ಮೂಡಲಗಿ : ಉತ್ತಮ ಸಹಕಾರಿ ಸಂಘಗಳ ಅಧ್ಯಕ್ಷರಿಗೆ ಸನ್ಮಾನ

ಮೂಡಲಗಿ 02: ಗೋಕಾಕದ ನೇಮಿನಾಥ ಸಭಾ ಭವನದಲ್ಲಿ ಶುಕ್ರವಾರ ಗೋಕಾಕದ ಸಹಕಾರ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಟ್ಟಣದ ಮಂಜುನಾಥ ವಿವಿಧ ಉದ್ದೇಶಗಳ ಸಹಕಾರ ಸಂಘ ಮತ್ತು ಕುರುಹಿನಶೆಟ್ಟಿ ಅರ್ಬನ ಕೊ-ಆಪ್ ಕ್ರೆಡಿಟ ಸೊಸಾಯಿಟಿಗಳನ್ನು ಉತ್ತಮ ಸಹಕಾರಿ ಸಂಘಗಳೆಂದು ಸಹಕಾರ ಇಲಾಖೆಯ ವತಿಯಿಂದ ಸಹಕಾರಿ ಅಭಿವೃದ್ಧಿ ಅಧಿಕಾರಿಗಳಿಂದ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

   ಬೆಂಗಳೂರಿನ ಕನರ್ಾಟಕ ರಾಜ್ಯ ಪತ್ತಿನ ಮಹಾ ಮಂಡಳದ ಉಪಾಧ್ಯಕ್ಷ ಡಾ ಸಂಜಯ ಹೊಸಮಠ, ಹಾಗೂ ಸದಸ್ಯ ತಮ್ಮಣ್ಣ ಕೆಂಚರೆಡ್ಡಿ,. ಬೆಳಗಾವಿ ಜಿಲ್ಲಾ ಯುನಿಯನ್ ನಿದೆರ್ೆಶಕ ವರ್ದಮಾನ ಬೋಳಿ,ಸಹಕಾರಿ ಅಭಿವೃದ್ಧಿ ಅಧಿಕಾರಿ ಬೇಟಗೇರಿ, ಸಹ ಅಧಿಕಾರಿ ಸುರೇಶ ಪಾಟೀಲ್ ಉಪಸ್ಥಿತರಿದ್ದರು,

ಕುರುಹಿನಶೆಟ್ಟಿ ಅರ್ಬನ ಕೊ-ಆಪ್ ಕ್ರೆಡಿಟ ಸೂಸಾಯಿಟಿ ಅಧ್ಯಕ್ಷ ಸುಭಾಸ ಬೆಳಕೂಡ, ಮಂಜುನಾಥ ವಿವಿಧ ಉದ್ದೇಶಗಳ ಸಹಕಾರ ಸಂಘ ಅಧ್ಯಕ್ಷ  ಸಂಗಪ್ಪ ನಿಡಗುಂದಿ ಇವರನ್ನು ಸನ್ಮಾನಿಸಲಾಯಿತು,

 ಗೋಕಾಕದ ಅರ್ಬನ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ಎಸ್ ಪಾಟೀಲ ಸಹಕಾರ ಉಪ ನಿಯಮ ತಿದ್ದುಪಡಿ ಹಾಗೂ ಆದಾಯ ತೆರಿಗೆ ಬಗ್ಗೆ ಉಪನ್ಯಾಸ ನೀಡಿದರು.

ಗೋಕಾಕ ಮತ್ತು ಮೂಡಲಗಿ ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ನಿದೆರ್ೇಶಕರು ಮತ್ತು  ವ್ಯವಸ್ಥಾಪಕರು ಉಪಸ್ಥಿತರಿದ್ದರು.