ಸ್ಥಳೀಯ ಸಂಸ್ಥೆ ಚುನಾವಣೆ : ಲೈಸೆನ್ಸ್ ಇರುವ ಶಸ್ತ್ರಾಸ್ತ್ರ ಠೇವಣಿ ಮುಂದುವರಿಕೆಗೆ ಆದೇಶ

ಧಾರವಾಡ.15: 2019 ರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಿಮಿತ್ತ ನವಲಗುಂದ ಪುರಸಭೆ, ಕಲಘಟಗಿ ಪಟ್ಟಣ ಪಂಚಾಯತ್ ಮತ್ತು ಅಳ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳ ಪರವಾನಿಗೆದಾರರು ತಾವು ಹೊಂದಿದ ಶಸ್ತ್ರಾಸ್ತ್ರಗಳನ್ನು ಮೆ 27 ರವರೆಗೆ ತಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣ ಇರಿಸಬೇಕೆಂದು ಆದೇಶಿಸಿರುವುದನ್ನು ತಿದ್ದುಪಡಿ ಮಾಡಿ ಮೇ 28 ರಿಂದ ಮೆ 31 ರ ವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದೀಪಾ ಚೋಳನ್ ಅವರು ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.