ಆಂಗ್ಲ, ಗಣಿತ ವಿಷಯಕ್ಕೆ ಹೆಚ್ಚು ಪ್ರ್ರಾಧಾನ್ಯತೆ ನೀಡಿ: ಪುಡಕಲಕಟ್ಟಿ

ಧಾರವಾಡ 12: ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆಗಳು ಹೆಚ್ಚು, ಹೆಚ್ಚು ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಶ್ರಮಿಸಿದ ಎಲ್ಲರನ್ನು ಸ್ಮರಿಸಿ, ಅದೇ ಪ್ರಕಾರ ಆಂಗ್ಲ ಭಾಷಾ ಮತ್ತು ಗಣಿತ ವಿಷಯಕ್ಕೆ ಹೆಚ್ಚು ಪ್ರ್ರಾಧಾನ್ಯತೆ ನೀಡಲು ಧಾರವಾಡ ಜಿಲ್ಲಾ ಪಂಚಾಯತ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ ಶಿಕ್ಷಕರಿಗೆ ತಿಳಿಸಿದರು. ಹಾಗೂ ವಿದ್ಯಾಥರ್ಿಗಳು ಮೊಬೈಲ್ ಬಳಕೆಯನ್ನು ನಿಷೇಧಿಸಿ, ನಿರಂತರ ಅಭ್ಯಾಸ ಮಾಡಲು ಸೂಚಿಸಿದರು.

ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ದಿ.10 ರಂದು ಧಾರವಾಡ ಗ್ರಾಮೀಣ ಭಾಗದ ಪ್ರೌಢ ಶಾಲೆಗಳ ವಿದ್ಯಾಥರ್ಿಗಳು 2019ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಾಲೂಕಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಎಲ್ಲ ವಿಷಯಗಳಲ್ಲಿ ಪ್ರತಿಶತ ಶೇಕಡಾ 100 ರಷ್ಟು ಸಾಧಿಸಿದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಧಾರವಾಡ ಗ್ರಾಮೀಣ ಸಮಸ್ತ ಪ್ರೌಢ ಶಾಲಾ ಗುರುಬಳಗದ ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷ ಹಾಗೂ ಧಾರವಾಡ ತಾಲೂಕಾ ಕ್ಷೇತ್ರ, ಶಿಕ್ಷಣಾಧಿಕಾರಿ ವಿದ್ಯಾ ಅ. ನಾಡಿಗೇರ ಇವರು ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮತನಾಡಿ ಶಿಕ್ಷಕ ಸಮೂಹ ಹಾಗೂ ಮುಖ್ಯಾಧ್ಯಾಪಕರು ಸೇರಿ, ಪ್ರತಿಭಾ ಪುರಸ್ಕಾರ ಸಮಿತಿ ರಚಿಸಿ ಅದರ ಮೂಲಕ ಸುಮಾರು 1 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿ ಪ್ರತಿವರ್ಷ ಬಂದ ಬಡ್ಡಿ ಹಣದಿಂದ ಈ ಪ್ರತಿಭಾ ಪುರಸ್ಕಾರ ಏರ್ಪಡಿಸುತ್ತಾ ಬರಲಾಗಿದೆ. ಈ ವರ್ಷ 211 ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.

2019ರ ಪ್ರತಿಭಾ ಪುರಸ್ಕಾರಕ್ಕೆ ಸ್ಮರಣಿಕೆಗಳನ್ನು ದೇಣಿಗೆಯಾಗಿ ನೀಡಿದ ನರೇಂದ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಈರಪ್ಪ ಗಂಟಿ ಹಾಗೂ ಭಾರತ ಸೇವಾದಳ ಧಾರವಾಡ ತಾಲೂಕಾ ಅಧ್ಯಕ್ಷ ಮಂಜುನಾಥ ತಿರ್ಲಾ ಪೂರ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಂಜುನಾಥ ತಿಲರ್ಾಪೂರ ಮಾತನಾಡಿ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಿದರು. ಸನ್ಮಾನಿತರ ಕುರಿತು ಪ್ರತಿಭಾ ಪುರಸ್ಕಾರ ಸಮಿತಿ ಕಾರ್ಯದರ್ಶಿ  ಹಾಗೂ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಧಾರವಾಡ ತಾಲೂಕಾ ಅಧ್ಯಕ್ಷ ಎಸ್. ರೇವಣಸಿದ್ಧಪ್ಪ ಮಾತನಾಡಿದರು.

ಸನ್ಮಾನಿತ ವಿದ್ಯಾರ್ಥಿ ಗಳ ಪರವಾಗಿ ಸರ್ಕಾ ರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ  ಕುಶಾಲಗೌಡ ಪಾಟೀಲ, ಹಾಗೂ ಸರ್ಕಾ ರಿ ಪ್ರೌಢ ಶಾಲೆ ಮುಮ್ಮಿಗಟ್ಟಿಯ ವಿದ್ಯಾರ್ಥಿನಿ ಪ್ರೀತಿ ದೇಸಾಯಿ ತಮ್ಮ ಸಾಧನಾ ಅನುಭವಗಳನ್ನು ಹಂಚಿಕೊಂಡರು.

ಪ್ರತಿಭಾ ಪುರಸ್ಕಾರ ಸಮಿತಿ ಕೋಶಾಧ್ಯಕ್ಷ ಹುಬ್ಬಳ್ಳಿ ಉಪಸ್ಥಿತರಿದ್ದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಉಪಾಧ್ಯಕ್ಷ ಮರೇದ, ಜೆ.ಆರ್. ಕುರಕುರಿ, ಶಿಕ್ಷಣಾಧಿಕಾರಿಗಳ ಸಂಘದ ಜಾಕೋಜಿ ಹಾಗೂ ಎಲ್ಲ ಪ್ರೌಢ ಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ಸಹ ಶಿಕ್ಷಕರು ಮತ್ತು ಧಾರವಾಡ ತಾಲೂಕಾ ಪ್ರೌಢ ಶಾಲಾ ಟೀಚರ್ ಸೊಸಾಯಿಟಿ ಅಧ್ಯಕ್ಷ ಹೆಚ್.ಎಸ್. ಬಡಿಗೇರ, ತಾಲೂಕ ಸಮನ್ವಯ ಅಧಿಕಾರಿ ದಪೆದಾರ, ಶಿಕ್ಷಣ ಸಂಯೋಜಕಿ ಸೈಯದ, ಆದರ್ಶ ವಿದ್ಯಾಲಯದ ಪ್ರಾಚಾರ್ಯ ಗ್ಲಾಡಿತಯಸ್, ಹಾಗೂ ಪಾಲಕರು ಉಪಸ್ಥಿತರಿದ್ದರು. 

ಪ್ರಾರ್ಥನೆ ಹಾಗೂ ನಾಡ ಗೀತೆಯನ್ನು ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾಥರ್ಿಗಳು ಹೇಳಿದರು. ನಿರೂಪಣೆಯನ್ನು ವಿಜಯಲಕ್ಷ್ಮೀ ಪಾಟೀಲ ಹಾಗೂ ಸಿ.ಸಿ. ಹಿರೇಮಠ ನೆರವೇರಿಸಿದರು. ವಂದನಾರ್ಪಣೆಯನ್ನು ಎಮ್.ಎಸ್. ನರೇಗಲ್ ನೆರವೇರಿಸಿದರು.