ಸಾಹಿತ್ಯರತ್ನ ದಿ|| ಚಿ.ಉದಯಶಂಕರ್ ಅವರ 25ನೇ ಪುಣ್ಯಸ್ಮರಣೆಯ ಅಂಗವಾಗಿ ಸ್ವರಾಂಜಲಿ ಕಾರ್ಯಕ್ರಮ


ಬಳ್ಳಾರಿ05: ನಗರದಲ್ಲಿರುವ ರಾಘವ ಕಲಾಮಂದಿರದ ಸಂಗೀತಹಾಲ್ನಲ್ಲಿ ಸಾಹಿತಿಗಳ, ಸಾಹಿತ್ಯಾಭಿಮಾನಿಗಳ ನಡುವೆ ಕಳೆದ ರಾತ್ರಿ  ಪ್ರಮುಖ ಕನ್ನಡ ಚಲನಚಿತ್ರ ಸಾಹಿತಿ, ಸಾಹಿತ್ಯರತ್ನ ದಿ|| ಚಿ.ಉದಯಶಂಕರ್ ಅವರ 25ನೇ ಪುಣ್ಯಸ್ಮರಣೆಯ ಮತ್ತು ದಿ|| ಪಂ. ಪುಟ್ಟರಾಜ ಕವಿ ಗವಾಯಿಗಳ ಪುಣ್ಯಸ್ಮರಣೆಯ ಅಂಗವಾಗಿ ರಘುರಾಮ ಕಲಾಮಿತ್ರ ವೃಂದ ಮತ್ತು ಸಾಹಿತ್ಯಾಭಿಮಾನಿಗಳು ಸಂಯುಕ್ತವಾಗಿ ಏರ್ಪಡಿಸಿದ ಸ್ವರಾಂಜಲಿ ಕಾರ್ಯಕ್ರಮವು ಪ್ರೇಕ್ಷಕರನ್ನು ಮನರಂಜಿಸಿದೆ.

  ಸ್ವರಾಂಜಲಿ ಕಾರ್ಯಕ್ರಮದಲ್ಲಿ ಮೊದಲಿಗೆ ಖಾಸಿಂಅಲೀ ಅವರು  ಪ್ರಾರ್ಥನೆ ಹಾಡಿದರು. ಆನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳು ದಿ|| ಶ್ರೀಪಂ.ಪುಟ್ಟರಾಜಗವಾಯಿಗಳ ಮತ್ತು ದಿ|| ಚಿ.ಉದಯಶಂಕರ್ ಅವರ ಭಾವಚಿತ್ರಗಳಿಗೆ ಪುಷ್ಪಾಂಜಲಿ ಅಪರ್ಿಸಿದರು.

 ಬಳ್ಳಾರಿಯ ಪ್ರಖ್ಯಾತ ಹಿರಿಯ ವಕೀಲರು ಮತ್ತು ಚಲನಚಿತ್ರ ನಿಮರ್ಾಪಕರು ಆದ ಬಿ.ಆರ್.ನಟರಾಜ್ ಅವರು ಚಿ.ಉದಯಶಂಕರ್ ಅವರ ಬಗ್ಗೆ ಮಾತನಾಡುತ್ತಾ ಅವರು ಸರಸ್ವತೀ ಪುತ್ರರು, ಕನ್ನಡ ಚಲನಚಿತ್ರ ಸಾಹಿತ್ಯದಲ್ಲಿ ಅವರು ಮೇರು ಪರ್ವತ, ಅಂತಹ ಮಹಾನ್ ಸಾಹಿತಿಗಳು ಬಹಳ ವಿರಳ, ಅವರ ವಿದ್ಯಾಭ್ಯಾಸ ಕಡಿಮೆ ಆದರೂ ವಚನ ಸಾಹಿತ್ಯದ ಪ್ರಭಾವ ಅವರ ಮೇಲಿದೆಯೆಂದು, ಅವರ ಸಾಹಿತ್ಯವನ್ನು ನಾವು ಕೇಳಿದಾಗ ಹೊಸ ಪ್ರಶಾಂತವಾದ ಲೋಕಕ್ಕೆ ಹೋಗುತ್ತೇವೆ, ಇನ್ನು ನೂರು ವರ್ಷಗಳಾದರೂ ಅವರು ಬರೆದ ಅಂತಹ ಸಾಹಿತ್ಯ, ಹಾಡುಗಳು ನಾವು ಕೇಳಲು ಸಾಧ್ಯವಿಲ್ಲವೆಂದು ಹೇಳಿದರು. ಡಾ.ರಾಜ್ಕುಮಾರ್ ಮತ್ತು  ಅವರ  ಸ್ನೇಹವನ್ನು ನೆನಪಿಸಿದರು. ಚಲನಚಿತ್ರ ಸಾಹಿತ್ಯ ದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯುತ್ತದೆ ಎಂದರು.

