ಲೋಕದರ್ಶನ ವರದಿ
ಸಿರುಗುಪ್ಪ12: ಮದರಸಾ ಶಿಕ್ಷಣ ಪದ್ಧತಿಯ ಅಮೂಲಾಗ್ರ ಬದಲಾವಣೆಗೆ ಭಾರತ ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ, ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಕೇಂದ್ರ ಕೌನ್ಸಿಲ್ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಅಖಿಲ ಭಾರತ ಮುಸ್ಲಿಂ ಶಿಕ್ಷಣ ಸಂಸ್ಥೆ ತಾಲ್ಲೂಕು ಸದಸ್ಯರಾದ ಹಾಜಿ ಅಬ್ದುಲ್ ನಬಿ ತಿಳಿಸಿದ್ದಾರೆ.
ಸಿರುಗುಪ್ಪ ತಾಲ್ಲೂಕು ಪಂಚಾಯತ್ ತಾಲ್ಲೂಕು ಚಂಬರ್ನಲ್ಲಿ ಅವರು ಮಾತನಾಡಿ ವಿಶೇಷ ಗುರುತಿನೊಂದಿಗೆ ಜಿಪಿಎಸ್ ಜಿಯೋ ಟ್ಯಾಗಿಂಗ್ ಮೂಲಕ ದೇಶದಲ್ಲಿನ ಮದರಸಾಗಳನ್ನು ಗುರುತಿಸುವುದು ಹಾಗೂ ಹಿಂದಿನ ಶೈಕ್ಷಣಿಕ ಅಗತ್ಯಗಳಿಗೆ ತಕ್ಕಂತೆ ಅವುಗಳ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಯೋಜನೆಯ ಪ್ರಮುಖ ಅಂಶವಾಗಿದೆ. ನವದೆಹಲಿ ಸ್ಕೀಮ್ ಟು ಪ್ರೊವೈಡ್ ಕ್ವಾಲಿಟಿ ಎಜುಕೇಷನ್ ಇನ್ ಮದರಸಾ ಎಸ್ಪಿಕ್ಯೂಇಎಂ ಹೆಸರಿನ ಸುಧಾರಣಾ ಯೋಜನೆಯಡಿ ಅನೇಕ ಕ್ರಮಗಳಿಗೆ ಭಾರತ ಸಕರ್ಾರ ಮುಂದಾಗಿದೆ.
ಕೇಂದ್ರದ ಅನುದಾನ ಪಡೆಯಬೇಕೆಂದರೆ ಮದರಸಾಗಳನ್ನು ಇನ್ನು ಮುಂದೆ ಮದರಸಾ ಬೋಡರ್್ ಅಥವಾ ರಾಜ್ಯ ಶಿಕ್ಷಣ ಮಂಡಳಿಗಳಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ, ರಾಷ್ಟ್ರೀಯ ಶಿಕ್ಷಣ ಪದ್ಧತಿಗೆ ಸರಿಸಮನಾಗಿ ಮದರಸಗಳಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ, ಎಂದು ಭಾರತ ಸಕರ್ಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ.
ಈಗಾಗಲೇ ರಾಜ್ಯ ಸಕರ್ಾರಗಳು ಈ ಸಂಬಂಧ ಪ್ರಸ್ತಾವಗಳನ್ನು ಸಲ್ಲಿಸಿದ್ದು ಅವುಗಳ ಅಧ್ಯಾಯನ ನಡೆಸಲಾಗುತ್ತಿದೆ. ಬಜೆಟ್ ಅನುದಾನದ ಮೇಲೆ ಮದರಸಾಗಳ ಶಿಕ್ಷಣ ಗುಣಮಟ್ಟ ಸುಧಾರಣೆ ಯೋಜನೆಯ ರೂಪುರೆಷೆ ಸಿದ್ಧಗೊಳ್ಳಲಿದೆ 2018-2020 ಕೆ ಎಸ್ಪಿ ಕ್ಯೂಇಎಂ ಅನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ, ಇದರ ಅನುಮತಿಗೆ ಮಾರ್ಗದಶರ್ಿ ಸೂತ್ರಗಳು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ನುಡಿದರು.
ಭಾರತ ಸಕರ್ಾರದ ಈ ಕ್ರಮಕ್ಕೆ ಈಗಾಗಲೇ ಕೆಲ ಮದರಸಾಗಳು ವಿರೋಧ ವ್ಯಕ್ತಪಡಿಸಿವೆ, ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ ಮದರಸಾಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡಲಾಗುತ್ತಿದೆ, ಎಂದು ಅವುದೂರಿವೆ ಎಂದರು. ಲೋಕ ಶಿಕ್ಷಣ ಕ್ಷೇತ್ರ ಸಂಯೋಜಕರಾದ ಜೆ.ನಾಗೇಂದ್ರ ಗೌಡ ಸಾಕ್ಷರತಾ ಕಾರ್ಯಕರ್ತರು ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫೀಕ್ ,ಮಹಮ್ಮದ್ ನೌಶಾದ್ ಅಲಿ, ಮುಂತಾದವರು ಉಪಸ್ಥಿತರಿದ್ದರು.