ಉಗಾರ ಲಾಯನ್ಸ್ ಕ್ಲಬ್ ಸದಸ್ಯರ ಪದಗ್ರಹಣ

ಕಾಗವಾಡ 2 ಉಗಾರ ಲಾಯನ್ಸ್ ಕ್ಲಬ್ ಸನ್ 2018-19ನೇ ವರ್ಷದ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಶಪಥ ತೆಗೆದುಕೊಳ್ಳುತ್ತಿರುವ ಪ

ಕಾಗವಾಡ 03: ಇಡಿ ವಿಶ್ವದಲ್ಲಿ ಲಾಯನ್ಸ್ ಕ್ಲಬ್ ಸದಸ್ಯರು ಯಾವುದೆ ಆಸೆ, ಅಭಿಲಾಶೆ ಇಟ್ಟುಕೊಳ್ಳದೆ ಕೇವಲ ನಿಸ್ವಾರ್ಥ ಸಮಾಜ ಸೇವೆ ಮಾಡುವ ಸಂಘಟನೆ. ರಾಜ್ಯದಲ್ಲಿಯ ಜಿಲ್ಲಾ, ತಾಲೂಕಾ ಮಟ್ಟದಲ್ಲಿ ಶಾಖೆಗಳಿವೆ. ಉಗಾರ ಶಾಖೆ ಸದಸ್ಯರ ಸೇವೆ ಇನ್ನೂಳಿದ ಶಾಖೆಗಳಿಗೆ ಮಾದರಿಯಾಗಲಿದೆ ಎಂದು ಗದಗ ಜಿಲ್ಲೆಯ ಮಾಜಿ ಜಿಲ್ಲಾ ಗವರ್ನರ್ ಆನಂದ್ ಪೋಟನಿಸ್ ಹೇಳಿದರು.

ಶನಿವಾರ ಸಂಜೆ ಉಗಾರದ ಬಾಲಮಂದಿರ ಸಭಾಭವನದಲ್ಲಿ ಉಗಾರ ಲಾಯನ್ಸ್ ಕ್ಲಬ್ನ ಸನ್ 2018-19ನೇ ವರ್ಷದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಿಮಿತ್ಯ ಅತಿಥಿಗಳಾಗಿ, ಆಗಮಿಸಿರುವ ಆನಂದ್ ಪೋಟನಿಸ್ ಉಗಾರ ಸಂಘದ ಕಾರ್ಯಕಲಾಪ ವೀಕ್ಷಿಸಿ, ಸಂತಸ ಹಂಚಿಕೊಂಡರು.

ಉಗಾರ ಲಾಯನ್ಸ್ಕ್ಲಬ್ ಸಂಸ್ಥಪಕ ಆಧ್ಯಕ್ಷರಾಜಾಭಾವು ಶಿರಗಾಂವಕರ್, ಇವರು 22 ವರ್ಷ ಪೂರ್ವದಲ್ಲಿ ಶಾಖೆ ಸ್ಥಾಪಿಸಿದರು.ಅವರ ಮಾರ್ಗದರ್ಶನದಲ್ಲಿ ಸಮಾಜಕ್ಕಾಗಿ, ಅನೇಕ ಸೇವೆ ನೀಡುತ್ತಿದ್ದಾರೆ.

ಉಗಾರ ಲಾಯನ್ಸ್ ಕ್ಲಬ್ನ ಆಧ್ಯಕ್ಷರಾಗಿ ಸುಭಾಷ ಹೆಬ್ಬಳಿ ಇವರನ್ನು ಆಯ್ಕೆ ಮಾಡಿ, ನಿಕಟ ಪೂರ್ವ ಅಧ್ಯಕ್ಷ ಸಚಿನ ಪೋತದಾರ ಇವರಿಂದ ಅಧಿಕಾರ ಹಸ್ತಾಂತರಿಸಿದರು.

ಉಗಾರ ಶಾಖೆಯ ಉಪಾಧ್ಯಕ್ಷರಾಗಿ ಪಿ.ಕೆ.ಕುಡವಕ್ಕಲಗಿ, ರಾಹುಲ್ ಶಹಾ, ಡಾ. ಬಿ.ಎ.ಪಾಟೀಲ, ಕಾರ್ಯದಶರ್ಿಗಳಾಗಿ ಜ್ಯೋತಿಕುಮಾರ ಪಾಟೀಲ, ಜಂಟಿ ಕಾರ್ಯದಶರ್ಿ ಮನೋಜ್ ಮಾಲಗತ್ತೆ, ಖಜಾಂಚಿ ಆರ್.ಜಿ.ಕೀಲ್ಲೆದಾರ್, ಸಂಘಟನೆ ಸದಸ್ಯರಾಗಿ ಎಸ್.ಬಿ.ಜೋಶಿ, ಪ್ರಸಾದ್ ಶಿವಗೌಡಾ ಕಾಗೆ ಮತ್ತು ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಕ್ಲಬ್ನ ಹಿರಿಯ ಸದಸ್ಯರಿಗೆ ಸಸಿ ನೀಡಿ ಸನ್ಮಾನಿಸಿದರು. ಸಮಾರಂಭದಲ್ಲಿ ಹಿರಿಯ ಸದಸ್ಯರಾದ ದೀಪಚಂದ್ ಶಹಾ, ಗೋಪಾಳ್ ಕಟ್ಟಿ, ನಾರಾಯಣ ಕಟ್ಟಿ, ಭೂಪಾಲ್ ಚೌಗುಲಾ, ಡಾ. ಬಿ.ಎ.ಪಾಟೀಲ, ಡಾ. ಎಸ್.ಎ.ಬರಂದೆ, ರಾಜೇಂದ್ರ ಪೋತದಾರ್, ಎ.ಬಿ.ಹೊನ್ನಣ್ಣವರ್, ಡಾ. ವಿ.ಎಸ್.ದೇಶಪಾಂಡೆ, ಬಾಳಗೌಡಾ ಕಾಗೆ, ಬಿ.ಎ.ಪಾಟೀಲ, ಮನಿಷ ಶಹಾ, ಜಿ.ಪಿ.ಗೋಸಾವಿ, ಉಜ್ವಲಾ ಪೋತದಾರ್, ಅಶ್ವಿನಿ ಕಟ್ಟಿ ನಿರೂಪಿಸಿದರು. ಮಾಧುರಿ ಕುಡವಕ್ಕಲಗಿ ವಂದಿಸಿದರು.