ಆನಂತರ ಸ್ಥಳೀಯ ಕಲಾವಿದರು ಕೆ.ಎಸ್.ಸತ್ಯನಾರಾಯಣ, ಸಂಧ್ಯಾ ಕೋಲಾಚಲಂ, ಲಕ್ಷ್ಮೀ ದೇಸಾಯಿ, ವೀಣಾ ಆದೋನಿ, ರಾಘವೇಂದ್ರ ಗುಡದೂರು, ಖಾಸಿಂಅಲೀ, ಮಹಮ್ಮದ್ ರಫೀ, ಜಿತೇಂದ್ರ ಮುಂತಾದವರು ಚಿ.ಉದಯಶಂಕರ್ ಅವರು ರಚಿಸಿದ ಹಾಡುಗಳು ಮತ್ತು ಪುಟ್ಟರಾಜ ಕವಿ ಗವಾಯಿಗಳ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನಸುಗಳನ್ನು ರಂಜಿಸಿದರು. ಹಾಮರ್ೋನಿಯಂ ಪೋಲಕ್ಸ್ ಹನುಮಂತಪ್ಪ, ತಬಲಾ ಸಾಥ್ ಸತ್ಯನಾರಾಯಣ, ಈ ಕಾರ್ಯಕ್ರಮದ ನಿರೂಪಣೆಯನ್ನು ಅಣ್ಣಾಜಿ ಕೃಷ್ಣಾರೆಡ್ಡಿ ನೆರವೇರಿಸಿದರು. ನೇತಿ ರಘುರಾಮ ನಿರ್ವಹಣೆ ಮಾಡಿದರು. ಆನಂತರ ರಘುರಾಮ ಕಲಾಮಿತ್ರವೃಂದದಿಂದ ಕಲಾವಿದರಿಗೆ, ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ಕೊಡಲಾಯಿತು.

ಈ ಕಾರ್ಯಕ್ರಮದಲ್ಲಿ ವಕೀಲರು, ಚಲನಚಿತ್ರ ನಿಮರ್ಾಪಕರು. ಬಿ.ಆರ್.ನಟರಾಜ್, ಉದಯಶಂಕರ್ ಅವರ ಅಣ್ಣನ ಮಗಳಾದ ರಂಜನೀ ನಟರಾಜ್, ವೀರಶೈವ ಸಂಘದ ಅಧ್ಯಕ್ಷರು   ಚೋರನೂರು ಕೊಟ್ರಪ್ಪ, ಹಿರಿಯ ಕಲಾವಿದರು ರಮೇಶ್ಗೌಡ ಪಾಟೀಲ್, ಮೋಹನ್ರೆಡ್ಡಿ, ಎ.ಎಂ.ಪಿ.ವೀರೇಶಯ್ಯ ಸ್ವಾಮಿ, ಬಸವರಾಜ, ಲಾಲ್ರೆಡ್ಡಿ, ಪರಶುರಾಮ ಹಂದ್ಯಾಳ್, ಬಿ.ಎಂ.ಬಸವರಾಜ್, ಮಂಜುನಾಥ್ ಗೋವಿಂದವಾಡ, ನಾಡಂಗ ಬಸವರಾಜ್, ಶಿವರುದ್ರಯ್ಯಸ್ವಾಮಿ, ಪಂಪಾಪತಿ ಇನ್ನಿತರರು ಪಾಲ್ಗೊಂಡರು.