ಲೋಕದರ್ಶನ ವರದಿ
ರಾಮದುರ್ಗ: ಪ್ರಾರಂಭದಲ್ಲಿ ಆದ ಅಲ್ಪಸ್ವಲ್ಪ ಮಳೆಯನ್ನು ನಂಬಿ, ಮಳೆರಾಯನ ಕೃಪೆಯ ಭರವಸೆಯಲ್ಲಿ ಭೂಮಿ ಬಿತ್ತನೆ ಮಾಡಿದ ರೈತರಿಗೆ ಮತ್ತೆ ಮಳೆಯಾಗದೇ ಆತಂಕದ ಛಾಯೆ ಅಧಿಕೊಗೊಳ್ಳುತ್ತಿರುವುದು ಒಂದೆಡೆದಾರೆ, ಮೊತ್ತೊಂದೆಡೆ ಕತ್ತೆ, ಕಪ್ಪೆಗಳ ಮದುವೆ ಮಾಡುವ ಪರಂಪರೆಯಿಂದರೂ ರೈತರು ಇನ್ನು ಹೊರಬಂದಿಲ್ಲ.
ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಮದೇನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಮುದೇನೂರ ಗ್ರಾಮದಲ್ಲಿ ಕಪ್ಪೆಗಳ ಮದುವೆ ಮಾಡಿ, ಮಳೆರಾಯನ ಕೃಪೆಗೆ ಅಂಗಲಾಚಿದ ಘಟನೆ ನಡೆದಿದೆ.
ಮದುವೆ ಊಟ ಉಣಬಡಿಸಿದ ರೈತರುಃ
ಮಾನವರಿಗೆ ಮಾಡುವ ಮದುವೆ ಸಂಪ್ರದಾಯದಂತೆ ಗಂಡು ಹೆಣ್ಣಿನ ಕಡೆಯಿಂದ ನಡೆಯಬೇಕಾದ ಮದುವೆ ಪೂರ್ವದ ವಿಶಿಷ್ಠ ಸಂಪ್ರದಾಯವನ್ನು ಆಚರಣೆ ಮಾಡಿ, ನಂತರ ಸೇರಿದಂತೆ ಸರ್ವ ಜನತೆಗೂ ಮುದವೆ ದಿಬ್ಬನದ ಊಟ ಉಣಬಡಿಸಿ ಸ್ಥಳೀಯ ದೇವರಲ್ಲಿ ಮಳೆಗಾಗಿ ಪ್ರಾರ್ಥಸಿದರು.
ಹೋಮ-ಹವನಃ
ನಾಡಿನಲ್ಲಿ ಮಳೆ ಬೆಳೆ ಸಮೃದ್ಧಿಯಾಗಲಿ ಎಂಬಂತೆ ವಿವಿಧ ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನ ನೆರವೇರಿಸುವ ಮೂಲಕ ರೈತರು ಮಳೆರಾಯನ ಕೃಪೆಗಾಗಿ ವಿವಿಧ ಸಂದ್ರದಾಯಗಳ ಆಚರಣೆಗೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಮುದೇನೂರ ಗ್ರಾಮಸ್ಥರಾದ ನಾಗಪ್ಪ ವಜ್ರಮಟ್ಟಿ, ತಿಮ್ಮಣ್ಣ ಹಕಾಟಿ, ಅಲ್ಲಿಸಾಬ ಕಡಕೋಳ, ಅಜರ್ುನ ಸಿಂಗಾಡಿ, ಬಸವರಾಜ ಗುಟ್ಟಿ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಹಾಗೂ ಇತರರಿದ್ದರು.