ಮಹಾಲಿಂಗಪುರ: ಭ್ರಷ್ಟಾಚಾರ ರಹಿತ ಮೋದಿ ಆಯ್ಕೆಗೆ ಮತ್ತೊಮ್ಮೆ ಶ್ರಮಿಸಬೇಕಾಗಿದೆ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿಕೆ

ಲೋಕದರ್ಶನ ವರದಿ

ಮಹಾಲಿಂಗಪುರ 12: ಭ್ರಷ್ಟಾಚಾರ ರಹಿತ ತಾರತಮ್ಯವಿಲ್ಲದ ಒಂದೇ ಒಂದು ಹಗರಣವಿಲ್ಲದ ಹಾಗೂ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ ದೇಶದ ಪ್ರಧಾನಿ ಯಾರಾದರೂ ಇದ್ದರೇ ಅದು ನರೇಂದ್ರ ಮೋದಿಜಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಹೇಳಿದರು.

ಬಾಗಲಕೋಟ ಬಿಜೆಪಿಯ ಪಿ.ಸಿ. ಗದ್ದಿಗೌಡರ ಪರ ಲೋಕಸಭಾ ಚುನಾವಣೆ ಪ್ರಯುಕ್ತವಾಗಿ ಮಹಾಲಿಂಗಪುರ ನಗರ ಹಾಗೂ ಸೈದಾಪೂರ ಜಿ.ಪಂ. ಭೂತಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಎಪ್ರಿಲ್ 10 ರಂದು ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಮಾತನಾಡುತ್ತ ಹಿಂದೂ ಧರ್ಮವನ್ನು ಪೂಜಿಸಿ ಅನ್ಯ ಧರ್ಮಗಳನ್ನು ಗೌರವದಿಂದ ಹಾಗೂ ಸಮಾನವಾಗಿ ಕಂಡು ಅಭಿವೃದ್ಧಿಯಲ್ಲಿಯೂ ಲಿಂಗ ತಾರತಮ್ಯ ಮಾಡದೆ ದೇಶದ ಹೆಣ್ಣು ಮಕ್ಕಳು ಸ್ವಾಭಿಮಾನದ ಸಂಕೇತವಾಗಿದ್ದಾರೆ. ಬಯಲು ಶೌಚವನ್ನು ಹೋಗಲಾಡಿಸಿ ಪ್ರತಿ ಮನೆಗೆ ಶೌಚಾಲಯ ನಿಮರ್ಿಸುವ ಯೋಜನೆಯೊಂದಿಗೆ ಅವರ ಕಣ್ಮನಿಯಾಗಿದ್ದಾರೆ.

350 ಜನ ಉಗ್ರರನ್ನು ಹಾಗೂ ಅವರ ನೆಲೆಗಳನ್ನು ಧ್ವಂಸ ಮಾಡಿ ಜಗತ್ತಿನ ಎಲ್ಲ ರಾಷ್ಟ್ರಗಳ ಬೆಂಬಲ ದೊರೆತು ಜಗತ್ತಿನ ನಾಯಕರಾದರು. 156 ದೇಶಗಳ ನಾಯಕರು ಮತ್ತೊಮ್ಮೆ ಭಾರತದಲ್ಲಿ ಮೋದಿಯವರು ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಆದ್ದರಿಂದ ದೇಶದ ಮೂಲೆ ಮೂಲೆಗಳಿಂದ ಮೋದಿ ಮೋದಿ ಹಾಗೂ ಭಾರತ ಮಾತಾಕೀ ಜೈ ಎನ್ನುವ ಘೋಷಣೆಗಳು ಮಾತ್ರ ಮೊಳಗುತ್ತಿವೆ. ಈ ಸಾರಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಪಿ.ಸಿ. ಗದ್ದಿಗೌಡರರನ್ನು ಬಹುಮತದಿಂದ ಆರಿಸಿ ತರುವ ಸಲುವಾಗಿ ಅವಿರತ ಶ್ರಮವನ್ನು ಭೂತಮಟ್ಟದ ಕಾರ್ಯಕರ್ತರು ಮಾಡಬೇಕಾಗಿದೆ. ಆಗ ಮಾತ್ರ ದೇಶಕ್ಕೆ ಸ್ಥಿರ ಹಾಗೂ ಸುಭದ್ರ ಸರಕಾರವನ್ನು ನೀಡಬಹುದು.

ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಮಾತನಾಡಿ 24 ಗಂಟೆಗಳಲ್ಲಿ 18 ಗಂಟೆ ಕೆಲಸ ಮಾಡಿ ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಯವರು ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ 75 ವರ್ಷಗಳ ಆಡಳಿತದಲ್ಲಿ ದೇಶ 56 ನೇ ಸ್ಥಾನಕ್ಕೆ ಏರಿತ್ತು. ನಮ್ಮ ಸರಕಾರ ಬಂದ ನಂತರ 5 ನೇ ಸ್ಥಾನಕ್ಕೆ ಏರಿ ಆಥರ್ಿಕ ಸ್ಥಿತಿಯು ಸುಧಾರಿಸಿದೆ. ಅಲ್ಲದೆ ಬಡತನದಲ್ಲಿ ಬೆಳೆದ ಮೋದಿ ಪ್ರತಿ ಬಡ ಕುಟುಂಬಕ್ಕೆ ಎಲ್.ಪಿ.ಜಿ. ಗ್ಯಾಸ್ ಉಚಿತವಾಗಿ ನೀಡಿದ್ದಾರೆ. 

ಗಾಂಧಿ ಪರಿವಾರದವರು ಪಾಶ್ಚಾತ್ಯ ಸಂಸ್ಕೃತಿಯನ್ನುಳ್ಳವರು ಆದ್ದರಿಂದ ನಮ್ಮ ದೇಶದ ಸ್ಥಿತಿ-ಗತಿ ಬಗ್ಗೆ ಏನೂ ಅರಿವಿಲ್ಲ. ಕೇವಲ ಗರೀಬಿ ಹಟಾವೋ ಎನ್ನುವ ಘೋಷಣೆ ಹೇಳುತ್ತ ಜನರನ್ನು ಮರಳು ಮಾಡುತ್ತಿದ್ದಾರೆ ಎಂದರು. ಇಲ್ಲಿಯವರೆಗೂ ಕನರ್ಾಟಕ ರೈತನ ಸಾಲ ಮನ್ನಾ ಆಗಿಲ್ಲ. ಋಣಮುಕ್ತ ಪತ್ರವನ್ನು ಬ್ಯಾಂಕಿನವರೇ ಕೊಡಬೇಕು. ಆದರೆ ನಾವು ಸರಕಾರದಿಂದ ನೀಡುತ್ತೇವೆಂದು ಸುಳ್ಳು ಆಶ್ವಾಸನೆ ರೈತರಿಗೆ ಕೊಡುತ್ತಿದ್ದಾರೆ. ಇದರಿಂದ ರೈತರಿಗೆ ಬೊಗಳೆ ಬಿಡುತ್ತಿರುವ ಸರಕಾರದಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಮಾಮರ್ಿಕವಾಗಿ ನುಡಿದು ಕಾರ್ಯಕರ್ತರಿಗೆ 5 ವರ್ಷಗಳ ಮೋದಿ ಸರಕಾರದ ಕೆಲಸಗಳನ್ನು ಮತದಾರರಿಗೆ ವಿವರಿಸಿ ಅವರ ಮನ ವೊಲಿಸಿ ಓಟ ಮಾಡಲು ತಿಳಿಸಿದರು.

ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಮಾತನಾಡಿ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡರು. ಯಾರ್ಯಾರು ತಮ್ಮ ತಮ್ಮ ವಾರ್ಡಗಳಲ್ಲಿ ಮಾಡಿದ ಪ್ರಚಾರದ ಗುಣಮಟ್ಟವನ್ನು ಕೇಳಿ ತಿಳಿದರು. ಇನ್ನೂ ವಿಶ್ರಾಂತಿ ಮಾಡುವ ಕಾಲವಲ್ಲ. ಹಗಲಿರುಳು ಶ್ರಮಿಸಿ ಬಿಜೆಪಿಯ ಹುರಿಯಾಳನ್ನು ಗೆಲ್ಲಿಸುವತ್ತ ಸಾಗಬೇಕಾಗಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಬಿಜೆಪಿಯ ಅಭ್ಯಥರ್ಿ ಪಿ. ಸಿ. ಗದ್ದಿಗೌಡರ ಮಾತನಾಡಿ ಕಾಂಗ್ರೆಸ್ನವರು ದಶಕಗಳಿಂದ ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ಮಟ್ಟ ಹಾಕುತ್ತೇವೆಂದು ಹೇಳುತ್ತಲೇ ಬಂದಿದ್ದಾರೆ. ಮೋದಿಜಿಯವರು ಜಿ.ಎಸ್.ಟಿ. ತರುವ ಮುಖಾಂತರ ಕಪ್ಪು ಕುಳಗಳಿಗೆ ಕಡಿವಾಣ ಹಾಕಿ ಆ ಹಣವನ್ನು ಯೋಜನೆಗಳಿಗೆ ಹಾಕಿದ್ದಾರೆ. ತಕ್ಕಮಟ್ಟಿಗೆ ಭ್ರಷ್ಟಾಚಾರ ತಗ್ಗುತ್ತಿದ್ದು, ಇದನ್ನು ಕಾಂಗ್ರೆಸ್ನವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ಮಹಾಘಟಬಂಧನ ಮಾಡಿಕೊಂಡು ಮೋದಿಜಿಯವರನ್ನು ಸದೆ ಬಡೆಯುವ ಪ್ರಯತ್ನವನ್ನು ನಡೆಸಿದ್ದಾರೆ. ಇದರಿಂದ ದೇಶಕ್ಕೆ ಅಪಾಯವೇ ಹೊರತು ಪ್ರಯೋಜನವಿಲ್ಲ. 

1500 ಕಾನೂನುಗಳನ್ನು ತಿದ್ದುಪಡಿ ಮಾಡುವ ಮುಖಾಂತರ ಆಥರ್ಿಕ ರಂಗವು ಪುನಶ್ಚೇತನಗೊಂಡಿದೆ. ಸರಕಾರದ ಯೋಜನೆಗಳು ಕಟ್ಟ ಕಡೆ ಸಾಮಾನ್ಯನಿಗೆ ತಲುಪುವ ಸಲುವಾಗಿ ದಲ್ಲಾಳಿಗಳ ಕಾಟ ತಪ್ಪಿಸುವ ಆಧಾರ ಕಾರ್ಡ ಲಿಂಕ್ ಮಾಡುವ ಮುಖಾಂತರ ಬಡವರ ಭಾಗ್ಯದಾತರಾಗಿದ್ದಾರೆ. ಇದರಿಂದ ಅರ್ಹ ವ್ಯಕ್ತಿಗಳಿಗೆ ಪ್ರಯೋಜನಗಳು ಲಭಿಸುತ್ತಿವೆ. 

ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿ ಹುಬ್ಬಳ್ಳಿ-ಗದಗ ಡಬ್ಲಿಂಗ್ ಲೈನ್, 4 ಓವರ್ ಬ್ರಿಜ್ಗಳು, ಪ್ರವಾಸೋದ್ಯಮವನ್ನು ಬೆಳೆಸುವ ಸಲುವಾಗಿ ಬದಾಮಿ, ಪಟ್ಟದಕಲ್ಲು, ಐಹೊಳೆ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದಜರ್ೆಗೆ ಏರಿಸಲಾಗಿದೆ. ಬದಾಮಿ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ, ಬೆಳಗಾವಿ-ಬಾಸರ್ಿ ರಸ್ತೆ ಮೇಲ್ದಜರ್ೆಗೆ, ಗೋವಾ-ಹೈದರಾಬಾದ ಚತುಷ್ಟಥ ಹೆದ್ದಾರಿ, ರಸ್ತೆ ನಿಧಿಯಿಂದ 114 ಕೋಟಿ ಹಣ ಕ್ಷೇತ್ರದಲ್ಲಿ ವಿನಿಯೋಗ ಮಾಡಲಾಗಿದೆ. ಬಾಗಲಕೋಟ ಹೊಸ ಸ್ಟೇಶನ್ಗೆ 10 ಕೋಟಿ, ಕುಡಿಯುವ ನೀರಿನ ವ್ಯವಸ್ಥೆಗೆ 125 ಕೋಟಿ, ಹೊಳೆ ಆಲೂರು ಬ್ರೀಜ್ 35 ಕೋಟಿ, ಬದಾಮಿ ಅಭಿವೃದ್ಧಿಗೆ 35 ಕೋಟಿ, ನೇಕಾರ ವರ್ಗಕ್ಕೆ ಹಲವಾರು ಯೋಜನೆಗಳು ಹಾಗೂ ಪಾಸ್ಪೋಟರ್್ ಆಫೀಸ್ ಬಾಗಲಕೋಟದಲ್ಲಿ ತೆರೆಯಲಾಗಿದೆ.

ಬಾಗಲಕೋಟ-ಕುಡಚಿ ರೇಲ್ವೆ ಖಜ್ಜಿಡೋಣಿಯವರೆಗೆ ಸಾಗಿ ಬಂದಿದ್ದು, ಇನ್ನು ಜಮಖಂಡಿ ಉಪ ವಿಭಾಗದ ಜಮೀನುಗಳನ್ನು ಕನರ್ಾಟಕ ಸರಕಾರಕ್ಕೆ ಎಷ್ಟು ಮನವಿ ಮಾಡಿದರೂ ಕೇಂದ್ರಕ್ಕೆ ಹಸ್ತಾಂತರಿಸದೆ ಯೋಜನೆಯ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣರಾಗಿದ್ದಾರೆ. ಆದ್ದರಿಂದ ಮುಂದಿನ ದಿನಮಾನಗಳಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಕಾರ್ಯಕರ್ತರು ಶ್ರಮಿಸಿ ಮತ್ತೊಮ್ಮೆ ನನ್ನನ್ನು ಚುನಾಯಿಸಿ ಮೋದಿಯವರ ಕೈಯನ್ನು ಬಲಪಡಿಸಬೇಕು ಎಂದು ಕೇಳಿಕೊಂಡರು.

ವೇದಿಕೆಯ ಮೇಲೆ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೊಳ್ಳಿ, ಮಾಜಿ ಜಿ.ಪಂ. ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಕೋಳಿಗುಡ್ಡ, ನೇಕಾರರ ನಾಯಕ ಮನೋಹರ ಶಿರೋಳ, ಪುರಸಭೆ ಸದಸ್ಯ ರವಿ ಜವಳಗಿ, ಪ್ರಕಾಶ ಜೀರಗಾಳ, ಬನಪ್ಪಗೌಡ ಪಾಟೀಲ, ಮಾರುತಿ ಕರೋಶಿ, ನಗರದ ನೂತನ ಮಹಿಳಾ ಮೋರ್ಚಾ  ಅಧ್ಯಕ್ಷೆ ಸುವಣರ್ಾ ಆಸಂಗಿ, ಶೇಖರ ಅಂಗಡಿ, ಜಿ. ಎಸ್. ಗೊಂಬಿ, ಇನ್ನೂ ಹಲವರು ಇದ್ದರು.