಪ್ಪ ಮಾಳನ್ನವರ, ಶಿವಾನಂದ ತೊಂಡಿಕಟ್ಟಿ,ಯಲ್ಲವ್ವ ಕೊಳದೂರ, ಶೋಭಾ ದೊಡಮನಿ, ಪಿಆರ್ ಡಿಸೋಜಾ, ಸಿಸ್ಟರ್ ಬ್ರೆಜಿಲ್, ಮಹಾದೇವಿ ಗ್ಯಾನಪ್ಪನ್ನವರ, ಚನ್ನವ್ವ ಮೆಣಶಿನಕಾಯಿ, ಗೀತಾ ಕಂಡ್ರಿ, ಕಾಳವ್ವ ಬಡಿಗೇರ,ಕಮಲವ್ವಾ ಅಂಬಿಗೇರ, ಕಮಲವ್ವಾ ಕಾಡನ್ನವರ, ಕಸ್ತೂರಿ ಬೈಲವಾಡ, ಶಾಂತವ್ವಾ ಮಾದರ, ಗ್ರಾ.ಪಂ ಸದಸ್ಯರಾದ ನಿಂಗಪ್ಪ ತಳವಾರ, ದೇಮಣ್ಣ ಗುಜನಟ್ಟಿ, ಪಿಡಿಓ ಶಿವಮೊಗ್ಗಿ ಗಡ್ಡಿ, ಕಾಯದಶರ್ಿ ಬಿ.ಎಚ್.ಮಾಳಗಿ, ಜನಜಾಗರಣ ಶ್ರಮಿಕ ಅಭಿವೃದ್ಧಿ ಸಂಘದ ಸದಸ್ಯರು ಉಪಸ್ಥಿತರಿದ್ದರು.