ಬೆಳಗಾವಿ 03: ರಾಜ್ಯ ಸಮ್ಮಿಶ್ರ ಸರಕಾರವು ಪ್ರಸಕ್ತ ಅಧಿವೇಶನದಲ್ಲಿಯೇ ಬೆಳಗಾವಿಯ ಸುವರ್ಣ ಸೌಧವನ್ನು ಶಕ್ತಿ ಕೇಂದ್ರವನ್ನಾಗಿ ರೂಪಿಸುವ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಉತ್ತರ ಕನರ್ಾಟಕ ಹೋರಾಟ ಸಮಿತಿಯ ಮುಖಂಡರುಗಳು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಸೋಮವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ಅಶೋಕ ಪೂಜಾರಿ ಅವರು, ಪ್ರಸಕ್ತ ಅಧೀವೇಶನದಲ್ಲಿ ರಾಜ್ಯ ಸರಕಾರ ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳದಿದ್ದರೇ ಈ ವಾರಾಂತ್ಯದಲ್ಲಿ ಸುವರ್ಣ ಸೌಧದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ಸುವರ್ಣ ಸೌಧ ನಿಮರ್ಿಸುವಲ್ಲಿ ಅತ್ಯಂತ ಆಸಕ್ತಿ ತೋರಿದ ಎಚ್.ಡಿ.ಕುಮಾರಸ್ವಾಮಿ ಅವರೇ ಈಗ ಮತ್ತೆ ಮುಖ್ಯಮಂತ್ರಿಗಳಾಗಿದ್ದಾರೆ. ಸುವರ್ಣ ಸೌಧಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷದ ನಾಯಕರುಗಳು ಒಗ್ಗಟ್ಟಾಗಿ ಸುವರ್ಣ ಸೌಧಕ್ಕೆ ಕಾಯಕಲ್ಪ ಕಲ್ಪಿಸುವ ಒಮ್ಮತದ ನಿರ್ಣಯ ಕೈಗೊಂಡು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.
ಈ ಭಾಗದ ಜನರ ಬೇಡಿಕೆಯೆಂತೆ ರಾಜ್ಯ ಸರಕಾರದ ಪ್ರಮುಖ ಇಲಾಖೆಗಳ ಕಾರ್ಯದಶರ್ಿಗಳ ಮಟ್ಟದ ಅಧಿಕಾರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು. ವಿವಿಧ ಇಲಾಖೆಗಳ ಮಹತ್ವದ ನಿರ್ಣಯಗಳನ್ನು ಸುವರ್ಣ ಸೌಧದಲ್ಲಿ ಕೈಗೊಳ್ಳುವಂತಾಗಬೇಕು. ಸುವರ್ಣ ಸೌಧವು ಬೆಂಗಳೂರಿನ ವಿಧಾನಸೌಧದಂತೆ ಸದಾ ಲವಲವಿಕೆಯಿಂದ ಕೂಡಿರುವಂತಾಗಬೇಕು ಎಂದು ಒತ್ತಾಯಿಸಿದರು.
ಸೋಮವಾರದಂದ ಆರಂಭವಾಗಿರುವ ಅಧಿವೇಶನದಲ್ಲಿ ಉತ್ತರ ಕನರ್ಾಟಕದ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳು ಈ ಕುರಿತು ರಾಜ್ಯ ಸರಕಾರದ ಮೇಲೆ ಪಕ್ಷಾತೀತ ಒತ್ತಡ ತರಬೇಕು. ರಾಜ್ಯ ಸರಕಾರ 3-4 ದಿನಗಳಲ್ಲಿ ಈ ಬಗ್ಗೆ ವಿಧಾನ ಸಭೆಯಲ್ಲಿ ಚಚರ್ೆ ಆರಂಭಿಸದಿದ್ದರೇ ಮತ್ತು ಈ ಭಾಗದ ಶಾಸಕರು ಸದನಗಳಲ್ಲಿ ಈ ವಿಷಯ ಪ್ರಸ್ತಾಪಿಸದಿದ್ದರೇ ಈ ವಾರಾಂತ್ಯದಲ್ಲಿ ಸಮಿತಿಯ ಮುಖಂಡರು ಸಭೆ ಸೇರಿ ಸುವರ್ಣ ಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸುವ ದಿನಾಂಕವನ್ನು ನಿಗದಿ ಪಡಿಸಲಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ಉತ್ತರ ಕನರ್ಾಟಕ ಹೋರಾಟ ಸಮಿತಿಯ ಅನೇಕ ಮುಖಂಡರುಗಳು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವದರಿಂದ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಕಾರಣಗಳಿಗಾಗಿ ಉತ್ತರ ಕನರ್ಾಟಕದ ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈಗ ಮತ್ತೆ ಹೋರಾಟಕ್ಕೆ ಚಾಲನೆ ನೀಡಲಾಗಿದೆ. ಹೋರಾಟಕ್ಕೆ ತಾಕರ್ಿಕ ಅಂತ್ಯ ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಉತ್ತರ ಕನರ್ಾಟಕದ ಬಗ್ಗೆ ರಾಜ್ಯ ಸರಕಾರಗಳ ನಿರ್ಲಕ್ಷ ಮುಂದುವರೆದಿದೆ ಎಂಬುದಕ್ಕೆ ರಾಜ್ಯ ಸಚಿವ ಸಂಪುಟ ರಚನೆ ಸಾಕ್ಷಿಯಾಗಿದೆ. ಹೋರಾಟದ ಮೂಲಕ ನ್ಯಾಯ ಪಡೆಯಬೇಕಾಗಿದೆ ಎಂದರು.
ಇನ್ನೋರ್ವ ಮುಖಂಡ ಭೀಮಪ್ಪ ಗಡಾದ ಮಾತನಾಡಿ, ಈ ಭಾಗದ ಜನರ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಬೇಡಿಕೆಗಳ ಈಡೇರಿಕೆಗಾಗಿ ಮತ್ತೆ ಹೋರಾಟದ ದಾರಿ ಕಂಡುಕೊಳ್ಳಲಾಗುತ್ತಿದೆ. ಈಗ ಮತ್ತೆ ಆರಂಭವಾಗಲಿರುವ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಬೇಡಿಕೆ ಈಡೇರುವವರೆಗೆ ಹೋರಾಟ ನಿರಂತರವಾಗಿಸಲು ನಿರ್ಧರಿಸಲಾಗಿದೆ ಎಂದರು.